"ನನಗೆ ಪುನೀತ್ ರಾಜ್‌ಕುಮಾರ್ ಸಿನಿಮಾಗೆ ನಿರ್ದೇಶನ ಮಾಡುವ ಕನಸಿತ್ತು, ಆದರೆ ಅದು ಈಡೇರಲಿಲ್ಲ" ಎಂದು ಉಪೇಂದ್ರ ಹೇಳಿದ್ದಾರೆ. ಪುನೀತ್ ಅವರು ಬದುಕಿದಾಗ, ನಾನು ನಿಮ್ಮ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸಬೇಕು ಎಂದು ಉಪೇಂದ್ರ ಹತ್ತಿರ ಮಾತನಾಡಿದ್ದರಂತೆ. ಆದರೆ ವಿಧಿಯಾಟದ ಮುಂದೆ ಅದು ನೆರವೇರಲಿಲ್ಲ ಎಂದು ಉಪೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.
"ನಾನು ಶಿವರಾಜ್‌ಕುಮಾರ್ ಜೊತೆ ಆ್ಯಕ್ಷನ್ ಮೂವಿ ಮಾಡಲಿದ್ದೇನೆ. ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗೆ ನಿರ್ದೇಶನ ಮಾಡಬೇಕಿತ್ತು. ಆದರೆ, ಈಗ ಶಿವಣ್ಣ ಅವರೇ ಎಲ್ಲವೂ ಆಗಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರ ಪ್ರೊಡಕ್ಷನ್‌ನಲ್ಲಿ ಚಿತ್ರ ನಿರ್ದೇಶನ ಮಾಡುತ್ತೇನೆ" ಎಂದು ಅವರು ಹೇಳಿದರು.
ಕಬ್ಬ ಬಗ್ಗೆ.. : ಕಬ್ಬ 1960-80 ರಲ್ಲಿ ನಡೆಯುವ ಕಥೆ. ಉಪೇಂದ್ರ ಅವರು ಗ್ಯಾಂಗ್ ಸ್ಟಾರ್ ಪಾತ್ರ ನಿರ್ವಹಿಸಿದ್ದು, ಸುದೀಪ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಉಪ್ಪಿ ಜೋಡಿಯಾಗಿ ಶ್ರೀಯಾ ಶರಣ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ತೆಲುಗು ನಟರಾದ ಪೊಸನಿ ಕೃಷ್ಣ ಮುರಳಿ ಮತ್ತು ಮುರಳಿ ಶರ್ಮಾ, ಐ ಸಿನಿಮಾ ಖ್ಯಾತಿಯ ಕಾಮರಾಜನ್, ನವಾಬ್ ಷಾ, ಜಗಪತಿ ಬಾಬು, ರಾಹುಲ್ ಜಗಪತ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್ ನವೀನ್, ಕೋಟಾ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ಮುಂತಾದವರು ಅಭಿನಯಿಸಿದ್ದಾರೆ.