ಬಾಲಿವುಡ್ ನಟಿ ರಿಚಾ ಚಡ್ಡಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಇತ್ತೀಚಿನ ಫೋಟೊ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ನಟಿ ರಿಚಾ ಇತ್ತೀಚಿಗೆ ಕಪ್ಪು ಉಡುಪು ಧರಿಸಿದ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ನಟಿ, ನಾನು ಫೋಟೋ ಶೂಟ್ ಮಾಡಲು ಇಷ್ಟ ಪಡುತ್ತೇನೆ. ಅಲ್ಲಿ ಛಾಯಾಗ್ರಾಹಕ ಮತ್ತು ನನ್ನ ಸ್ನೇಹವಿದೆ. ಫೋಟೋ ಶೂಟ್ ಮಾಡುವಾಗ ಒಂದು ಪಾತ್ರ ನಿರ್ವಹಿಸುವಂತೆ ಅನಿಸಿತು ಎಂದಿದ್ದಾರೆ. ಜೊತೆಗೆ ತಮ್ಮ ತೂಕ ನಷ್ಟದ ಬಗ್ಗೆ ಹೇಳಿರುವ ನಟಿ, ತೂಕ ನಷ್ಟವು ಆರೋಗ್ಯಕರ ಜೀವನ ಹೊಂದುವ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.