ಕರ್ನಾಟಕ

karnataka

ETV Bharat / entertainment

ಮಹಿಳಾ ಪ್ರಧಾನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ: 'ದಿ ಗರ್ಲ್​​ಫ್ರೆಂಡ್' ಫಸ್ಟ್ ಲುಕ್​ ರಿಲೀಸ್ - ದಿ ಗರ್ಲ್​​ಫ್ರೆಂಡ್ ಫಸ್ಟ್ ಲುಕ್

Rashmika Mandanna Film 'The Girlfriend': ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯ ಮುಂದಿನ ಸಿನಿಮಾ 'ದಿ ಗರ್ಲ್​​ಫ್ರೆಂಡ್' ಇಂದು ಘೋಷಣೆ ಆಗಿದೆ.

Rashmika Mandanna The Girlfriend film
ರಶ್ಮಿಕಾ ಮಂದಣ್ಣ ದಿ ಗರ್ಲ್​​ಫ್ರೆಂಡ್ ಸಿನಿಮಾ

By ETV Bharat Karnataka Team

Published : Oct 22, 2023, 2:22 PM IST

ಕನ್ನಡ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿ, ಪ್ರಸ್ತುತ ಬಹುಭಾಷೆಗಳಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ನಟನೆಯ ಮುಂದಿನ ಸಿನಿಮಾ ಘೋಷಣೆ ಆಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಹುಲ್ ರವೀಂದ್ರನ್ ನಿರ್ದೇಶನದ ಮುಂದಿನ ಸಿನಿಮಾ 'ದಿ ಗರ್ಲ್​​​ಫ್ರೆಂಡ್'​ನಲ್ಲಿ (The Girlfriend) ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಹಿಳಾ ಪ್ರಧಾನ ಚಿತ್ರ: 2019ರ ಮನ್ಮಧುಡು 2 (Manmadhudu 2) ಚಿತ್ರದ ನಂತರ, ರಾಹುಲ್ ರವೀಂದ್ರನ್ ಅವರು ರಶ್ಮಿಕಾ ಮಂದಣ್ಣ ಜೊತೆ ಹೊಸ ಪ್ರಾಜೆಕ್ಟ್ ಮೂಲಕ ರೀ ಎಂಟ್ರಿ ಕೊಡುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರ. ಇಂದು 'ದಿ ಗರ್ಲ್​​ಫ್ರೆಂಡ್'ನ ಫಸ್ಟ್ ಲುಕ್ ಅನಾವರಣಗೊಳಿಸಲಾಗಿದೆ. ಮೊದಲ ನೋಟ ಪ್ರೇಕ್ಷಕರ ಕುತೂಹಲ ಕೆರಳಿಸಿದೆ.

ಪೊಸೆಸಿವ್​ ಲವ್​ ಸುತ್ತಲಿನ ಕಥೆ? ದಿ ಗರ್ಲ್‌ಫ್ರೆಂಡ್ ಫಸ್ಟ್ ಲುಕ್‌ನಲ್ಲಿ, ರಶ್ಮಿಕಾ ಮಂದಣ್ಣ ನೀರಿನಲ್ಲಿ ಮುಳುಗಿರುವ ದೃಶ್ಯಗಳನ್ನು ಕಾಣಬಹುದು. ನಟಿಯ ಮೊಗದಲ್ಲಿ ಸಂಕಟವನ್ನು ವಿಭಿನ್ನವಾಗಿ ಪ್ರದರ್ಶಿಸಲಾಗಿದೆ. ನಟಿಯ ಕಣ್ಣೋಟವೇ ಎಲ್ಲವನ್ನೂ ಹೇಳುವಂತಿದೆ. ಸಣ್ಣ ದೃಶ್ಯದ ಜೊತೆ ತೆಲುಗಿನಲ್ಲಿ ವಾಯ್ಸ್‌ಓವರ್ ಇದ್ದು, ಯಾರೋ ಓರ್ವರು ತೀವ್ರ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ನಾಯಕನದ್ದು ಪೊಸೆಸಿವ್​ ಲವ್​ ಎಂಬುದು ಬಹಳ ಸರಳವಾಗಿ ಅರ್ಥವಾಗುತ್ತದೆ. ನಾಯಕ ನಟ, ತನ್ನ ಪ್ರೀತಿಪಾತ್ರರ ಜೊತೆ 24/7 ಇರಲು ಬಯಸುತ್ತಾನೆ, ಸ್ನೇಹಿತರು, ಕುಟುಂಬ ಅಥವಾ ಬೇರೆ ಯಾರ ಅಗತ್ಯವೂ ಇಲ್ಲ ಎಂಬ ಭಾವನೆ ವ್ಯಕ್ತಪಡಿಸುತ್ತಾನೆ. ಪ್ರೀತಿ - ಸಂಬಂಧಗಳ ಕರಾಳ ಮುಖವನ್ನು ಚಿತ್ರ ತೋರಿಸಲಿದೆ ಎಂಬ ಸುಳಿವು ಈ ವಿಡಿಯೋದಲ್ಲಿ ಸಿಕ್ಕಿದೆ.

ಚಿ ಲಾ ಸೌ ಖ್ಯಾತಿಯ ರಾಹುಲ್ ರವೀಂದ್ರನ್ ನಾಲ್ಕು ವರ್ಷಗಳ ವಿರಾಮದ ಬಳಿಕ ಡೈರೆಕ್ಟರ್​ ಸೀಟ್​ಗೆ ಮರಳಿದ್ದಾರೆ. ದಿ ಗರ್ಲ್‌ ಫ್ರೆಂಡ್ ಚಿತ್ರಕ್ಕೆ ವಿದ್ಯಾ ಕೊಪ್ಪಿನೀಡಿ ಮತ್ತು ಧೀರಜ್ ಮೊಗಿಲಿನೇನಿ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾವನ್ನು ಅಲ್ಲು ಅರವಿಂದ್ ಅವರು ಗೀತಾ ಆರ್ಟ್ಸ್ ಅಡಿಯಲ್ಲಿ ಪ್ರಸ್ತುತಪಡಿಸಲಿದ್ದಾರೆ. 'ಗೀತಾ ಆರ್ಟ್ಸ್' ಯಶಸ್ವಿ ಸಿನಿಮಾಗಳನ್ನು ಹೊಂದಿರುವ ಹೆಸರಾಂತ ಚಲನಚಿತ್ರ ನಿರ್ಮಾಣ ಸಂಸ್ಥೆ.

ಇದನ್ನೂ ಓದಿ:ಪರಿಣಿತಿ ಚೋಪ್ರಾ ಜನ್ಮದಿನ: ಬಾಲಿವುಡ್​ ತಾರೆಯ ಸಿನಿಪಯಣ ಇಲ್ಲಿದೆ

'ದಿ ಗರ್ಲ್​​ಫ್ರೆಂಡ್' ಚಿತ್ರತಂಡದ ಸಂಪೂರ್ಣ ವಿವರ ಇನ್ನೂ ಬಹಿರಂಗಗೊಂಡಿಲ್ಲ. ಆದ್ರೆ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎಂಬುದನ್ನು ತಂಡ ಖಚಿತಪಡಿಸಿದೆ. ತಾಂತ್ರಿಕ ತಂಡದಲ್ಲಿ ಸಂಗೀತ ಸಂಯೋಜಕ ಹೇಶಮ್ ಅಬ್ದುಲ್ ವಹಾಬ್, ಕ್ಯಾಮರಾಮ್ಯಾನ್ ಕೃಷ್ಣನ್ ವಸಂತ್ ಮತ್ತು ಪ್ರೊಡಕ್ಷನ್​ ಡಿಸೈನರ್​​ಗಳಾದ ಎಸ್. ರಾಮಕೃಷ್ಣ ಮತ್ತು ಮೋನಿಕಾ ನಿಗೋತ್ರೆ ಇರಲಿದ್ದಾರೆ. ಇವರ ಮುಖೇನ ಅದ್ಭುತ ಸಿನಿಮೀಯ ಅನುಭವವನ್ನು ಪ್ರೇಕ್ಷಕರು ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ:ಹಿಟ್​ ಆ್ಯಂಡ್​ ರನ್ ಕೇಸ್: ಹಿರಿಯ ನಟ ದಲೀಪ್​ ತಾಹಿಲ್​​ಗೆ ಜೈಲುಶಿಕ್ಷೆ

ಇನ್ನೂ ನಟಿ ರಶ್ಮಿಕಾ ಮಂದಣ್ಣ ಕುರಿತು ವಿಶೇಷ ಪರಿಚಯ ಬೇಕಿಲ್ಲ. ಕೊನೆಯದಾಗಿ ಮಿಷನ್ ಮಜ್ನು ಚಿತ್ರದಲ್ಲಿ ಕಾಣಿಸಿಕೊಂಡರು. ರಣ್​​ಬೀರ್ ಕಪೂರ್ ಜೊತೆ ಅನಿಮಲ್, ದೇವ್ ಮೋಹನ್ ಜೊತೆ ರೈನ್​​​ಬೋ, ಅಲ್ಲು ಅರ್ಜುನ್ ಜೊತೆ ಪುಷ್ಪ: ದಿ ರೂಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡಿರುವ ತಾರೆಯ ಬಿಡುಗಡೆಗೆ ಸಜ್ಜಾಗಿರುವ ಸಿನಿಮಾ ಅನಿಮಲ್​​.

ABOUT THE AUTHOR

...view details