ಕನ್ನಡ ಚಿತ್ರರಂಗದ ಬುದ್ಧಿವಂತ ನಿರ್ದೇಶಕ ಹಾಗೂ ನಟ ಅಂತಾ ಸಾಬೀತುಪಡಿಸಿರುವ ನಟ ರಿಯಲ್ ಸ್ಟಾರ್ ಉಪೇಂದ್ರ. ಸದ್ಯ 'ಕಬ್ಜ' ಸಿನಿಮಾ ನಡುವೆಯೇ ತಾವು ನಟಿಸಿ, ನಿರ್ದೇಶಿಸುತ್ತಿರುವ ಹೊಸ ಚಿತ್ರದ ವಿಚಿತ್ರ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಮತ್ತೆ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದಾರೆ.
ಈ ಹಿಂದೆ 'ಶ್', 'ಎ', 'ಸೂಪರ್', 'ಉಪ್ಪಿ 2' ಚಿತ್ರಗಳು ವಿಭಿನ್ನತೆ ಜೊತೆಗೆ ಸಿಕ್ಕಾಪಟ್ಟೆ ಸದ್ದು ಮಾಡಿದ ಶೀರ್ಷಿಕೆ ಹೊಂದಿದ್ದವು. ಇದೀಗ ಮತ್ತೆ ಅದೇ ಸೂತ್ರ ಬಳಸುವ ಮೂಲಕ ಉಪೇಂದ್ರ ನಾನು ವಿಭಿನ್ನ ಅಂತಾ ತೋರಿಸಿದ್ದಾರೆ. ಹೌದು, ಕುದುರೆಯ ಮುಖದ ಆಕಾರದ ಶೈಲಿಯ ಸಿನಿಮಾ ಪೋಸ್ಟರ್ ಇದಾಗಿದೆ.
ಈ ಪೋಸ್ಟರ್ನಲ್ಲಿ ಸಾಕಷ್ಟು ಸೂಕ್ಷ್ಮ ವಿಷಯಗಳಿವೆ. ಕುದುರೆಯ ಮುಖದ ಮೇಲೆ ಉಪೇಂದ್ರ ಗಾಬರಿಯಿಂದ ನೋಡುತ್ತಿರುವ ಚಿತ್ರ, ಹಳೆ ಕಾಲದ ರೈಲಿನ ಚಿತ್ರವಿದೆ. ಅಷ್ಟೇ ಅಲ್ಲ ಬೆತ್ತಲಾಗಿರುವ ಹೆಣ್ಣಿನ ಚಿತ್ರವೊಂದು ಸಮಾಜಕ್ಕೆ ಕನ್ನಡಿಯಂತೆ ತೋರಿಸುತ್ತಿದೆ.