ಕರ್ನಾಟಕ

karnataka

ETV Bharat / entertainment

ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಸಿನಿಮಾಗೆ ಸಿಕ್ತು ರಿಲಯನ್ಸ್​​ ಎಂಟರ್​ ಟೈನ್​ ಮೆಂಟ್​ ಸಾಥ್

ವನಜಾ ಪಾಟೀಲ್ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಸಿನಿಮಾಗೆ ರಿಲಯನ್ಸ್ ಎಂಟರ್​ಟೈನ್ ಮೆಂಟ್ ಸಂಸ್ಥೆ ಜೊತೆಯಾಗಿದೆ.

ಗರಡಿ
ಗರಡಿ

By ETV Bharat Karnataka Team

Published : Oct 5, 2023, 9:24 AM IST

ಬಾಲಿವುಡ್​ನಲ್ಲಿ ದಂಗಲ್, ಸುಲ್ತಾನ್ ಶೈಲಿಯಲ್ಲಿ ಚಿತ್ರಗಳು ಸಿನಿಮಾ ಪ್ರೇಮಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. ಅದೇ ರೀತಿ ಕನ್ನಡದಲ್ಲಿ ಕ್ರೀಡಾಧಾರಿತ ಚಿತ್ರವೊಂದು ಬರ್ತಾ ಇವೆ. ವಿಕಟ ಕವಿ ಯೋಗರಾಜ್ ಭಟ್ ನಿರ್ದೇಶನದ, ಕೌರವ ಸಿನಿಮಾ ಖ್ಯಾತಿಯ ಬಿ.ಸಿ ಪಾಟೀಲ್ ಹಾಗೂ ಯಶಸ್ ಸೂರ್ಯ ಅಭಿನಯದ ಚಿತ್ರ ಗರಡಿ.

ಮೈಸೂರು ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಕೇಳಿ ಬರುವ ಹೆಸರು ಗರಡಿ. ಕರ್ನಾಟಕದ ಅಪ್ಪಟ ದೇಸಿ ಕ್ರೀಡೆ ಆಗಿರುವ ಗರಡಿ ಹಾಗೂ ಪೈಲ್ವಾನ್​ಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ನಿರ್ದೇಶಕ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿರುವ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಆಲ್ ಮೋಸ್ಟ್ ಚಿತ್ರೀಕರಣ ಮುಗಿಸಿರೋ ಗರಡಿ ಚಿತ್ರ ಬಿಡುಗಡೆ ರೆಡಿಯಾಗಿದೆ.

ಸದ್ಯ ಹಾಡುಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಗರಡಿ ಸಿನಿಮಾ ಬಗ್ಗೆ, ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರ ಮಾಡಿರೋ ಬಿ. ಸಿ ಪಾಟೀಲ್​ ಅವರು ಈ ಚಿತ್ರದ ಮೇಲೆ ತುಂಬಾನೇ ವಿಶ್ವಾಸ ಇಟ್ಟಿಕೊಟ್ಟಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಿದ ನಟ ಹಾಗೂ ರಾಜಕಾರಣಿ ಬಿ.ಸಿ. ಪಾಟೀಲ್ ಗರಡಿ ಚಿತ್ರ ನಮ್ಮ ಸೊಗಡಿನ ಚಿತ್ರ. ಈ ಚಿತ್ರದ ಕಥೆ ಹಾಗೂ ಅದ್ದೂರಿ ಮೇಕಿಂಗ್​ನ್ನು ನೋಡಿ ರಿಲಯನ್ಸ್ ಎಂಟರ್​ಟೈನ್ ಮೆಂಟ್ ಸಂಸ್ಥೆ ಸಿನಿಮಾದ ಪ್ರಮೋಷನ್ ಜೊತೆಗೆ ಮಾರ್ಕೆಟಿಂಗ್ ಮಾಡುವುದಕ್ಕೆ ಮಾತುಕತೆ ಆಗಿದೆ. ಹಾಗೇ ಉತ್ತರ ಭಾರತದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಹೆಚ್ಚು ಬೇಡಿಕೆ ಇರುವ ಕಾರಣ ಗರಡಿ ಚಿತ್ರವನ್ನು ಹಿಂದಿ ಡಬ್ಬಿಂಗ್​ ಮಾಡಿ ಬಿಡುಗಡೆ ಮಾಡಲು ಮುಂದಾಗಿದೆಯಂತೆ ಅಂತಾರೆ.

ಇನ್ನು ಗರಡಿ ಸಿನಿಮಾ ರಿಲೀಸ್​ಗೂ ಮುಂಚೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಟಾಕ್ ಆಗುತ್ತಿದೆ. ಈ ಚಿತ್ರದಲ್ಲಿ ದರ್ಶನ್ ಬಹುಮುಖ್ಯವಾದ ಪಾತ್ರ ಮಾಡಿದ್ದು, ಅವರ ಎಂಟ್ರಿ ಭರ್ಜರಿಯಾಗಿರಲಿದೆ. ಗರಡಿ ಚಿತ್ರದಲ್ಲಿ ದರ್ಶನ್ 20 ನಿಮಿಷಗಳ ಕಾಲ ಬೆಳ್ಳಿ ತೆರೆ ಮೇಲೆ ಅಬ್ಬರಿಸುತ್ತಾರೆ ಎಂದು ಬಿ.ಸಿ ಪಾಟೀಲ್ ಸಿನಿಮಾ ಕುರಿತು ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಈ ಚಿತ್ರದಲ್ಲಿ ಬಿ.ಸಿ ಪಾಟೀಲ್ ಅಲ್ಲದೇ ನಟ‌ ಸೂರ್ಯ ಹಾಗೂ ಸೋನಾಲ್ ಮಾಂಟೆರೊ ಮತ್ತು ರವಿಶಂಕರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿ ನಯನ, ತ್ರಿವೇಣಿ, ಧರ್ಮಣ್ಣ, ಚೆಲುವರಾಜ್, ರವಿಚೇತನ್, ತೇಜಸ್ವಿನಿ ಪ್ರಕಾಶ್ ಹೀಗೆ ದೊಡ್ಡ ತಾರಾ ಬಳಗವಿದೆ.

ಇಷ್ಟೆಲ್ಲ ವಿಶೇಷತೆ ಇರುವ ಗರಡಿ ಚಿತ್ರಕ್ಕೆ ವಿ.ಹರಿಕೃಷ್ಣ ಅವರ ಸುಮಧುರ ಸಂಗೀತ, ನಿರಂಜನ್ ಬಾಬು ಅವರ ಛಾಯಾಗ್ರಹಣ, ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನ ಇದೆ. ಸಿನಿಮಾವನ್ನು ವನಜಾ ಪಾಟೀಲ್ ನಿರ್ಮಾಣ ಮಾಡುತ್ತಿದ್ದು, ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕಿಯಾಗಿದ್ದಾರೆ. ಸದ್ಯ ಹೊಡಿರೆಲೆ‌ ಹಲಗಿ ಹಾಡು ಮಿಲಿನ್​ಗಟ್ಟಲೆ ವೀಕ್ಷಣೆ ಆಗಿದ್ದು, ಚಿತ್ರತಂಡದ‌ ಆತ್ಮ ವಿಶ್ವಾಸವನ್ನು ಹೆಚ್ಚಿಸಿದ್ದು, ನವೆಂಬರ್ 10ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಎರಡು ಭಾಗಗಳಲ್ಲಿ ಮೂಡಿ ಬರಲಿದೆ ಜಾನ್ವಿ, ಜೂ.ಎನ್‌ಟಿಆರ್ ಅಭಿನಯದ 'ದೇವರ'

ABOUT THE AUTHOR

...view details