ಕರ್ನಾಟಕ

karnataka

ETV Bharat / entertainment

'ರಾಘವೇಂದ್ರ ಸ್ಟೋರ್ಸ್​' ಟ್ರೇಲರ್​ ಔಟ್​: ಸಿಂಗಲ್​ ಸುಂದರನ ಮದುವೆ ಆಮಂತ್ರಣ ನೋಡಿ.. - Rishabh Shetty released the trailer

ನವರಸ ನಾಯಕ ಜಗ್ಗೇಶ್​ ಅಭಿನಯದ 'ರಾಘವೇಂದ್ರ ಸ್ಟೋರ್ಸ್​' ಸಿನಿಮಾದ ಟ್ರೇಲರ್​ ಅನ್ನು ರಿಷಬ್ ಶೆಟ್ಟಿ ಅನಾವರಣಗೊಳಿಸಿದ್ದಾರೆ.

rishabh
'ರಾಘವೇಂದ್ರ ಸ್ಟೋರ್ಸ್​'

By

Published : Apr 17, 2023, 7:24 PM IST

ಚಂದನವನದಲ್ಲಿ ನವರಸ ನಾಯಕ ಜಗ್ಗೇಶ್​ ಅಭಿನಯದ 'ರಾಘವೇಂದ್ರ ಸ್ಟೋರ್ಸ್​' ಸಿನಿಮಾ ಒಂದಲ್ಲೊಂದು ವಿಚಾರವಾಗಿ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದೆ 'ಸಿಂಗಲ್ ಸುಂದರ ಯಾವಾಗ ಹಾಕ್ತೀಯಾ ಉಂಗುರ' ಎಂಬ ಹಾಡನ್ನು ರಿಲೀಸ್​ ಮಾಡಿತ್ತು. ಇದೀಗ ಚಿತ್ರತಂಡ ರಾಘವೇಂದ್ರ ಸ್ಟೋರ್ಸ್​ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಈ ಚಿತ್ರದ ಟ್ರೇಲರ್​ ಅನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅನಾವರಣಗೊಳಿಸಿದ್ದಾರೆ.

"ಸಿಂಗಲ್ ಸುಂದರನ ಮದುವೆ ಆಮಂತ್ರಣವನ್ನ ಬಿಡುಗಡೆ ಮಾಡೋದಕ್ಕೆ ಬಹಳ ಖುಷಿ ಇದೆ, ಮದುವೆ ಪತ್ರಿಕೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಏಪ್ರಿಲ್ 28 ರಂದು ಮದುವೆಗೆ, ಕುಟುಂಬ ಸಮೇತರಾಗಿ ಬಂದು ಆಶೀರ್ವಾದ ಮಾಡಬೇಕು ಎಂದು ವಿನಂತಿ" ಎಂಬುದಾಗಿ ಕಾಂತಾರ ಸ್ಟಾರ್​ ಮನವಿ ಮಾಡಿದ್ದಾರೆ.

ಈ ಕಾಲದಲ್ಲಿ ಎಲ್ಲಾ ತರಹದ ಸೌಕರ್ಯ ಮತ್ತು ಸೌಲಭ್ಯ ಇದ್ದು ಹುಡುಗಿ ಸಿಗೋದು ಕಷ್ಟ. ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ದೊಡ್ಡ ಹುದ್ದೆಯಲ್ಲಿ ಇಲ್ಲದ ಹುಡುಗರು ಹುಡುಗಿಗಾಗಿ ಎಷ್ಟೆಲ್ಲಾ ಹುಡುಕಾಟ ನಡೆಸ್ತಾರೆ ಅಲ್ವಾ? ಇಂತಹದ್ದೇ ವಿಷಯವನ್ನು ಇಟ್ಟುಕೊಂಡು ರಾಘವೇಂದ್ರ ಸ್ಟೋರ್ಸ್ ಹೊಟೇಲ್ ಅಡುಗೆ ಭಟ್ಟನಿಗೆ ಹುಡುಗಿ ಹುಡುಕೋದಿಕ್ಕೆ ಏನೆಲ್ಲಾ ಚಾಲೆಂಜ್​ಗಳು ಎದುರು ಆಗುತ್ತವೆ ಎಂಬುದನ್ನೇ ಟ್ರೇಲರ್​ನಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ:'ತಾರಿಣಿ' ಮೂಲಕ ಮತ್ತೆ ಕನ್ನಡದಲ್ಲಿ ಮಮತಾ ರಾಹುತ್; ಸ್ಯಾಂಡಲ್​ವುಡ್​ಗೆ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ

ಮದುವೆ ಆಗದ ಹಯವದನ ಪಾತ್ರದಲ್ಲಿ ನವರಸ ನಾಯಕ ಜಗ್ಗೇಶ್ ಬಹಳ ನ್ಯಾಚುಲರ್ ಆಗಿ ಕಾಣಿಸಿಕೊಂಡಿದ್ದಾರೆ. ನೀರ್ ದೋಸೆ ಚಿತ್ರದ ಬಳಿಕ ಜಗ್ಗೇಶ್ ಹಾಗೂ ಹಿರಿಯ ನಟ ದತ್ತಣ್ಣ ಕಾಂಬಿನೇಷನ್ ಈ ಚಿತ್ರದಲ್ಲಿ ಹೊಸ ರೀತಿಯಲ್ಲಿ ಮಜಾ ನೀಡಲಿದೆ. ಇದರಲ್ಲಿ ಬರುವ ಪಂಚಿಂಗ್ ಡೈಲಾಗ್​ಗಳು ಅಂತೂ ಸಖತ್​ ಆಗಿವೆ.

ಇನ್ನು ಜಗ್ಗೇಶ್ ಮತ್ತು ದತ್ತಣ್ಣ ಅಲ್ಲದೇ ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ಮಿತ್ರ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ಆಗದ ಹಯವದನ ಜಗ್ಗೇಶ್​ನ ಕೈ ಹಿಡಿಯುವ ವಧುವಾಗಿ ಸಿಂಪಲ್ಲಾಗೊಂದು ಲವ್ ಸ್ಟೋರಿ, ಕಿರಗೂರಿನ ಗಯ್ಯಾಳಿಗಳು ಸಿನಿಮಾ ಖ್ಯಾತಿಯ ಶ್ವೇತಾ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ.

ರಾಜಕುಮಾರ, ಯುವರತ್ನ ಸಿನಿಮಾಗಳ ನಿರ್ದೇಶಕ ಸಂತೋಷ್ ಆನಂದ ರಾಮ್ ಕಥೆ, ಚಿತ್ರಕಥೆ ಬರೆದು ರಾಘವೇಂದ್ರ ಸ್ಟೋರ್ಸ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಬೆಂಗಳೂರು ಹಾಗು ಸಕಲೇಶಪುರದ ಸುಂದರ ತಾಣಗಳಲ್ಲಿ ಚಿತ್ರವನ್ನು ಛಾಯಾಗ್ರಾಹಕ ಶ್ರೀಶು ಕುದುವಳ್ಳಿ ಚಿತ್ರೀಕರಿಸಿದ್ದಾರೆ. ಅಜನೀಷ್ ಲೋಕನಾಥ್ ಸಂಗೀತ ನೀಡಿದ್ದಾರೆ. ಹೊಂಬಾಳೆ ಫಿಲ್ಮ್ಸ್​ ಸಂಸ್ಥೆ ನಿರ್ಮಾಪಕ ವಿಜಯ್ ಕಿರಂಗದೂರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಹೊಂಬಾಳೆ ಮತ್ತೊಂದು ಹಿಟ್​ ಚಿತ್ರವನ್ನು ನೀಡಲಿದೆ. ಇದೇ ಬರುವ 28 ರಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಚಿಂತಿಸಿದೆ.

ಇದನ್ನೂ ಓದಿ:ಸ್ಟೇಡಿಯಂನಲ್ಲಿ ಪ್ರೀತಿಯ ಕ್ಷಣ ಹಂಚಿಕೊಂಡ ಶಾರುಖ್​ ಮಕ್ಕಳು: ವಿಡಿಯೋಗೆ ಫ್ಯಾನ್ಸ್​ ಮೆಚ್ಚುಗೆ

ABOUT THE AUTHOR

...view details