ಪ್ರತಿಭಾವಂತ ನಟ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಹೆಡ್ ಬುಷ್ ಸಿನಿಮಾದ ಟ್ರೈಲರ್ ಭಾನುವಾರ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಕಾಂತಾರ ಮೂಲಕ ಸಖತ್ ಸುದ್ದಿಯಲ್ಲಿರುವ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಚಿತ್ರ ಯಶಸ್ಸು ಕಾಣುವ ಲಕ್ಷಣಗಳು ಗೋಚರಿಸುತ್ತಿವೆ.
ಅಕ್ಟೋಬರ್ 21ಕ್ಕೆ ತೆರೆಕಾಣಲು ಸಜ್ಜಾಗಿರುವ ಚಿತ್ರದ ಟ್ರೈಲರ್ ಅನ್ನು ಕಾಂತಾರ ನಟ ರಿಷಬ್ ಶೆಟ್ಟಿ ನೋಡಿ ಮೆಚ್ಚಿಕೊಂಡಿದ್ದಾರೆ. ''ಅದ್ಭುತ ಟ್ರೈಲರ್, ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೇನೆ'' ಎಂದು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.
ಹೆಡ್ ಬುಷ್ ಭೂಗತ ಲೋಕದ ಎಂ.ಪಿ ಜಯರಾಜ್ ಜೀವನಾಧಾರಿತ ಚಿತ್ರ. 1970ರ ಬೆಂಗಳೂರಿನ ಭೂಗತ ಜಗತ್ತನ್ನು ಚಿತ್ರದಲ್ಲಿ ತೆರೆದಿಡಲಾಗಿದೆ. ಅಗ್ನಿ ಶ್ರೀಧರ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಶೂನ್ಯ ಅವರು ನಿರ್ದೇಶಿಸಿದ್ದಾರೆ. ಡಾಲಿ ಪಿಕ್ಚರ್ಸ್ ಹಾಗೂ ಸೋಮಣ್ಣ ಟಾಕೀಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣಗೊಂಡಿದೆ. ಪಾಯಲ್ ರಜಪೂತ್, ಕ್ರೇಜಿಸ್ಟಾರ್ ರವಿಚಂದ್ರನ್, ಲೂಸ್ ಮಾದಾ ಯೋಗಿ, ವಸಿಷ್ಠ ಸಿಂಹ, ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನವಿದೆ. ಸುನೋಜ್ ವೇಲಾಯಧನ್ ಛಾಯಗ್ರಹಣವಿದೆ.
ಇದನ್ನೂ ಓದಿ: ದೇವರೇ ಬಂದು ರಿಷಬ್ ಕೈಯಲ್ಲಿ ಕಾಂತಾರ ಸಿನಿಮಾ ಮಾಡಿಸಿದ್ದಾರೆ: ಜಗ್ಗೇಶ್ ಗುಣಗಾನ