ಕರ್ನಾಟಕ

karnataka

ETV Bharat / entertainment

SIIMA 2023: ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಖ್ಯಾತನಾಮರು - ರಿಷಬ್​, ರಕ್ಷಿತ್, ಯಶ್​​​​​ ಸೇರಿ ಹಲವರಿಗೆ ಒಲಿದ ಸೈಮಾ - SIIMA 2023 awards

SIIMA Awards 2023: ಕನ್ನಡದ ಹಲವು ಸಿನಿ ಗಣ್ಯರು ಸೌತ್​ ಇಂಡಿಯನ್​​​ ಇಂಟರ್​​ನ್ಯಾಷನಲ್​​​ ಮೂವಿ ಅವಾರ್ಡ್ಸ್ (SIIMA) ಮುಡಿಗೇರಿಸಿಕೊಂಡಿದ್ದಾರೆ.

rishab shetty got SIIMA 2023 awards
ಸೈಮಾ ಪ್ರಶಸ್ತಿ

By ETV Bharat Karnataka Team

Published : Sep 16, 2023, 9:58 AM IST

Updated : Sep 16, 2023, 11:05 AM IST

ಸೌತ್​ ಇಂಡಿಯನ್​​​ ಇಂಟರ್​​ನ್ಯಾಷನಲ್​​​ ಮೂವಿ ಅವಾರ್ಡ್ಸ್ (SIIMA) ಶುಕ್ರವಾರದಂದು ಅದ್ಧೂರಿಯಾಗಿ ಆರಂಭಗೊಂಡಿದೆ. 11ನೇ ಆವೃತ್ತಿಯ ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ದುಬೈನ ವರ್ಲ್ಡ್ ಟ್ರೇಡ್​ ಸೆಂಟರ್​ನಲ್ಲಿ ನಡೆಯುತ್ತಿದೆ. ಇಂದೂ ಕೂಡ ಈ ವರ್ಣರಂಜಿತ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಸಿನಿ ಕ್ಷೇತ್ರದ ದಿಗ್ಗಜರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇಂದು ಮತ್ತೆ ಹಲವರ ಪಾಲಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಲಿದೆ.

ಭಾರತೀಯ ಚಿತ್ರರಂಗದಲ್ಲೇ ಅಭೂತಪೂರ್ವ ಯಶಸ್ಸು ಕಂಡು ಗಣ್ಯಾತಿಗಣ್ಯರ ಮೆಚ್ಚುಗೆಗೆ ಪಾತ್ರವಾದ ಸಿನಿಮಾ ಕಾಂತಾರ. ಅಭಿಮಾನಿಗಳು ಮಾತ್ರವಲ್ಲದೇ, ಪ್ರೇಕ್ಷಕರು, ವಿಮರ್ಶಕರು, ಚಿತ್ರರಂಗದ ಗಣ್ಯಾತಿಗಣ್ಯರಿಂದಲೂ ಮೆಚ್ಚುಗೆ ಸ್ವೀಕರಿಸಿದ ಚಿತ್ರವಿದು. ವರ್ಷವಾದರೂ ಇನ್ನೂ ಸಖತ್​ ಸದ್ದು ಮಾಡುವ ಸಿನಿಮಾವಿದು. ಈ ಚಿತ್ರವನ್ನು ನಿರ್ದೇಶಿಸಿ, ಅದ್ಭುತ ನಟನೆ ಮಾಡಿ ಎಲ್ಲರ ಪ್ರೀತಿಗೆ ಪಾತ್ರರಾದವರು ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ. ನಾಯಕ ನಟ ಸೇರಿ ಚಿತ್ರತಂಡದವರೂ ಕೂಡ ಈ ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಕಾಂತಾರ ಸಿನಿಮಾದಲ್ಲಿನ ಅದ್ಭುತ ನಟನೆಗೆ ರಿಷಬ್​ ಶೆಟ್ಟಿ ಅವರು ಅತ್ಯುತ್ತಮ ನಟ (ಕ್ರಿಟಿಕ್ಸ್​) ಅವಾರ್ಡ್ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೇ ವಿಶೇಷ ಮೆಚ್ಚುಗೆ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಕಾಂತಾರ ಚಿತ್ರದ ಅಚ್ಯುತ್​ ಕುಮಾರ್​​​ ನೆಗೆಟಿವ್​ ರೋಲ್​ಗೆ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ರಕ್ಷಿತ್​​ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದೆ. ಗಾಳಿಪಟ 2 ಚಿತ್ರದಲ್ಲಿನ ಪೋಷಕ ಪಾತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ಯಾಂಡಲ್​ವುಡ್​ನ ದೂದ್​​ಪೇಡಾ ದಿಗಂತ್​​ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:SIIMA 2023: ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದ ಸುಮಧುರ ಕ್ಷಣಗಳು!

ಕನ್ನಡ ಚಿತ್ರರಂಗದಿಂದ ಕಾಂತಾರ ಸಿನಿಮಾ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕಾಂತಾರ ಡೈರೆಕ್ಟರ್‌ ರಿಷಬ್ ಶೆಟ್ಟಿಗೆ 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿ ಲಭಿಸಿದೆ. ಇನ್ನೂ ನಾಯಕಿ ಸಪ್ತಮಿ ಗೌಡ 'ಅತ್ಯುತ್ತಮ ನಟಿ' (ವಿಮರ್ಶಕರ ಆಯ್ಕೆ) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬ್ಲಾಕ್​​ ಬಸ್ಟರ್ 'ಕೆಜಿಎಫ್ ಚಾಪ್ಟರ್ 2' ಚಿತ್ರದಲ್ಲಿನ ಅದ್ಭುತ ನಟನೆಗಾಗಿ ಯಶ್‌ ಅವರಿಗೆ 'ಅತ್ಯುತ್ತಮ ನಟ' ಪ್ರಶಸ್ತಿ, ಶ್ರೀನಿಧಿ ಶೆಟ್ಟಿ ಅವರಿಗೆ 'ಅತ್ಯುತ್ತಮ ನಟಿ' ಪ್ರಶಸ್ತಿ ನೀಡಲಾಗಿದೆ.

ಸೈಮಾ ವಿಜೇತರು (ಕಲಾವಿದರು - ಸಿನಿಮಾ - ಪ್ರಶಸ್ತಿ):

  • ರಿಷಬ್​ ಶೆಟ್ಟಿ - ಕಾಂತಾರ - ಅತ್ಯುತ್ತಮ ನಟ (ಕ್ರಿಟಿಕ್ಸ್​) ಪ್ರಶಸ್ತಿ.
  • ರಿಷಬ್​ ಶೆಟ್ಟಿ - ಕಾಂತಾರ - ವಿಶೇಷ ಮೆಚ್ಚುಗೆ ಪ್ರಶಸ್ತಿ.
  • ರಿಷಬ್​ ಶೆಟ್ಟಿ - ಕಾಂತಾರ - ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ.
  • ಅಚ್ಯುತ್​ ಕುಮಾರ್​​​ - ಕಾಂತಾರ - ನೆಗೆಟಿವ್​ ರೋಲ್​ಗೆ ಅತ್ಯುತ್ತಮ ನಟ ಪ್ರಶಸ್ತಿ.
  • ಸಪ್ತಮಿ ಗೌಡ - ಕಾಂತಾರ - ಅತ್ಯುತ್ತಮ ನಟಿ (ವಿಮರ್ಷಕರ ಆಯ್ಕೆ) ಪ್ರಶಸ್ತಿ.
  • ರಕ್ಷಿತ್​​ ಶೆಟ್ಟಿ - 777 ಚಾರ್ಲಿ - ಅತ್ಯುತ್ತಮ ಚಿತ್ರ (ಪರಂವಃ ಸ್ಟುಡಿಯೋಸ್) ಪ್ರಶಸ್ತಿ.
  • ರಕ್ಷಿತ್ ಶೆಟ್ಟಿ - 777 ಚಾರ್ಲಿ - ಅತ್ಯುತ್ತಮ ನಟ ಪ್ರಶಸ್ತಿ.
  • ದಿಗಂತ್​​ - ಗಾಳಿಪಟ 2 - ಪೋಷಕ ಪಾತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ.
  • ಯಶ್​​​ - ಕೆಜಿಎಫ್​ 2 - ಅತ್ಯುತ್ತಮ ನಟ ಪ್ರಶಸ್ತಿ.
  • ಶ್ರೀನಿಧಿ ಶೆಟ್ಟಿ - ಕೆಜಿಎಫ್​ 2 - ಅತ್ಯುತ್ತಮ ನಟಿ ಪ್ರಶಸ್ತಿ.
  • ಪೃಥ್ವಿ ಶಾಮನೂರು - ಪದವಿ ಪೂರ್ವ - ಅತ್ಯುತ್ತಮ ಉದಯೋನ್ಮುಖ ನಟ ಪ್ರಶಸ್ತಿ.
  • ಅಪೇಕ್ಷಾ ಪುರೋಹಿತ್, ಪವನ್ ಒಡೆಯರ್ - ಡೊಳ್ಳು - ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ ಪ್ರಶಸ್ತಿ.
  • ಸಾಗರ್ ಪುರಾಣಿಕ್ - ಡೊಳ್ಳು - ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ ಪ್ರಶಸ್ತಿ.
  • ಶುಭಾ ರಕ್ಷಾ - ಹೋಮ್ ಮಿನಿಸ್ಟರ್‌ - ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ.
  • ಪ್ರಕಾಶ್ ತುಮಿನಾಡ್ - ಕಾಂತಾರ - ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ.
  • ಭುವನ್ ಗೌಡ - ಕೆಜಿಎಫ್‌ ಚಾಪ್ಟರ್‌ 2 - ಅತ್ಯುತ್ತಮ ಛಾಯಾಗ್ರಹಣ.
  • ಸುನಿಧಿ ಚೌಹಾಣ್ - ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡು - ಅತ್ಯುತ್ತಮ ಗಾಯಕಿ ಪ್ರಶಸ್ತಿ.
  • ವಿಜಯ್ ಪ್ರಕಾಶ್ - ಕಾಂತಾರದ ಸಿಂಗಾರ ಸಿರಿಯೇ ಸಾಂಗ್​​ - ಅತ್ಯುತ್ತಮ ಗಾಯಕ ಪ್ರಶಸ್ತಿ.
  • ಪ್ರಮೋದ್ ಮರವಂತೆ - ಕಾಂತಾರದ ಸಿಂಗಾರ ಸಿರಿಯೇ ಸಾಂಗ್ - ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿ.
  • ಅಜನೀಶ್ ಲೋಕನಾಥ್ - ಕಾಂತಾರ - ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ.
  • ಮುಕೇಶ್ ಲಕ್ಷ್ಮಣ್ - ಕಾಂತಾರ - ವಿಶೇಷ ಮೆಚ್ಚುಗೆ ಪ್ರಶಸ್ತಿ.
  • ನೀತಾ ಅಶೋಕ್ - ವಿಕ್ರಾಂತ್ ರೋಣ - ಅತ್ಯುತ್ತಮ ಉದಯೋನ್ಮುಖ ನಟಿ.

ಇದನ್ನೂ ಓದಿ:SIIMA 2023: ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕ್ಷಣಗಣನೆ; ಮಿಂಚು ಹರಿಸಲಿರುವ ಕನ್ನಡ ತಾರೆಗಳಿವರು!

Last Updated : Sep 16, 2023, 11:05 AM IST

ABOUT THE AUTHOR

...view details