ಕರ್ನಾಟಕ

karnataka

'ಕನ್ನಡದ ಅತ್ಯುತ್ತಮ ಪ್ರೇಮಕಾವ್ಯಗಳಲ್ಲೊಂದು': ಸಪ್ತಸಾಗರದಾಚೆ ಎಲ್ಲೋ ಸಿನಿಮಾಗೆ ರಿಷಬ್​ ಶೆಟ್ಟಿ ಮೆಚ್ಚುಗೆ

By ETV Bharat Karnataka Team

Published : Sep 1, 2023, 4:29 PM IST

Updated : Sep 1, 2023, 4:35 PM IST

Rishab Shetty Post: ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ನಟ ರಿಷಬ್​ ಶೆಟ್ಟಿ ಗುಣಗಾನ ಮಾಡಿದ್ದಾರೆ.

Rishab shetty post about Sapta Sagaradaache Ello movie
ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಬಗ್ಗೆ ರಿಷಬ್​ ಶೆಟ್ಟಿ ಗುಣಗಾನ

ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ರಕ್ಷಿತ್​ ಶೆಟ್ಟಿ. ಇವರ ಹಲವು ಸಿನಿಮಾಗಳು ಪ್ರೇಕ್ಷಕರ ಮನ ತಲುಪುವಲ್ಲಿ ಯಶಸ್ವಿ ಆಗಿವೆ. ಪ್ರತಿ ಬಾರಿಯೂ ವಿಭಿನ್ನ ಕಥೆಗಳೊಂದಿಗೆ ಬರುವ ಶೆಟ್ಟಿ ಪ್ರೇಕ್ಷಕರ ಹೃದಯ ಆವರಿಸಿಕೊಳ್ಳುತ್ತಾರೆ. ನಟನ ಸಿನಿಮಾಗಳ ಕುರಿತು ಸಹಜವಾಗಿಯೇ ಪ್ರೇಕ್ಷಕರಲ್ಲಿ ಕುತೂಹಲ, ನಿರೀಕ್ಷೆಗಳಿರುತ್ತವೆ. ಅದರಂತೆ ಇಂದು 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಸ್ಯಾಂಡಲ್​ವುಡ್​ನಲ್ಲಿ ನಟ, ನಿರ್ದೇಶಕ ಹಾಗು ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಸಿಂಪಲ್​ ಸ್ಟಾರ್ ಸಿನಿಮಾಗಳಲ್ಲಿ ಹೊಸತನವಿರುತ್ತದೆ. ಸಿಂಪಲ್​ ಸ್ಟೋರಿಗೆ ಸ್ಪೆಷಲ್​ ಟಚ್​ ನೀಡುತ್ತಾರೆ. ಹೀಗಾಗಿ, ಕಥೆ ಸುಲಭವಾಗಿ ಪ್ರೇಕ್ಷಕರ ಮನ ಮುಟ್ಟುತ್ತದೆ. ಇವರ ಪ್ರತಿಭೆ, ಪರಿಶ್ರಮಕ್ಕೆ ರಾಷ್ಟ್ರೀಯ ಪ್ರಶಸ್ತಿ ಗೌರವವೂ ಸಂದಿದೆ. ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಗೆದ್ದುಕೊಂಡಿದೆ. ಇದೀಗ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾಗೆ (Sapta Sagaradaache Ello-Side A) ಸಕಾರಾತ್ಮಕ ಸ್ಪಂದನೆ ಸಿಗುತ್ತಿದೆ.

ರಿಷಬ್​ ಶೆಟ್ಟಿ ಮೆಚ್ಚುಗೆ:ಈ ಸಿನಿಮಾ ಬಗ್ಗೆ ಕಾಂತಾರಾ ಖ್ಯಾತಿಯ ಡಿವೈನ್​ ಸ್ಟಾರ್ ರಿಷಬ್​ ಶೆಟ್ಟಿ ಗುಣಗಾನ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ವೇದಿಕೆ ಇನ್​ಸ್ಟಾಗ್ರಾಮ್​ ಮತ್ತು Xನಲ್ಲಿ (ಹಿಂದಿನ ಟ್ವಿಟರ್), ''ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಬಗ್ಗೆ ಪದಗಳಲ್ಲಿ ವರ್ಣಿಸಲಾಗುತ್ತಿಲ್ಲ. ಕನ್ನಡದ ಅತ್ಯುತ್ತಮ ಪ್ರೇಮಕಾವ್ಯಗಳಲ್ಲಿ ಒಂದು. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ಚಿತ್ರಮಂದಿರದಲ್ಲೇ ನೋಡಿ ಮನು ಹಾಗು ಪ್ರಿಯಾರ ಜಗತ್ತಲ್ಲಿ ಭಾಗಿಯಾಗಿ'' ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸುಂದರ ಪೋಸ್ಟ್​ನಲ್ಲಿ ಸಪ್ತಸಾಗರದಾಚೆ ಎಲ್ಲೋ ಎಂಬ ಶೀರ್ಷಿಕೆ ಕೊಟ್ಟು ಸಿನಿಮಾ ಬಗ್ಗೆ ವರ್ಣಿಸಿದ್ದಾರೆ. ''ಸಪ್ತಸಾಗರದಾಚೆ ಎಲ್ಲೋ ಹುಟ್ಟಿದ ಈ ಪ್ರೇಮದ ಅಲೆ ಈಗ ಭಾವಪ್ರವಾಹವಾಗಿ ಬಂದು ಮನದ ತೀರಕ್ಕೆ ಬಡಿದಿದೆ. ಹೇಮಂತ್​, ಗುಂಡು ಶೆಟ್ಟಿ ಬರವಣಿಗೆ ಅಕ್ಷರಶಃ ಕಡಲನ್ನು ಕವಿತೆಯಾಗಿಸಿದೆ. ಚರಣ್​​ ರಾಜ್​ ಸಂಗೀತ ಅದರ ತೆರೆಗಳಷ್ಟೇ ಲಯಬದ್ಧ. ಅದ್ವೈತ್​​ ಅತ್ಯುತ್ತಮವಾಗಿ ದೃಶ್ಯಗಳನ್ನು ಕಟ್ಟಿ ಕೊಟ್ಟಿದ್ದಾರೆ. ರಕ್ಷಿತ್​ ಹಾಗೂ ರುಕ್ಷಿಣಿ ಪಾತ್ರದಲ್ಲಿ ಆಳಕ್ಕಿಳಿದು ಜೀವಿಸಿದ್ದಾರೆ. ಇದುವರೆಗಿನ ರಕ್ಷಿತ್​ ಶೆಟ್ಟಿ ವೃತ್ತಿ ಜೀವನದಲ್ಲಿ ಇದು ದಿ ಬೆಸ್ಟ್ ಪರ್ಫಾಮೆನ್ಸ್. ರುಕ್ಮಿಣಿ ವಸಂತ್​​ ಚಂದನವನದ ಆಸ್ತಿ ಆಗುವುದರಲ್ಲಿ ಸಂಶಯವಿಲ್ಲ. ನಿರೀಕ್ಷೆಗಳಿಗೆ ನಿಲುಕದ ಅತೀ ಸುಂದರ ಪ್ರೇಮಕಥೆಯನ್ನು ಕನ್ನಡಕ್ಕೆ ಕೊಟ್ಟ ಚಿತ್ರತಂಡಕ್ಕೆ ಧನ್ಯವಾದಗಳು. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಆಶೀರ್ವದಿಸಿ. ಇಂತಿ ನಿಮ್ಮ ಪ್ರೀತಿಯ-ರಿಷಬ್​ ಶೆಟ್ಟಿ'' ಎಂದು ಬರೆದಿದ್ದಾರೆ.

ಇದನ್ನೂ ಓದಿ:ರಜನಿಕಾಂತ್‌ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿನಿಮಾ ನಟ: ಎಷ್ಟು ಕೋಟಿ ಗೊತ್ತೇ?

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಖ್ಯಾತಿಯ ಹೇಮಂತ್​ ಎಂ ರಾವ್​ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಈ ಸಿನಿಮಾ ಎರಡು ಭಾಗಗಳಲ್ಲಿ ನಿರ್ಮಾಣವಾಗಿದೆ. ಇಂದು 'ಸಪ್ತಸಾಗರದಾಚೆ ಎಲ್ಲೋ ಸೈಡ್​ ಎ' ಬಿಡುಗಡೆಗೊಂಡಿದೆ. ಮುಂದಿನ ತಿಂಗಳು ಅಕ್ಟೋಬರ್​ 20ಕ್ಕೆ 'ಸಪ್ತಸಾಗರದಾಚೆ ಎಲ್ಲೋ ಸೈಡ್​ ಬಿ' ತೆರೆಕಾಣಲಿದೆ. ಇಷ್ಟು ಸಣ್ಣ ಗ್ಯಾಪ್​ನಲ್ಲಿ ಸಿನಿಮಾ ಬಿಡುಗಡೆ ಆಗುತ್ತಿರುವುದು ಇದೇ ಮೊದಲು. ಮೊದಲ ಭಾಗದಲ್ಲಿ ರುಕ್ಮಿಣಿ ವಸಂತ್​ ನಾಯಕ ನಟಿ ಆದರೆ, ಎರಡನೇ ಭಾಗದಲ್ಲಿ ರುಕ್ಮಿಣಿ ವಸಂತ್​ ಜೊತೆಗೆ ಚೈತ್ರ ಜೆ. ಆಚಾರ್​ ಕೂಡ ಕಾಣಿಸಿಕೊಳ್ಳಲಿದ್ದಾರೆ. ರಕ್ಷಿತ್​ ಶೆಟ್ಟಿ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆ ಪರಂವಃ ಪಿಕ್ಚರ್ಸ್​ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ನಿರ್ದೇಶಕ ಹೇಮಂತ್ ಅವರೇ ಕಥೆ, ಚಿತ್ರಕತೆ ಬರೆದಿದ್ದಾರೆ. ಚರಣ್​ ರಾಜ್​ ಸಂಗಿತ ಮತ್ತು ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ.

ಇದನ್ನೂ ಓದಿ:Kushi Review: ಸಮಂತಾ ವಿಜಯ್​ ದೇವರಕೊಂಡ ಸಿನಿಮಾಗೆ ಹೇಗಿದೆ ಪ್ರತಿಕ್ರಿಯೆ?!

Last Updated : Sep 1, 2023, 4:35 PM IST

ABOUT THE AUTHOR

...view details