ಕರ್ನಾಟಕ

karnataka

ETV Bharat / entertainment

'12th ಫೇಲ್​​' ಸಿನಿಮಾದಿಂದ ಸ್ಫೂರ್ತಿ ಪಡೆದ ರಿಷಬ್​ ಶೆಟ್ಟಿ: ತೇಜಸ್ ಕಲೆಕ್ಷನ್​ ಡೀಟೆಲ್ಸ್ ಇಲ್ಲಿದೆ! - ಕಂಗನಾ ರಣಾವತ್ ತೇಜಸ್

12th Fail Movie: ಉತ್ತಮ ಪ್ರದರ್ಶನ ಕಾಣುತ್ತಿರುವ '12th ಫೇಲ್​​' ಸಿನಿಮಾ ಬಗ್ಗೆ ಕಾಂತಾರ ಖ್ಯಾತಿಯ ರಿಷಬ್​ ಶೆಟ್ಟಿ ಹೊಗಳಿದ್ದಾರೆ.

Rishab shetty compliments to 12th Fail movie
'12th ಫೇಲ್​​' ಸಿನಿಮಾ ಬಗ್ಗೆ ರಿಷಬ್​ ಶೆಟ್ಟಿ ಗುಣಗಾನ

By ETV Bharat Karnataka Team

Published : Nov 1, 2023, 3:15 PM IST

ಅಕ್ಟೋಬರ್​​ 27, ಶುಕ್ರವಾರದಂದು '12th ಫೇಲ್​​' ಮತ್ತು ತೇಜಸ್​ ಸಿನಿಮಾ ಬಿಡುಗಡೆ ಆಗಿ, ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿಸಿದೆ. '12th ಫೇಲ್​​' ಚಿತ್ರಕಥೆ ಸಿನಿಪ್ರಿಯರನ್ನು ಸೆಳೆದಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚೆಗೆ, ಕಾಂತಾರ ಖ್ಯಾತಿಯ ರಿಷಬ್​ ಶೆಟ್ಟಿ ಸಹ ಸಿನಿಮಾವನ್ನು ಮೆಚ್ಚಿ ಗುಣಗಾನ ಮಾಡಿದ್ದಾರೆ.

ರಿಷಬ್​ ಶೆಟ್ಟಿ ಟ್ವೀಟ್: ''12th ಫೇಲ್ ಚಿತ್ರವು ಒಂದು ಪ್ರಮುಖ ಪಾಠ ಎತ್ತಿ ಹಿಡಿದಿದೆ. ನಾವೆಷ್ಟೇ ಆಳಕ್ಕೆ ಕುಸಿದರೂ, ಬದುಕನ್ನು ಪುನರಾರಂಭಿಸುವುದು ನಮಗೆ ವಿಭಿನ್ನ ಅನುಭವ, ಆಯಾಮ ನೀಡುತ್ತದೆ. ಕಥೆ ರವಾನಿಸಿದ ಶೈಲಿಯಿಂದ ನಾನು ನಿಜಕ್ಕೂ ಸ್ಫೂರ್ತಿ ಪಡೆದಿದ್ದೇನೆ'' ಎಂದು ಕಾಂತಾರ ಖ್ಯಾತಿಯ ರಿಷಬ್​ ಶೆಟ್ಟಿ ಇತ್ತೀಚೆಗೆ ಸೋಷಿಯಲ್​ ಮೀಡಿಯಾ ಪ್ಲಾಟ್​​ಫಾರ್ಮ್​​​ ಎಕ್ಸ್​​​ನಲ್ಲಿ (ಹಿಂದಿನ ಟ್ವಿಟರ್) ಬರೆದುಕೊಂಡಿದ್ದಾರೆ.

ಬಾಕ್ಸ್​ ಆಫೀಸ್ ಪೈಪೋಟಿ? ಬಾಲಿವುಡ್​ ಕ್ವೀನ್​​ ಖ್ಯಾತಿಯ ಕಂಗನಾ ರಣಾವತ್ ಮುಖ್ಯಭೂಮಿಕೆಯ ರೋಮಾಂಚಕ ವೈಮಾನಿಕ ಸಾಹಸ ಚಿತ್ರ 'ತೇಜಸ್' ಮತ್ತು ವಿಕ್ರಾಂತ್ ಮಾಸ್ಸೆ ಅಭಿನಯದ '12th ಫೇಲ್' ಸಿನಿಮಾ ಒಂದೇ ದಿನ ಥಿಯೇಟರ್‌ಗಳಲ್ಲಿ ತೆರೆಕಂಡಿದೆ. ಅಕ್ಟೋಬರ್​​ 27ರಂದು ತೆರೆಕಂಡು ಒಂದು ಮಟ್ಟಿನ ಬಾಕ್ಸ್​ ಆಫೀಸ್ ಪೈಪೋಟಿ ನಡೆಸುತ್ತಿದೆ.

ಬಿಡುಗಡೆಗೂ ಮುನ್ನ ಸಖತ್ ಸದ್ದು ಮಾಡಿದ್ದ 'ತೇಜಸ್' ಪ್ರೇಕ್ಷಕರು, ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಹೆಣಗಾಡುತ್ತಿದೆ. ಮತ್ತೊಂದೆಡೆ, 12th ಫೇಲ್ ಸಿನಿಮಾ ಸಕಾರಾತ್ಮಕ ಸ್ಪಂದನೆ ಸ್ವೀಕರಿಸುತ್ತಿದೆ. ಪಾಸಿಟಿವ್​ ಮೌತ್​ ಟಾಕ್​ ಹಿನ್ನೆಲೆ, ಗಲ್ಲಾಪೆಟ್ಟಿಗೆ ವಿಚಾರದಲ್ಲಿ ಯಶ ಕಂಡಿದೆ.

12th ಫೇಲ್: ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, 12th ಫೇಲ್​​ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ, ಆರನೇ ದಿನ (ಇಂದು) ಚಿತ್ರ 2.00 ಕೋಟಿ ರೂಪಾಯಿಗಳನ್ನು ಕಲೆಕ್ಷನ್​ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಚಿತ್ರ ಒಟ್ಟು ಕಲೆಕ್ಷನ್​​ 12 ಕೊಟಿ ರೂಪಾಯಿಗೆ ಏರಲಿದೆ. ಈವರೆಗೆ 10 ಕೋಟಿ ರೂ. ವ್ಯವಹಾರ ನಡೆಸಿದೆ. ವಿಧು ವಿನೋದ್ ಚೋಪ್ರಾ ನಿರ್ದೇಶನದ ಈ ಚಿತ್ರ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಕಥೆಯನ್ನು ಆಧರಿಸಿದೆ. ಚಿತ್ರದಲ್ಲಿ ವಿಕ್ರಾಂತ್, ಮೇಧಾ ಶಂಕರ್, ಸಂಜಯ್ ಬಿಷ್ಣೋಯ್ ಮತ್ತು ಹರೀಶ್ ಖನ್ನಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿನೋದ್ ಚೋಪ್ರಾ ಫಿಲ್ಮ್ಸ್ ಬ್ಯಾನರ್ ಅಡಿ ನಿರ್ದೇಶಕರೇ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ:ಕನ್ನಡ ಬಿಗ್​ ಬಾಸ್​: ಹಳ್ಳಿಮನೆಯಲ್ಲಿ ಹೊತ್ತಿಕೊಂಡಿದೆ ಮಾತಿನ ಕಿಚ್ಚು

ತೇಜಸ್: ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ತೇಜಸ್ ಸಿನಿಮಾ ಸಾಧಾರಣ ಅಂಕಿ ಅಂಶಗಳೊಂದಿಗೆ ಆರಂಭಗೊಂಡಿದ್ದು, ಮೊದಲ ಐದು ದಿನಗಳಲ್ಲಿ ಒಟ್ಟು 4.55 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಆರನೇ ದಿನ ಅಂದರೆ ಇಂದು ತೇಜಸ್ ಸಿನಿಮಾ 0.20 ಕೋಟಿ ರೂ.ಗಳನ್ನು ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಈ ಮೂಲಕ ಕಲೆಕ್ಷನ್​​ ಅಂಕಿ - ಅಂಶ ಒಟ್ಟು 4.75 ಕೋಟಿ ರೂ. ಆಗಲಿದೆ.

ಇದನ್ನೂ ಓದಿ:ಕರ್ನಾಟಕ ರಾಜ್ಯೋತ್ಸವ 2023: ಶಿವಣ್ಣ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರಿಂದ​ ನಾಡಿನ ಜನತೆಗೆ ಶುಭಾಶಯ

ವರದಿಗಳ ಪ್ರಕಾರ, ಪ್ರೇಕ್ಷಕರ ಕೊರತೆ ಹಿನ್ನೆಲೆ ತೇಜಸ್‌ನ ಹಲವು ಶೋಗಳನ್ನು ಸೋಮವಾರ ರದ್ದುಗೊಳಿಸಲಾಗಿದೆ. ಮುಂಬೈನಲ್ಲಿ ಗೈಟಿ ಗ್ಯಾಲಾಕ್ಸಿ ಥಿಯೇಟರ್‌ಗಳನ್ನು ಹೊಂದಿರುವ ಸಿನಿಮಾ ಪ್ರದರ್ಶಕ ಮನೋಜ್ ದೇಸಾಯಿ ಅವರು ಈ ಬಗ್ಗೆ ಮಾತನಾಡಿದ್ದು, ಭಾನುವಾರದ ಶೋಗಳಿಗೆ ಕೇವಲ 100 ಮಂದಿ ಅಷ್ಟೇ ಬಂದಿದ್ದರು ಎಂದು ತಿಳಿಸಿದ್ದಾರೆ.

ABOUT THE AUTHOR

...view details