ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶಿಸಿ, ಅಭಿನಯಿಸಿರುವ 'ರವಿ ಬೋಪಣ್ಣ' ಸಿನಿಮಾ ಆಗಸ್ಟ್ 12ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಕೆಲ ದಿನಗಳ ಹಿಂದೆ ಪ್ರಿ ರಿಲೀಸ್ ಇವೆಂಟ್ ಮಾಡಿ ಗಮನ ಸೆಳೆದಿದ್ದ ನಟ ಇದೀಗ ಸಿನಿಮಾ ವಿಚಾರದಲ್ಲಿಯೂ ತಾನು 'ದಿ ಶೋ ಮ್ಯಾನ್' ಎಂದು ಪ್ರೂವ್ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಭಾರತೀಯ ಚಿತ್ರರಂಗದಲ್ಲಿಯೇ ಇದೇ ಮೊದಲ ಬಾರಿಗೆ ಬಿಡುಗಡೆಯಾದ ಈ ಸಿನಿಮಾದ 7 ನಿಮಿಷದ ಈ ಟ್ರೈಲರ್!.
ಸಾಮಾನ್ಯವಾಗಿ ಒಂದು ಸಿನಿಮಾದ ಟ್ರೈಲರ್ ಅಬ್ಬಬ್ಬಾ ಅಂದ್ರೆ 2.50 ರಿಂದ 3 ನಿಮಿಷ ಇರುತ್ತದೆ. ಆದ್ರೆ ಕ್ರೇಜಿಸ್ಟಾರ್ ನಟಿಸಿರುವ ಹೊಸ ಸಿನಿಮಾದ ಟ್ರೈಲರ್ ಏಳು ನಿಮಿಷ ಅವಧಿಯದ್ದು. ಟ್ರೈಲರ್‌ನಲ್ಲಿ ನಿಮಗೆ ಟಿಪಿಕಲ್ ರವಿಚಂದ್ರನ್ ಕಾಣಸಿಗ್ತಾರೆ. ಪ್ರೀತಿ, ಪ್ರೇಮ ಎಮೋಷನ್ ಎಲ್ಲವೂ ಇದರಲ್ಲಡಗಿದೆ.
ಹಠವಾದಿ ಸಿನಿಮಾ ಬಳಿಕ ರಾಧಿಕಾ ಕುಮಾರಸ್ವಾಮಿ ಕ್ರೇಜಿ ಸ್ಟಾರ್ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಕಾವ್ಯ ಶೆಟ್ಟಿ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ಇವರು ತುಸು ಹೆಚ್ಚೆನಿಸುವ ಬೋಲ್ಡ್ ಅವತಾರದಲ್ಲಿ ದರ್ಶನ ಕೊಡುತ್ತಿದ್ದಾರೆ.