ಕರ್ನಾಟಕ

karnataka

ETV Bharat / entertainment

ನಿರ್ದೇಶಕ ಅಶುತೋಷ್ ಗೋವಾರಿಕರ್ ಜೊತೆ ಕಾಣಿಸಿಕೊಂಡ ರಿಷಬ್​ ಶೆಟ್ಟಿ! - Rishab Shetty

ಜನಪ್ರಿಯ ನಿರ್ದೇಶಕ ಅಶುತೋಷ್ ಗೋವಾರಿಕರ್ ಜೊತೆ ನಟ ರಿಷಬ್ ಶೆಟ್ಟಿ ಕಾಣಿಸಿಕೊಂಡ ಹಿನ್ನೆಲೆ, ಮುಂದಿನ ಚಿತ್ರಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಳಗೊಂಡಿದೆ.

Rishab Shetty with Ashutosh Gowariker
ಅಶುತೋಷ್ ಗೋವಾರಿಕರ್ ಜೊತೆ ಕಾಣಿಸಿಕೊಂಡ ರಿಷಬ್​ ಶೆಟ್ಟಿ

By ETV Bharat Karnataka Team

Published : Jan 13, 2024, 2:49 PM IST

ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಮತ್ತು ಭಾರತೀಯ ಚಿತ್ರರಂಗದ ಜನಪ್ರಿಯ ನಿರ್ದೇಶಕ ಅಶುತೋಷ್ ಗೋವಾರಿಕರ್ ಶುಕ್ರವಾರ ಮುಂಬೈನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮುಂಬರುವ ಪ್ರಾಜೆಕ್ಟ್​ ಸುತ್ತ ಹಲವು ಊಹಾಪೋಹಗಳಿರುವ ಈ ಹೊತ್ತಲ್ಲಿ ಖ್ಯಾತ ನಿರ್ದೇಶಕ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ರಿಷಬ್ ಮತ್ತು ಅಶುತೋಷ್ ಇದೇ ಮೊದಲ ಬಾರಿಗ ಪ್ಯಾನ್ - ಇಂಡಿಯಾ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂದು ವರದಿ ಆಗಿದೆ. ವರದಿಗಳ ಪ್ರಕಾರ, ಇಬ್ಬರ ಹೆಸರು ಕೆಲ ಸಮಯದಿಂದ ಚರ್ಚೆಯಲ್ಲಿದ್ದು, ಫೈನಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಊಹಾಪೋಹಗಳಿಗೆ ತುಪ್ಪ ಸುರಿದಿದ್ದಾರೆ.

ಪಾಪರಾಜಿಗಳು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಟ - ನಿರ್ದೇಶಕ ರಿಷಬ್ ಶೆಟ್ಟಿ ಗ್ರೇ ಜೀನ್ಸ್, ವೈಟ್​ ಶರ್ಟ್, ಬ್ಲ್ಯಾಕ್​ ಶೂಸ್, ಬ್ಲ್ಯಾಕ್​ ಸನ್​ಗ್ಲಾಸ್​​​ನಲ್ಲಿ ಕಾಣಿಸಿಕೊಂಡು. ಹೆಚ್ಚಾಗಿ ಸಾಂಪ್ರದಾಯಿಕ (ಪಂಚೆ - ಶರ್ಟ್) ನೋಟದಲ್ಲಿ ಕಾಣಿಸಿಕೊಳ್ಳೋ ಡಿವೈನ್​ ಸ್ಟಾರ್​ ನಿನ್ನೆ ಸಖತ್​ ಹ್ಯಾಂಡ್ಸಮ್​ ಲುಕ್​ ಕೊಟ್ಟಿದ್ದಾರೆ. ನಿರ್ದೇಶಕ ಅಶುತೋಷ್ ಗೋವಾರಿಕರ್ ಕೂಡ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರೊಂದಿಗೆ ಹೊರಡುವ ಮುನ್ನ, ಕಾಂತಾರ ಸ್ಟಾರ್, ಪಾಪರಾಜಿಯತ್ತ ಕೈ ಬೀಸಿ ಅವರ ಕ್ಯಾಮರಾಗಳಿಗೆ ಕೈ ಬೀಸಿದರು.

ಜನಪ್ರಿಯ ನಿರ್ದೇಶಕ ಅಶುತೋಷ್ ಗೋವಾರಿಕರ್ ಅವರ ಮುಂದಿನ ಪ್ರಾಜೆಕ್ಟ್​​ ದಕ್ಷಿಣ ಭಾರತ ಚಿತ್ರರಂಗದ ಖ್ಯಾತನಾಮರ ಸುತ್ತ ಸುತ್ತುತ್ತಿದೆ ಎಂದು ಹೇಳಲಾಗಿದೆ. ಕಥಾಹಂದರದೊಳಗಿನ ಬಹುಮುಖ್ಯ ಪಾತ್ರಕ್ಕೆ ಜೀವ ತುಂಬುವ ದಕ್ಷಿಣದ ಖ್ಯಾತ ನಟನನ್ನು ಹೊಂದಲು ನಿರ್ದೇಶಕರು ಉತ್ಸುಕರಾಗಿದ್ದರು. ನಿರ್ದೇಶಕರ ಹುಡುಕಾಟಕ್ಕೆ ರಿಷಬ್ ಶೆಟ್ಟಿ ಸಂಪೂರ್ಣವಾಗಿ ಸರಿ ಹೊಂದುತ್ತಾರೆ ಅನ್ನೋದು ಸಿನಿಪ್ರಿಯರ ಅಭಿಪ್ರಾಯ. ಅದಾಗ್ಯೂ, ಚಿತ್ರತಂಡದಿಂದ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:ಹರಕೆ ಕೋಲ ಕೊಟ್ಟ 'ಕೊರಗಜ್ಜ' ಚಿತ್ರತಂಡ: ಶ್ರುತಿ, ಭವ್ಯ ಸೇರಿ ಚಿತ್ರತಂಡ ಭಾಗಿ

ಈ ಚಿತ್ರವನ್ನು ನಿರ್ಮಾಪಕ ವಿಷ್ಣು ವರ್ಧನ್ ಇಂದೂರಿ ನಿರ್ಮಿಸಲಿದ್ದಾರೆ. ಅದ್ಭುತ ಸಿನಿಮೀಯ ಅನುಭವ ನೀಡುವ ನಿಟ್ಟಿನಲ್ಲಿ ನಿರ್ಮಾಪಕರಿದ್ದಾರೆ. ವಿಷ್ಣು ವರ್ಧನ್ ಮತ್ತು ಇಡೀ ಚಿತ್ರತಂಡ ರಿಷಬ್ ಶೆಟ್ಟಿ ಅವರನ್ನು ಹೊಂದಲು ಥ್ರಿಲ್ ಆಗಿದ್ದಾರಂತೆ. ಕಾಂತಾರ ಅಭೂಪೂರ್ವ ಯಶಸ್ಸು ಕಂಡ ಹಿನ್ನೆಲೆ, ರಿಷಬ್ ಶೆಟ್ಟಿ ದೇಶಾದ್ಯಂತ ಭಾರಿ ಜನಪ್ರಿಯತೆ ಗಳಿಸಿದ್ದಾರೆ. ಅಶುತೋಷ್ ಗೋವಾರಿಕರ್ ಅವರು ಪೀರಿಯಾಡಿಕಲ್​ ಡ್ರಾಮಾ ರಚಿಸುವಲ್ಲಿ ಪರಿಣಿತರು. ಈ ಪ್ರತಿಭಾನ್ವಿತರು ಒಟ್ಟುಗೂಡಿದರೆ, ಅದ್ಭುತ ಚಿತ್ರ ತೆರೆ ಮೇಲೆ ರಾರಾಜಿಸೋದು ಪಕ್ಕಾ. ಹಾಗಾಗಿ, ಈ ಬಗ್ಗೆ ಅಧಿಕೃತ ಮಾಹಿತಿ ಕೊಡುವಂತೆ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ.

ಇದನ್ನೂ ಓದಿ:ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ಸಿನಿಮಾ ಮೇಲೆ ಕುತೂಹಲ: '45' ಶೂಟಿಂಗ್​ ಫೋಟೋಗಳಿಲ್ಲಿವೆ

ABOUT THE AUTHOR

...view details