ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸರಣಿ ಸಿನಿಮಾ ಶೂಟಿಂಗ್ಗಳಲ್ಲಿ ಬ್ಯುಸಿಯಾಗಿದ್ದಾರೆ. ವರ್ಕ್ ಕಮಿಟ್ಮೆಂಟ್ಸ್ ಹಿನ್ನೆಲೆ ಹೆಚ್ಚು ಪ್ರಯಾಣ ಮಾಡುತ್ತಾರೆ. ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಕಾಣಿಸಿಕೊಂಡಿದ್ದು, ಆನ್ಲೈನ್ನಲ್ಲಿ ವಿಡಿಯೋ ವೈರಲ್ ಆಗಿದೆ.
ರಶ್ಮಿಕಾ ಮಂದಣ್ಣ ನ್ಯಾಶನಲ್ ಕ್ರಶ್ ಎಂದೇ ಫೇಮಸ್. ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ. ಇವರ ನಟನೆ ಜೊತೆ ಜೊತೆಗೆ ಸೌಂದರ್ಯ, ಫ್ಯಾಷನ್ ಸೆನ್ಸ್ ಸಹ ಸಖತ್ ಸದ್ದು ಮಾಡುತ್ತದೆ. ಫ್ಯಾಷನ್ ವಿಚಾರವಾಗಿ ಜನಪ್ರಿಯರಾಗಿರುವ ಹಿನ್ನೆಲೆ, ಸದ್ಯ ನಟಿಯ ಡ್ರೆಸ್ಸಿಂಗ್ ಸ್ಟೈಲ್ ಚರ್ಚೆಯ ವಿಷಯವಾಗಿದೆ. ಮುಂಬೈ ಏರ್ಪೋರ್ಟ್ನಲ್ಲಿ ನಟಿ ಕಾಣಿಸಿಕೊಂಡಿದ್ದು, ಪಾಪರಾಜಿಯೋರ್ವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ವಿಡಿಯೋ ನೋಡಿದವರ ಪೈಕಿ ಹಲವರು ನಟಿಮಣಿಯನ್ನು ಟ್ರೋಲ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಪಾಪರಾಜಿಯೋರ್ವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ಮುಂಬೈ ವಿಮಾನ ನಿಲ್ದಾಣದಿಂದ ಪುಷ್ಪ ನಟಿ ರಶ್ಮಿಕಾ ಮಂದಣ್ಣ ಹೊರಬರುತ್ತಿರುವುದನ್ನು ಕಾಣಬಹುದು. ಪಾಪರಾಜಿಗಳ ಕ್ಯಾಮರಾ ಕಂಡು ನಸುನಕ್ಕ ಕಿರಿಕ್ ಪಾರ್ಟಿ ಬೆಡಗಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ನಟಿ ವಿಮಾನ ನಿಲ್ದಾಣದದಲ್ಲಿ ಸಖತ್ ಕ್ಯಾಶುವಲ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಲ್ಯೂ ಜೀನ್ಸ್, ವೈಟ್ ಶರ್ಟ್, ಬ್ಲ್ಯಾಕ್ ಕ್ಯಾಶುವಲ್ ಸ್ಲಿಪ್ಪರ್, ಫ್ರೀ ಹೇರ್ ಸ್ಟೈಲ್, ಕಡಿಮೆ ಮೇಕ್ ಅಪ್ ನಲ್ಲಿ ಬಹುಭಾಷ ಚೆಲುವೆ ಕಾಣಿಸಿಕೊಂಡಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ನಟಿಯ ಡ್ರೆಸ್ಸಿಂಗ್ ಸ್ಟೈಲ್ ವಿಚಾರವಾಗಿ ಟ್ರೋಲಿಗರು ಆಟ ಶುರು ಮಾಡಿಕೊಂಡಿದ್ದಾರೆ.