'ಅನಿಮಲ್' ಬಿಡುಗಡೆಗೆ ಸಜ್ಜಾಗುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರ ಮುಂದಿನ ಸಿನಿಮಾ 'ದಿ ಗರ್ಲ್‌ಫ್ರೆಂಡ್'. ಮಂಗಳವಾರ ಹೈದರಾಬಾದ್‌ನಲ್ಲಿ ಸಿನಿಮಾದ ಪೂಜಾ ಸಮಾರಂಭ ನೆರವೇರಿತು. ಈ ಮೂಲಕ ಅಧಿಕೃತವಾಗಿ ಶೂಟಿಂಗ್ ಶುಭಾರಂಭಗೊಂಡಿದೆ. ಕಾರ್ಯಕ್ರಮದಲ್ಲಿ ನಿರ್ಮಾಪಕ ಅಲ್ಲು ಅರವಿಂದ್, ಎಸ್‌ಕೆಎನ್, ನಿರ್ದೇಶಕರಾದ ಸಾಯಿ ರಾಜೇಶ್, ಮಾರುತಿ, ಪವನ್ ಸಾದಿನೇನಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಅಲ್ಲು ಅರವಿಂದ್ ಕ್ಲಾಪ್ ಮಾಡಿ, ನಿರ್ದೇಶಕರಿಗೆ ಸ್ಕ್ರಿಪ್ಟ್ ಹಸ್ತಾಂತರಿಸಿದರು. 'ದಿ ಗರ್ಲ್‌ಫ್ರೆಂಡ್' ರಶ್ಮಿಕಾ ಮಂದಣ್ಣ ನಟನೆಯ 24ನೇ ಸಿನಿಮಾ. ಅಕ್ಟೋಬರ್ ಅಂತ್ಯದಲ್ಲಿ ಸಿನಿಮಾ ಘೋಷಿಸಲಾಗಿದ್ದು, ರಶ್ಮಿಕಾ ಮಂದಣ್ಣರ ಫಸ್ಟ್ ಲುಕ್ ಅನಾವರಣಗೊಳಿಸಲಾಗಿತ್ತು.
ದಿ ಗರ್ಲ್‌ಫ್ರೆಂಡ್ ಫಸ್ಟ್ ಲುಕ್:ರಶ್ಮಿಕಾ ಮಂದಣ್ಣ ಅಕ್ಟೋಬರ್‌ನಲ್ಲಿ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮಾಹಿತಿ ಹಂಚಿಕೊಂಡಿದ್ದರು. "ಪ್ರಪಂಚ ಗ್ರೇಟ್ ಲವ್ ಸ್ಟೋರಿಗಳಿಂದ ತುಂಬಿದೆ. ಆದರೆ ಈ ಮೊದಲು ಕೇಳಿರದ ಅಥವಾ ನೋಡದ ಕೆಲವು ಪ್ರೇಮಕಥೆಗಳಿವೆ. 'ದಿ ಗರ್ಲ್‌ಫ್ರೆಂಡ್' ಕೂಡ ಅಂಥದ್ದೇ ಒಂದು ಲವ್ ಸ್ಟೋರಿ'' ಎಂದು ತಿಳಿಸಿದ್ದರು.
ಫಸ್ಟ್ ಲುಕ್ನಲ್ಲಿ ರಶ್ಮಿಕಾ ಮಂದಣ್ಣ ನೀರಿನೊಳಗೆ ಉಸಿರು ಬಿಗಿಹಿಡಿದ ನೋಟದಲ್ಲಿ ಕಾಣಿಸಿಕೊಂಡಿದ್ದರು. ರಾಹುಲ್ ರವೀಂದ್ರನ್ ಈ ಪ್ರೇಮಕಥೆಯ ಬರಹಗಾರ ಮತ್ತು ನಿರ್ದೇಶಕರಾಗಿ ಚಿತ್ರತಂಡದ ಭಾಗವಾಗಿದ್ದಾರೆ. ಶ್ರೀನಿವಾಸ ಕುಮಾರ್ ನಾಯ್ಡು, ವಿದ್ಯಾ ಕೊಪ್ಪಿನೀಡಿ ಮತ್ತು ಧೀರಜ್ ಮೊಗಿಲಿನೇನಿ ಹಣ ಹೂಡಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್ ಅಡಿ ಅಲ್ಲು ಅರವಿಂದ್ ಪ್ರಸ್ತುತಪಡಿಸಲಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಲಿದ್ದಾರೆ.