ಮುಂಬೈ: 'ಆರ್ಆರ್ಆರ್' ಚಿತ್ರ ಗ್ಲೋಬಲ್ ಆವಾರ್ಡ್ ಪ್ರಶಸ್ತಿ ಗೆದ್ದ ಬಳಿಕ ಸದ್ಯ ಎಲ್ಲರ ಗಮನ ನಿರ್ದೇಶಕ ರಾಜಮೌಳಿ ಅವರತ್ತ ನೆಟ್ಟಿದೆ ಎಂದರೆ ತಪ್ಪಾಗಲಾರದು. ಈ ನಡುವೆ ಅವರ ಜೀವಕ್ಕೆ ಬೆದರಿಕೆ ಎದುರಾಗಿದೆ. ಅವರ ಅವರ ಹತ್ಯೆಗೆ ಯೋಜನೆ ರೂಪಿಸಲಾಗಿದೆ. ಈ ಹತ್ಯೆಯ ದಳದಲ್ಲಿ ತಾವು ಕೂಡ ಭಾಗಿಯಾಗಿದ್ದು ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. ಇದೊಂದು ಹಾಸ್ಯಭರಿತ ಟ್ವೀಟ್ ಆಗಿದ್ದು, ನಿಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳಿ ಎಂದು ರಾಮ್ ಗೋಪಾಲ್ ವರ್ಮಾ ಅವರು ರಾಜಮೌಳಿಗೆ ತಿಳಿಸಿದ್ದಾರೆ. ಈ ಟ್ವೀಟ್ ಈಗ ಭಾರಿ ಸದ್ದು ಮಾಡುತ್ತಿದೆ.
28ನೇ ಕ್ರಿಟಿಕ್ ಚಾಯ್ಸ್ ಆವಾರ್ಡ್ನಲ್ಲಿ 'ಆರ್ಆರ್ಆರ್' ಸಿನಿಮಾ ಉತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಪಡೆದಿತ್ತು. ಈ ವೇಳೆ, ರಾಜಮೌಳಿ ಅವರು ಜೇಮ್ಸ್ ಕ್ಯಾಮೆರಾನ್ ಜೊತೆಗೆ ಮಾತುಕತೆ ನಡೆಸುತ್ತಿದ್ದ ವಿಡಿಯೋವನ್ನು ರಾಜಮೌಳಿ ಹಲವು ದಿನಗಳ ಹಿಂದೆ ಶೇರ್ ಮಾಡಿದ್ದರು. ಈ ವಿಡಿಯೋವನ್ನು ಮರು ಶೇರ್ ಮಾಡಿರುವ ಆರ್ಜಿವಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯಿಂದ ಇಲ್ಲಿಯವರೆಗೆ ಭಾರತದ ಸಿನಿಮಾದ ಇತಿಹಾಸದಲ್ಲಿ ರಾಜಮೌಳಿ ಸೇರಿದಂತೆ ಯಾರೂ ಕೂಡ ಭಾರತದ ನಿರ್ದೇಶಕರೊಬ್ಬರು ಇಂತಹ ಘಟನೆಯಲ್ಲಿ ಭಾಗಿಯಾಗುತ್ತಾರೆ ಎಂದು ಆಲೋಚಿಸಿರಲಿಲ್ಲ ಎಂದು ಬರೆದಿದ್ದಾರೆ.
'ಕಾಸಿಫ್', 'ಮುಘಲೇಆಜಮ್', 'ಶೋಲೆ' ನಿರ್ಮಿಸಿದ ನಿರ್ದೇಶಕರು ಸೇರಿದಂತೆ ಆದಿತ್ಯ ಚೋಪ್ರಾ, ಕರಣ್ ಜೋಹರ್, ಬನ್ಸಾಲಿಯಂತಹರನ್ನೂ ನೀವು ಮೀರಿಸಿದ್ದೀರಾ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ. ರಾಜಮೌಳಿ ಸರ್, ನೀವು ನಿಮ್ಮ ರಕ್ಷಣೆಯನ್ನು ಹೆಚ್ಚಿಸಿಕೊಳ್ಳಿ. ಕಾರಣ ವೃತ್ತಿ ಮತ್ಸರ ಹೊಂದಿರುವ ಕೆಲವು ಚಿತ್ರ ನಿರ್ದೇಶಕರು ನಿಮ್ಮ ಕೊಲೆಗೆ ಹತ್ಯೆ ತಂಡ ರಚಿಸಿದ್ದಾರೆ. ಈ ತಂಡದಲ್ಲಿ ನಾನು ಕೂಡ ಇದ್ದೇನೆ ಎಂದು ಆರ್ಜಿವಿ ತಮಾಷೆಯಾಗಿ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.