ಕರ್ನಾಟಕ

karnataka

ETV Bharat / entertainment

ಅಕ್ಟೋಬರ್​ನಲ್ಲಿ ನಟಿ ರಿಚಾ ಚಡ್ಡಾ ಮದುವೆ: ಸೋಷಿಯಲ್ ಮೀಡಿಯಾದಲ್ಲಿ ಕಾಲ್ಪನಿಕ ಆಮಂತ್ರಣ ಪತ್ರ ವೈರಲ್ - ಈಟಿವಿ ಭಾರತ ನ್ನಡ

ಬಾಲಿವುಡ್ ಲವ್ ಬರ್ಡ್ಸ್ ರಿಚಾ ಚಡ್ಡಾ ಮತ್ತು ಅಲಿ ಫಜಲ್ ವೈವಾಹಿಕ ಜೀವನಕ್ಕೆ ಹೆಜ್ಜೆಯಿಡಲು ಸಜ್ಜಾಗಿದ್ದಾರೆ. ರಿಚಾ-ಅಲಿ ಮದುವೆ ಆಮಂತ್ರಣ ಹೀಗಿರಬಹುದು, ಹಾಗಿರಬಹುದು ಎಂದು ಅಂದಾಜಿಸಲಾಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಾಲ್ಪನಿಕ ಆಮಂತ್ರಣ ಪತ್ರ ವೈರಲ್​ ಆಗ್ತಿದೆ.

Richa Chadha and Ali Fazal wedding invite is all things cool just like them
ಅಕ್ಟೋಬರ್​ನಲ್ಲಿ ನಟಿ ರಿಚಾ ಚಡ್ಡಾ ಮದುವೆ

By

Published : Sep 21, 2022, 8:29 PM IST

ಬಾಲಿವುಡ್ ಲವ್ ಬರ್ಡ್ಸ್ ರಿಚಾ ಚಡ್ಡಾ ಮತ್ತು ಅಲಿ ಫಜಲ್ ವೈವಾಹಿಕ ಜೀವನಕ್ಕೆ ಹೆಜ್ಜೆಯಿಡಲು ಸಜ್ಜಾಗಿದ್ದಾರೆ. ಇಷ್ಟು ದಿನಗಳ ಕಾಲ ಡೇಟಿಂಗ್​ನಲ್ಲಿದ್ದ ಈ ಜೋಡಿ ಅಕ್ಟೋಬರ್‌ 4ಕ್ಕೆ ಹಸೆಮಣೆ ಏರಲಿದೆ. ಈ ಜೋಡಿಯ ಮದುವೆ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಸಾಕಷ್ಟು ಕಾತುರರಾಗಿದ್ದಾರೆ. ಈ ಹೊತ್ತಿನಲ್ಲಿ ರಿಚಾ - ಅಲಿ ಮದುವೆ ಆಮಂತ್ರಣ ಹೀಗಿರಬಹುದು, ಹಾಗಿರಬಹುದು ಎಂದು ಅಂದಾಜಿಸಲಾಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಾಲ್ಪನಿಕ ಆಮಂತ್ರಣ ಪತ್ರ ವೈರಲ್​ ಆಗ್ತಿದೆ.

ರಿಚಾ ಮತ್ತು ಅಲಿ ಅವರ ಕಾಲ್ಪನಿಕ ವೈರಲ್ ಮದುವೆ ಆಮಂತ್ರಣವು, ಈ ಜೋಡಿ ಸೈಕಲ್ ಸವಾರಿ ಮಾಡುವ ಚಿತ್ರವನ್ನು ಒಳಗೊಂಡಿದೆ. ಮ್ಯಾಚ್‌ಬಾಕ್ಸ್‌ ಆಕಾರದಲ್ಲಿ ವಿನ್ಯಾಸಗೊಳಿಸಲಾದ ಆಹ್ವಾನದ ಮೇಲೆ "ಕಪಲ್ ಮ್ಯಾಚೆಸ್" ಎಂದು ಬರೆಯಲಾಗಿದೆ.

ಕಾಲ್ಪನಿಕ ಆಮಂತ್ರಣ ಪತ್ರ

ಅಕ್ಟೋಬರ್ 4 ರಂದು ಮುಂಬೈನಲ್ಲಿ ಈ ಮದುವೆ ನಡೆಯಲಿದೆ. ಜೋಡಿ ತಮ್ಮ ಕುಟುಂಬ, ಸ್ನೇಹಿತರು ಮತ್ತು ಉದ್ಯಮದ ಗೆಳೆಯರಿಗಾಗಿ ಒಂದು ದಿನದ ನಂತರ ಮದುವೆಯ ಆರತಕ್ಷತೆ ಆಯೋಜಿಸಲಿದ್ದಾರೆ ಎಂದು ನಟಿ ರಿಚಾ ಚಡ್ಡಾ ಅವರ ಬಲ್ಲ ಮೂಲಗಳು ತಿಳಿಸಿವೆ. ಮದುವೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಸೆಪ್ಟೆಂಬರ್ 30ರಂದು ಪ್ರಾರಂಭವಾಗುತ್ತವೆ.

ಕಾಕ್ಟೈಲ್, ಸಂಗೀತ ಮತ್ತು ಮೆಹೆಂದಿ ಕಾರ್ಯಕ್ರಮಗಳು ನವದೆಹಲಿಯಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ರಿಚಾ ಚಡ್ಡಾ ಅವರಿಗೆ ಬೇಕಾದ ಆಭರಣಗಳನ್ನು ಬಿಕಾನೇರ್‌ನ ಆಭರಣ ವ್ಯಾಪಾರಿ ಕುಟುಂಬದಿಂದ ರೆಡಿ ಮಾಡಲಾಗುತ್ತಿದೆಯಂತೆ.

ಇದನ್ನೂ ಓದಿ:ರಾಣಾ ಎರಡನೇ ಸಿನಿಮಾ ನಿರ್ದೇಶಿಸಲಿದ್ದಾರೆ ಪ್ರೇಮ್ ಶಿಷ್ಯ ವಿಜಯ್ ಈಶ್ವರ್

ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿರುವ ಇವರಿಬ್ಬರು 2020ರ ಏಪ್ರಿಲ್‌ನಲ್ಲಿ ವಿವಾಹವಾಗಬೇಕಿತ್ತು. ಆದರೆ, ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಮದುವೆಯನ್ನು ಎರಡು ಬಾರಿ ಮುಂದೂಡಿದ್ದರು. ರಿಚಾ ಚಡ್ಡಾ ಮತ್ತು ಅಲಿ ಫಜಲ್ ಮೊದಲ ಬಾರಿಗೆ 2012 ರಲ್ಲಿ ಫುಕ್ರೆ ಎಂಬ ಹಾಸ್ಯದ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಭೇಟಿಯಾಗಿದ್ದರು. ಸದ್ಯ ಅದರ ಮುಂದುವರೆದ ಭಾಗ ಚಿತ್ರೀಕರಣವೂ ನಡೆದಿದೆ. ಶೀಘ್ರದಲ್ಲೇ ಇಬ್ಬರು ಪರದೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details