ಮುಂಬೈ (ಮಹಾರಾಷ್ಟ್ರ) :90ರ ದಶಕದ ಪ್ರಸಿದ್ಧಬಾಲಿವುಡ್ ನಟಿ ರವೀನಾ ಟಂಡನ್ ಅವರು ಗುರುವಾರ ಮಹಾರಾಷ್ಟ್ರದ ವನ್ಯಜೀವಿ ಸೌಹಾರ್ದ ರಾಯಭಾರಿಯಾಗಿ ನೇಮಕಗೊಂಡರು.
ಮಹಾರಾಷ್ಟ್ರಕ್ಕೆ ವನ್ಯಜೀವಿ ಸೌಹಾರ್ದ ರಾಯಭಾರಿಯಾಗಿ ನಟಿ ರವೀನಾ ಟಂಡನ್ ಅವರ ಉತ್ಸಾಹ ಮತ್ತು ವನ್ಯಜೀವಿಗಳ ಮೇಲಿನ ಪ್ರೀತಿ ಹಾಗೂ ಅವರ ಸಂರಕ್ಷಣೆಯನ್ನು ನಾವು ಅನೇಕ ಸಂದರ್ಭಗಳಲ್ಲಿ ನೋಡಿದ್ದೇವೆ ಎಂದು ಮಹಾರಾಷ್ಟ್ರ ಅರಣ್ಯ ಸಚಿವ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಅವರು, ವನ್ಯಜೀವಿ ಸದ್ಭಾವನಾ ರಾಯಭಾರಿಯಾಗಿ ಸೇವೆ ಸಲ್ಲಿಸಲು ಇದೊಂದು ಉತ್ತಮ ಅವಕಾಶ. ಮಹಾರಾಷ್ಟ್ರ ಅರಣ್ಯ ಇಲಾಖೆಯೊಂದಿಗೆ ವನ್ಯಜೀವಿ ಸದ್ಭಾವನಾ ರಾಯಭಾರಿಯಾಗಿ ಕೈಜೋಡಿಸಲು ನನಗೆ ಅಪಾರ ಗೌರವ ಎನಿಸುತ್ತಿದೆ.
ಜನರು ಮತ್ತು ಪ್ರಕೃತಿಯ ಪ್ರಯೋಜನಕ್ಕಾಗಿ ನೈಸರ್ಗಿಕ ಜಗತ್ತನ್ನು ಉಳಿಸಿಕೊಳ್ಳುವುದು ನಮ್ಮ ಮೊದಲ ಧ್ಯೇಯ. ಈ ಅವಕಾಶ ನೀಡಿದ ಮಹಾರಾಷ್ಟ್ರಕ್ಕೆ ನಾನು ಕೃತಜ್ಞಳಾಗಿದ್ದೇನೆ. ಸಮರ್ಪಿತ ಮತ್ತು ಭಾವೋದ್ರಿಕ್ತ ವ್ಯಕ್ತಿಗಳೊಂದಿಗೆ ಕೆಲಸ ಮಾಡಲು ನಾನು ಉತ್ಸುಕಳಾಗಿದ್ದೇನೆ ಎಂದು ಅವಕಾಶ ನೀಡಿದವರಿಗೆ ನಟಿ ವೀನಾ ಟಂಡನ್ ಧನ್ಯವಾದ ತಿಳಿಸಿದರು.
ನಟಿ ರವೀನಾ ಇತ್ತೀಚೆಗೆ ತೆರೆಕಂಡ ಪ್ಯಾನ್ ಇಂಡಿಯಾ ಚಲನಚಿತ್ರ 'ಕೆಜಿಎಫ್- 2' ನಲ್ಲಿ ನಟ ಯಶ್ ಮತ್ತು ಸಂಜಯ್ ದತ್ ಅವರೊಂದಿಗೆ ನಟಿಸಿದ್ದರು. ಅವರು ಮುಂದಿನ ಫ್ಯಾಮಿಲಿ ಎಂಟರ್ಟೈನರ್ ಚಿತ್ರ 'ಘುಡ್ಚಾಡಿ' ನಲ್ಲಿ ಸಂಜಯ್ ದತ್, ಪಾರ್ಥ್ ಸಮತಾನ್ ಮತ್ತು ಕುಶಲಿ ಕುಮಾರ್ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಬಿನೋಯ್ ಗಾಂಧಿ ನಿರ್ದೇಶಿಸುತ್ತಿದ್ದಾರೆ. ಟಿ-ಸೀರೀಸ್ ಮತ್ತು ಕೀಪ್ ಡ್ರೀಮಿಂಗ್ ಪಿಕ್ಚರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇದರ ಹೊರತಾಗಿ ಅರ್ಬಾಜ್ ಖಾನ್ ಅವರ ಮುಂಬರುವ ಚಿತ್ರ 'ಪಟ್ನಾ ಶುಕ್ಲಾ'ದಲ್ಲಿಯೂ ಅವರು ನಾಯಕಿಯಾಗಿ ನಟಿಸಲಿದ್ದಾರೆ. ಚಿತ್ರದಲ್ಲಿ ಸತೀಶ್ ಕೌಶಿಕ್, ಮಾನವ್ ವಿಜ್, ಚಂದನ್ ರಾಯ್ ಸನ್ಯಾಲ್, ಜತಿನ್ ಗೋಸ್ವಾಮಿ ಮತ್ತು ಅನುಷ್ಕಾ ಕೌಶಿಕ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.
ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿರುವ ನಟಿ ರವೀನಾ ಅವರದ್ದೇ ಆದ ದೊಡ್ಡ ಅಭಿಮಾನಿಗಳ ಬಳಗವನ್ನೇ ಕಟ್ಟಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ‘ಆರಣ್ಯಕ್’ ಚಿತ್ರ ತೆರೆಕಂಡಿದ್ದು ಪ್ರೇಕ್ಷಕರಿಂದ ಅಪಾರ ಪ್ರೀತಿ ಗಳಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ಇದನ್ನೂ ಓದಿ:ಮೈನವಿರೇಳಿಸುವಂತೆ ಕಂಬಳ ಕೋಣಗಳನ್ನು ಓಡಿಸಿದ ರಿಷಬ್ ಶೆಟ್ಟಿ.. ಮಾಹಿತಿ ಹಂಚಿಕೊಂಡ ಚಿತ್ರತಂಡ