ಉದಯೋನ್ಮುಖ ಕಲಾವಿದರಾದ ಅಗಸ್ತ್ಯ ನಂದಾ ಮತ್ತು ಖುಷಿ ಕಪೂರ್ ಅವರ ನಟನೆಯನ್ನು ಅಪಹಾಸ್ಯ ಮಾಡುವ ಪೋಸ್ಟ್‌ವೊಂದನ್ನು 'ಅಜಾಗರೂಕತೆ'ಯಿಂದ ಲೈಕ್ ಮಾಡಿರುವ ಬಾಲಿವುಡ್ ನಟಿ ರವೀನಾ ಟಂಡನ್ ಸಾಕಷ್ಟು ಟೀಕೆ ಎದುರಿಸಿದ್ದಾರೆ. ಈ ಘಟನೆಯ ನಂತರ ಅವರು ಸಾಮಾಜಿಕ ಮಾಧ್ಯಮದಲ್ಲಿ ರಹಸ್ಯ ಸಂದೇಶವುಳ್ಳ ಪೋಸ್ಟ್ ಹಂಚಿಕೊಂಡಿದ್ದಾರೆ. ಟ್ರೋಲ್‌ಗಳಿಗೆ ಗುರಿಯಾಗುವ ವಿಚಾರ ಇಟ್ಟುಕೊಂಡು ಪೋಸ್ಟ್ ಶೇರ್ ಮಾಡಿದಂತಿದೆ.
'ಇಷ್ಟಪಡಿ ಇಲ್ಲವೇ ಬಿಡಿ, ಕೆಲವೊಮ್ಮೆ ಏನೂ ಮಾಡದೇ ಸಾಕಷ್ಟು ಭರಿಸಬೇಕಾಗುತ್ತದೆ' ಎಂಬುದು ರವೀನಾ ಟಂಡನ್ ಇನ್ಸ್ಟಾಗ್ರಾಮ್ ಪೋಸ್ಟ್. ಇದಕ್ಕೆ, 'ಕರ್ಮ ಕರೆಯುತ್ತಿದೆಯೇ?' ಎಂಬ ಶೀರ್ಷಿಕೆಯನ್ನೂ ಅವರೇ ಕೊಟ್ಟಿದ್ದಾರೆ. ಇದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ.
ಯಾರಾದರೂ ವಿವರಿಸಬಹುದೇ? ಎಂದು ಕೆಲವರು ಗೊಂದಲ ನಿವಾರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ನಾನಾ ತೆರನಾದ ಕಾಮೆಂಟ್‌ಗಳು ಬಂದಿವೆ. ಓರ್ವ ಸಾಮಾಜಿಕ ಜಾಲತಾಣ ಬಳಕೆದಾರರು 'ಒಂದು ವೇಳೆ ನಿಮಗೆ ತಿಳಿದಿದ್ದರೆ, ನಿಮಗೆ ತಿಳಿದಿದೆ' ಎಂದು ಹಿಂಟ್ ಕೊಟ್ಟಿದ್ದಾರೆ. ಮತ್ತೊಂದು ಕಾಮೆಂಟ್ನಲ್ಲಿ 'ಕರ್ಮ' ಅಂಶವನ್ನು ಹೈಲೈಟ್ ಮಾಡಲಾಗಿದೆ. ಇದು 'ಕರ್ಮದ ಚಕ್ರ'ದ ಬಗ್ಗೆ ಹೇಳುತ್ತಿದೆ ಎಂದಿದ್ದಾರೆ. ಏನಾಗಿದೆಯೋ ಅದಕ್ಕೆ ತಕ್ಕ ಫಲ ಭರಿಸುವುದು (ಕರ್ಮ) ಅವಶ್ಯಕವಾಗಿದೆ. ಉದ್ದೇಶಪೂರ್ವಕವಾಗದೇ ಇದ್ದರೂ ಸಹ ಮಾಡಿದ ಕೆಲಸಕ್ಕೆ ಭರಿಸುವುದು ಅತ್ಯಗತ್ಯ ಎಂಬರ್ಥದಲ್ಲಿ ಕಾಮೆಂಟ್ಗಳಿವೆ.