ಚಂದನವನದಲ್ಲಿ 'ಕಾಂತಾರ' ಸಿನಿಮಾ ದೊಡ್ಡ ಮಟ್ಟದಲ್ಲೇ ಇತಿಹಾಸ ಸೃಷ್ಟಿಸಿದೆ. ಸಾಲು ಸಾಲು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಕಾಂತಾರ ಸಿನಿಮಾಗೆ ಮತ್ತೆರಡು ಪ್ರಶಸ್ತಿಗಳು ಸಂದಿವೆ. ನಟ ರಿಷಬ್ ಶೆಟ್ಟಿ 'ಒಟಿಟಿ ಚೇಂಜ್ ಮೇಕರ್ಸ್' ಕಾರ್ಯಕ್ರಮದಲ್ಲಿ 'ಗೇಮ್ ಚೇಂಜರ್' ಅವಾರ್ಡ್ ಪಡೆದುಕೊಂಡಿದ್ದಾರೆ. ಕಾಂತಾರ ನಾಯಕಿ ಸಪ್ತಮಿ ಗೌಡಗೆ 'ರೈಸಿಂಗ್ ಸ್ಟಾರ್ ಆಫ್ ದಿ ಇಯರ್' ಪ್ರಶಸ್ತಿ ಲಭಿಸಿದೆ.
ವೇದಿಕೆಯಲ್ಲಿ ಅವಾರ್ಡ್ ಸ್ವೀಕರಿಸಿ ಮಾತನಾಡಿರುವ ರಿಷಬ್ ಶೆಟ್ಟಿ, ಪ್ರೇಕ್ಷಕರು ನನ್ನ ಪಾಲಿನ ಗೇಮ್ ಚೇಂಜರ್ ಎಂದು ಹೇಳಿದ್ದಾರೆ. ಜೊತೆಗೆ ಪ್ರಶಸ್ತಿ ಪಡೆದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಟ, "ಕನ್ನಡಿಗರ ಆಶೀರ್ವಾದ ಮತ್ತು ಬೆಂಬಲಕ್ಕೆ ನಾನು ಸದಾ ಚಿರಋಣಿ" ಎಂದು ಬರೆದುಕೊಂಡಿದ್ದಾರೆ. ಇನ್ನು ಸಪ್ತಮಿ ಗೌಡ ಕೂಡ ಪ್ರಶಸ್ತಿ ಹಿಡಿದ ಫೋಟೋವನ್ನು ಶೇರ್ ಮಾಡಿಕೊಂಡು, "ನನಗೆ ರೈಸಿಂಗ್ ಸ್ಟಾರ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ಚೇಂಜ್ ಮೇಕರ್ಸ್ಗೆ ನನ್ನ ಧನ್ಯವಾದ. ಸ್ಪೆಷಲ್ ಥ್ಯಾಂಕ್ಸು ಟು ರಿಷಬ್ ಶೆಟ್ಟಿ, ಹೊಂಬಾಳೆ ಫಿಲ್ಮ್ಸ್ ಮತ್ತು ಇಡೀ ಕಾಂತಾರ ತಂಡಕ್ಕೆ" ಎಂದು ಕ್ಯಾಪ್ಶನ್ ಹಾಕಿಕೊಂಡಿದ್ದಾರೆ.
ಸಾಂಪ್ರದಾಯಿಕ ಲುಕ್ನಲ್ಲಿ ಕಾಂತಾರ ಸ್ಟಾರ್: ನಟ ರಿಷಬ್ ಶೆಟ್ಟಿ ಅಭಿಮಾನಿಗಳ ಮನಸ್ಸು ಗೆದ್ದದ್ದು ಪ್ರಶಸ್ತಿಯಿಂದಲ್ಲ. ಬದಲಾಗಿ ಅವರ ಸಾಂಪ್ರದಾಯಿಕ ಲುಕ್, ಭಾಷಣ ವಿಶೇಷವಾಗಿ ಕನ್ನಡಿಗರನ್ನು ಸೆಳೆದಿದೆ. ಬಿಳಿ ಬಣ್ಣದ ಪಂಚೆ ಮತ್ತು ಶರ್ಟ್ ಧರಿಸಿ ಟ್ರೆಡಿಷನಲ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಿರೂಪಕರು ಇಂಗ್ಲಿಷ್ನಲ್ಲಿ ಪ್ರಶ್ನೆ ಕೇಳಿದರೂ ಅವರು ಹಿಂದಿಯಲ್ಲೇ ಉತ್ತರಿಸಿ ಶೈನ್ ಆಗಿದ್ದಾರೆ. ಈ ಹಿನ್ನೆಲೆ ಇನ್ಸ್ಟಾಗ್ರಾಮ್ನಲ್ಲಿ ನಟನಿಗೆ ಪ್ರಶಂಸೆಯ ಸುರಿಮಳೆಯೇ ಹರಿದುಬರುತ್ತಿದೆ.
ಇದನ್ನೂ ಓದಿ:39ನೇ ವರ್ಷಕ್ಕೆ ಕಾಲಿಟ್ಟ 'ಆಸ್ಕರ್' ವಿಜೇತ ಗ್ಲೋಬಲ್ ಸ್ಟಾರ್ ರಾಮ್ ಚರಣ್