ಹೈದರಾಬಾದ್:ಕಭಿ ಖುಷಿ ಕಭಿ ಗಮ್, ಚಿತ್ರ ಬಿಡುಗಡೆಗೊಂಡು 22 ವರ್ಷಗಳನ್ನು ಪೂರೈಸಿದರೂ ಸಿನಿ ಪ್ರಿಯರಲ್ಲಿ ಇದರ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. 2001ರಲ್ಲಿ ಬಿಡುಗಡೆಗೊಂಡ ಈ ಚಿತ್ರ ಇಂದಿಗೂ ಸಾರ್ವಕಾಲಿಕ ಸೂಪರ್ಹಿಟ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವಾಗಿದೆ. ಕರಣ್ ಜೋಹರ್ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಬಾಲಿವುಡ್ ಬಾದ್ಷಾ ಶಾರುಖ್ ಖಾನ್, ಕಾಜೋಲ್, ಹೃತಿಕ್ ರೋಷನ್, ಕರೀನಾ ಕಪೂರ್ ಸೇರಿದಂತೆ ಮುಂತಾದ ಹಿರಿಯ ನಟರು ನಟಿಸಿದ್ದಾರೆ.
ಚಿತ್ರದಲ್ಲಿ ಕಾಣಸಿಕೊಂಡ ಹಿರಿಯ ನಟರು ಇಂದು ಬಾಲಿವುಡ್ನ ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದು, ಸಿನಿ ಪಯಾಣದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಇದೀಗ ಇದೇ ಚಿತ್ರದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡು ಎಲ್ಲರ ಮನ ಗೆದ್ದಿದ್ದ ಕಲಾವಿದೆ ತಮ್ಮ ವೈಯಕ್ತಿಕ ಜೀವನದಲ್ಲಿ ಮಹತ್ವದ ಹೆಜ್ಜೆ ಇಡಲು ಮುಂದಾಗಿದ್ದಾರೆ.
ಹೌದು ಕಭಿ ಖುಷಿ ಕಭಿ ಗಮ್ ಚಿತ್ರದಲ್ಲಿ ಪೂಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಮಾಳವಿಕಾ ಪ್ರಿಯಕರನೊಂದಿಗೆ ಕೆಲವೇ ದಿನಗಳಲ್ಲಿ ಸಪ್ತಪದಿ ತುಳಿಯಲು ತಯಾರಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತಮ್ಮ ದೀರ್ಘಕಾಲದ ಪ್ರಿಯಕರ ಹಾಗೂ ಉದ್ಯಮಿ ಪ್ರಣವ್ ಬುಗ್ಗಾರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.