ಮುಂಬೈ:ಇತ್ತೀಚೆಗೆ ಹುಲಿ ನೋಡಲು ಸಫಾರಿಗೆ ತೆರಳಿದ್ದ ಬಾಲಿವುಡ್ ನಟಿ ರವೀನಾ ಟಂಡನ್ ಅರಣ್ಯ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆ ಕಾನೂನಿನ ಕುಣಿಯಲ್ಲಿ ಸಿಲುಕಿಕೊಂಡಿದ್ದಾರೆ. ಹುಲಿಯ ಸಮೀಪಕ್ಕೆ ಹೋಗಿ ಫೋಟೋ ತೆಗೆಯಲು ಯತ್ನಿಸುತ್ತಿರುವ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಅದನ್ನು ಗಮನಿಸಿದ ಅರಣ್ಯಾಧಿಕಾರಿಗಳು ಇದೀಗ ತನಿಖೆಗೆ ಆದೇಶಿಸಿದ್ದಾರೆ.
ಬಾಲಿವುಡ್ ನಟಿ ರವೀನ್ ಟಂಡನ್ ಆದರೆ, ಇದನ್ನು ತಳ್ಳಿ ಹಾಕಿರುವ ಅವರ ಆಪ್ತ ಮೂಲಗಳು ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದ ಬಳಿಕವೇ ತಾನು ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದೆವು. ಸಫಾರಿ ವೇಳೆ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ. ಸಫಾರಿಗೆ ನಿಗದಿ ಪಡಿಸಿದ ಜಾಗದಲ್ಲೇ ವಾಹನ ಇತ್ತು. ಆದರೆ ಹುಲಿಯೇ ಸಮೀಪ ಬಂದಿದೆ ಎಂದಿದ್ದಾರೆ.
ನವೆಂಬರ್ 22 ರಂದು ಇಲಾಖೆಯಿಂದ ಒದಗಿಸಲಾದ ತರಬೇತಿ ಪಡೆದ ಮಾರ್ಗದರ್ಶಿ ಮತ್ತು ಚಾಲಕರೊಂದಿಗೆ ಅವರು ಸಫಾರಿಗೆ ತೆರಳಿದ್ದರು. ಈ ಬಗ್ಗೆ ಅಂದು ಹಂಚಿಕೊಂಡ ಟ್ವೀಟ್ನಲ್ಲಿಯೂ ಬರೆದುಕೊಂಡಿದ್ದಾರೆ. ಆದರೆ, ತೀರಾ ಸೂಕ್ಷ್ಮ ಪ್ರದೇಶದಲ್ಲಿ ಹೇಗೆ ಇರಬೇಕೆಂದು ಮರೆತ ಅವರು ಹುಲಿಯ ಸಮೀಪಕ್ಕೆ ತೆರಳಿ ಫೋಟೋ ಮತ್ತು ವಿಡಿಯೋಗಳನ್ನು ಮಾಡಿಕೊಳ್ಳಲು ಯತ್ನಿಸಿದ್ದರು.
ಅವರ ವರ್ತನೆಯಿಂದ ಹುಲಿಗೂ ಕಿರಿಕಿರಿ ಆಗಿದ್ದು, ಅದು ಘರ್ಜಿಸಿ ಮುಂದೆ ಸಾಗಿತ್ತು. ಹುಲಿಗಳು ಯಾವಾಗ ಮತ್ತು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಈ ವಿಡಿಯೋ ಆಧಾರವಾಗಿಟ್ಟುಕೊಂಡು ಅರಣ್ಯಾಧಿಕಾರಿಗಳು ನಟಿ ವಿರುದ್ಧ ಇದೀಗ ತನಿಖೆಗೆ ಆದೇಶಿಸಿದ್ದಾರೆ.
ಬಾಲಿವುಡ್ ನಟಿ ರವೀನ್ ಟಂಡನ್
ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯಲ್ಲಿರುವ ಮೀಸಲು ಅರಣ್ಯ ಪ್ರದೇಶದಲ್ಲಿ ಅವರು ಸಫಾರಿ ತೆರಳಿದ್ದರು. ಅಂದು ಸಿಬ್ಬಂದಿ ಜೊತೆ ವಾಹನದಲ್ಲಿ ತೆರಳುತ್ತಾ ಕರ್ಕಶ ಶಬ್ಧದೊಂದಿಗೆ ಹುಲಿಯ ಹತ್ತಿರ ಹೋಗುತ್ತಿರುವುದನ್ನು ಆ ವಿಡಿಯೋವನ್ನು ಗಮನಿಸಬಹುದು. ಈ ವಿಡಿಯೋ ವೈರಲ್ ಆದ ಬಳಿಕ ಮೇಲಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ.
ಬಾಲಿವುಡ್ ನಟಿ ರವೀನ್ ಟಂಡನ್
ಅರಣ್ಯದ ಉಪ ವಿಭಾಗಾಧಿಕಾರಿ (ಎಸ್‌ಡಿಒ) ಧೀರಜ್ ಸಿಂಗ್ ಚೌಹಾಣ್ ಅವರು ಮಂಗಳವಾರ ಹಿರಿಯ ಅಧಿಕಾರಿಗಳ ನಿರ್ದೇಶನದ ನಂತರ, ಘಟನೆಯ ಕುರಿತು ತನಿಖೆ ಪ್ರಾರಂಭಿಸಿದ್ದಾರೆ. ಸಫಾರಿ ವೇಳೆ ಅವರ ಜೀಪ್ ಹುಲಿಯ ಬಳಿ ತಲುಪಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ವಾಹನ ಚಾಲಕ ಮತ್ತು ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಮುಂದಿನ ಕ್ರಮಕ್ಕಾಗಿ ಈ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ಪ್ರೇಮಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ.. ಅನುಮಾನಪಟ್ಟು ಪ್ರೀತಿಸಿದವಳನ್ನೇ ಕೊಂದ ಲವರ್