'ರವಿ ಬೋಪಣ್ಣ' ಕ್ರೇಜಿಸ್ಟಾರ್ ರವಿಚಂದ್ರನ್ ಕಥೆ, ಚಿತ್ರಕತೆ ಬರೆದು ನಿರ್ದೇಶನದ ಜೊತೆಗೆ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಚಿತ್ರ. 'ದೃಶ್ಯಂ 2' ಸಿನಿಮಾ ಬಳಿಕ ರವಿಚಂದ್ರನ್ ಅಭಿನಯದ ರವಿ ಬೋಪಣ್ಣ ಸಿನಿಮಾ ಆ.12 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಹೀಗಾಗಿ ರವಿ ಬೋಪಣ್ಣ ಹಾಡಿನ ಜೊತೆಗೆ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಜಿಟಿ ಮಾಲ್ನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್, ಜಗ್ಗೇಶ್, ಡಾಲಿ ಧನಂಜಯ್ ಹಾಗೂ ಶರಣ್ ಆಗಮಿಸಿ ಕ್ರೇಜಿಸ್ಟಾರ್ ರವಿ ಬೋಪಣ್ಣ ಸಿನಿಮಾಗೆ ಶುಭ ಹಾರೈಸಿದರು.
ನಟ ಜಗ್ಗೇಶ್ ಹೇಳಿದ್ದಿಷ್ಟು: "ರವಿಚಂದ್ರನ್ ಮನಸ್ಸು ನಿಶ್ಕಲ್ಮಷ. ನೇರ ನಡೆ. ಹೃದಯ ಶ್ರೀಮಂತಿಕೆ. ಈ ಸಿನಿಮಾ ಲೋಕದಲ್ಲಿ ಅದ್ಭುತವಾಗಿ ಬದುಕುತ್ತಿರುವ ಶೋ ಮ್ಯಾನ್. ಆ ಕಾಲದಲ್ಲಿ ನಮ್ಮಗೆಲ್ಲ 15,000 ಸಂಬಳ ಕೊಡ್ತಿದ್ರು. ನಮ್ಮಗೆಲ್ಲ ಅನ್ನ ಹಾಕಿ ಕೆಲಸ ಕೊಟ್ಟ ಮನುಷ್ಯ. ಡಾ. ರಾಜ್ ಕುಮಾರ್ ಅವರನ್ನು ನೋಡಿದ್ವಿ, ಕೇಳಿದ್ವಿ.
ಆದರೆ ರವಿಚಂದ್ರನ್ ಶೂಟಿಂಗ್ ನೋಡೋಕೆ ಡಾ. ರಾಜ್ ಕುಮಾರ್ ಅವರು ಬರುತ್ತಿದ್ದರು. ರವಿ ಎಷ್ಟು ಚೆನ್ನಾಗಿ ಶೂಟಿಂಗ್ ಮಾಡ್ತಾರೆ ಅಂತಾ ಅಣ್ಣಾವ್ರು ಹೇಳುತ್ತಿದ್ದರು ಅಂದ್ರೆ ದೊಡ್ಡ ಕ್ರೆಡಿಟ್ ಅದು. ರವಿ ಬೋಪ್ಪಣ್ಣ ಗೆಟಪ್ ತುಂಬಾ ಚೆನ್ನಾಗಿದೆ. ಈ ಸಿನಿಮಾ ಯಶಸ್ವಿಯಾಗಲಿ" ಎಂದು ನಟ ಜಗ್ಗೇಶ್ ಹಾರೈಸಿದರು.
"ನಾನು ಅವರ ಜೊತೆ ನಟಿಸಿದ್ದೇ ದೊಡ್ಡ ಗಿಫ್ಟ್. ಸಿನಿಮಾ ಅಂದ್ರೆ ಸೆಲಬ್ರೆಷನ್ ಅಂತಾ ಚಿಕ್ಕ ವಯಸ್ಸಿನಲ್ಲಿ ಕೇಳಿದ್ದೆವು. ಆದರೆ, ಈಗ ನಿಜವಾಗಲೂ ಸೆಲಬ್ರೆಷನ್ ನೋಡಿ ಖುಷಿ ಆಗುತ್ತಿದೆ. ಅಹಂ ಪ್ರೇಮಾಸ್ಮಿ ಸಿನಿಮಾದಲ್ಲಿ ರವಿಚಂದ್ರನ್ ಅವರ ತಮ್ಮನ ಜೊತೆ ನಟಿಸಿದ್ದೆ. ಮೊದಲ ಬಾರಿಗೆ ಆ ಸಿನಿಮಾವನ್ನು ರವಿಚಂದ್ರನ್ ನಿರ್ದೇಶನ ಮಾಡಿದರು. ನಾವು ಹಾಗೂ ಮುಂದಿನ ಜನರೇಷನ್ ಸಿನಿಮಾ ಬಗ್ಗೆ ಕಲಿಯುತ್ತೇವೆ ಎಂದರೆ ಅದು ರವಿಚಂದ್ರನ್ ಅವರಿಂದ" ಎನ್ನುತ್ತಾರೆ ನಟ ಶರಣ್.
"ರವಿಚಂದ್ರನ್ ಅವರ ಕಾರ್ಯಕ್ರಮಕ್ಕೆ ಭಾಗಿಯಾಗಿರುವುದು ನಮ್ಮ ಅದೃಷ್ಟ. ನಾನು ರವಿಚಂದ್ರನ್ ಸರ್ ಅವರ ಸಿನಿಮಾ ನೋಡಿಕೊಂಡು ಬೆಳದಿರುವೆ. ಜೀವನದಲ್ಲಿ ಸೋತಾಗ ಅವರ ಸಿನಿಮಾ ಸ್ಪೂರ್ತಿ- ಡಾಲಿ ಧನಂಜಯ್.