ಕರ್ನಾಟಕ

karnataka

ETV Bharat / entertainment

ಪುಷ್ಪ 2 ಶೂಟಿಂಗ್ ಸೆಟ್​​ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ.. ಗರಿಗೆದರಿದ ಕುತೂಹಲ - ಪುಷ್ಪ ದಿ ರೂಲ್​​​

Rashmika Mandanna: ಬಹುನಿರೀಕ್ಷಿತ 'ಪುಷ್ಪ: ದಿ ರೂಲ್​​​' ಶೂಟಿಂಗ್​ ಸೆಟ್​ ಫೋಟೋ ಹಂಚಿಕೊಂಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

Rashmika Mandanna shares pushpa 2  shooting set photo
ಪುಷ್ಪ 2 ಶೂಟಿಂಗ್ ಸೆಟ್​​ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

By ETV Bharat Karnataka Team

Published : Sep 8, 2023, 3:17 PM IST

ನ್ಯಾಶನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2 ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. 'ಪುಷ್ಪ: ದಿ ರೈಸ್​' ಸಿನಿಮಾದಲ್ಲಿ ಟಾಲಿವುಡ್​ ಸ್ಟೈಲಿಶ್​ ಐಕಾನ್​​ ಅಲ್ಲು ಅರ್ಜುನ್​ ಜೊತೆ ಸ್ಕ್ರೀನ್​​ ಶೇರ್ ಮಾಡಿದ ಕೊಡಗಿನ ಕುವರಿ ಪ್ರಸ್ತುತ ಸೀಕ್ವೆಲ್​ ಶೂಟಿಂಗ್​ನಲ್ಲಿ ನಿರತರಾಗಿದ್ದಾರೆ. ಸಿನಿಮಾ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಸ್ಯಾಂಡಲ್​ವುಡ್​ನಿಂದ ವೃತ್ತಿಜೀವನ ಆರಂಭಿಸಿ ಸದ್ಯ ಟಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ 'ಪುಷ್ಪ: ದಿ ರೈಸ್​'ನ ಮುಂದುವರಿದ ಭಾಗವಾದ 'ಪುಷ್ಪ: ದಿ ರೂಲ್​​​'ನ ಶೂಟಿಂಗ್​ ಅನ್ನು ಜೂನ್​ನಲ್ಲಿ ಪ್ರಾರಂಭಿಸಿದ್ದಾರೆ. ಪುಷ್ಪ 2 ಶೂಟಿಂಗ್​ ಸೆಟ್​​ನ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಚಿತ್ರದ ಕುರಿತು ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

ಇಂದು ನಟಿ ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇನ್​ಸ್ಟಾ ಸ್ಟೋರಿಯಲ್ಲಿ ಪುಷ್ಪಾ 2 ಎಂದು ಬರೆದುಕೊಂಡಿದ್ದಾರೆ. ಬ್ಲ್ಯಾಕ್​ ಅಂಡ್​​​ ವೈಟ್​ ಫೋಟೋ ಇದಾಗಿದ್ದು, ಬ್ಲ್ಯಾಕ್​ ಹಾರ್ಟ್ ಇಮೋಜಿ ಹಾಕಿಕೊಂಡಿದ್ದಾರೆ. ಮೋನೋಕ್ರೋಮ್​ ಫೋಟೋ ಬಂಗಲೆಯೊಂದರ ಆಂತರಿಕ ನೋಟವನ್ನು ಒಳಗೊಂಡಿದೆ. ಈ ಹಿನ್ನೆಲೆ ಯಾವ ಭಾಗದ ಶೂಟಿಂಗ್​ ನಡೆಯುತ್ತಿರಬಹುದೆಂದು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.

'ಪುಷ್ಪ: ದಿ ರೈಸ್​' ಸಿನಿಮಾ 2021 ರ ಡಿಸೆಂಬರ್​ 17 ರಂದು ತೆರೆಕಂಡಿತು. ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಆಗಿದೆ. ಸುಕುಮಾರ್​ ನಿರ್ದೇಶನದ ಈ ಸಿನಿಮಾ ಬಹುಕೋಟಿ ಸಂಗ್ರಹ ಮಾಡುವಲ್ಲಿ ಯಶ ಕಂಡಿದೆ. ಇದೇ ಚಿತ್ರಕ್ಕಾಗಿ ಬಹುಬೇಡಿಕೆ ನಟ ಅಲ್ಲು ಅರ್ಜುನ್​​ ರಾಷ್ಟ್ರೀಯ ಪ್ರಶಸ್ತಿ (ಅತ್ಯುತ್ತಮ ನಟ) ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಶ್ರೀವಲ್ಲಿ ಪಾತ್ರ ನಿರ್ವಹಿಸಿದ್ದರು. ಸಾಮಿ ಸಾಮಿ ಹಾಡಿಗೆ ಸೊಂಟ ಬಳುಕಿಸಿ ಸಖತ್​ ಫೇಮಸ್​ ಆದ್ರು. ಆ ಸಂದರ್ಭ ಸೋಷಿಯಲ್​ ಮೀಡಿಯಾದಲ್ಲಿ ಸಾಮಿ ಸಾಮಿಯದ್ದೇ ಸದ್ದು. ಪುಷ್ಪ ದಿ ರೂಲ್​ ಸಿನಿಮಾದಲ್ಲಿಯೂ ರಶ್ಮಿಕಾ ಶ್ರೀವಲ್ಲಿ ಪಾತ್ರ ಮುಂದುವರಿಸಲಿದ್ದಾರೆ. ಸುಕುಮಾರ್​ ಆ್ಯಕ್ಷನ್​ ಕಟ್​ ಹೇಳುತ್ತಿರುವ ಈ ಚಿತ್ರ ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರದಲ್ಲಿ ಫಹಾದ್​ ಫಾಸಿಲ್​ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ:Pushpa 2: ಅಲ್ಲು ಅರ್ಜುನ್ ದಿನಚರಿ.. ರಾಷ್ಟ್ರಪ್ರಶಸ್ತಿ ವಿಜೇತ ನಟನ ಮನೆ, ಪುಷ್ಪ ಸೆಟ್​​ ಹೇಗಿದೆ ನೋಡಿ..

ನಟ ಅಲ್ಲು ಅರ್ಜುನ್​ ಇತ್ತೀಚೆಗಷ್ಟೇ ವಿಡಿಯೋವೊಂದನ್ನು ಶೇರ್ ಮಾಡಿದ್ದರು. 2 ನಿಮಿಷ 20 ಸೆಕೆಂಡ್ಸ್​ ವಿಡಿಯೋದಲ್ಲಿ ನಟನ ದಿನಚರಿ, ಮನೆ ಜೊತೆಗೆ ಪುಷ್ಪ ದಿ ರೂಲ್​ ಸಿನಿಮಾದ ಶೂಟಿಂಗ್​ ಸೆಟ್ ಅನ್ನು ತೋರಿಸಲಾಗಿತ್ತು.​ ಜನಪ್ರಿಯ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಇನ್​ಸ್ಟಾಗ್ರಾಮ್​ ತಂಡವೇ ನಟನ ಮನೆಗೆ ಭೇಟಿ ಕೊಟ್ಟು ಈ ವಿಡಿಯೋ ರೆಡಿ ಮಾಡಿತ್ತು.

ಇದನ್ನೂ ಓದಿ:'ಎಸ್‌ಆರ್‌ಕೆ ಸಿನಿಮಾ ಗಾಡ್, ನಿಮ್ಮ ಪರಿಶ್ರಮ, ನಮ್ರತೆಗೆ ನನ್ನ ನಮಸ್ಕಾರ': ಕಂಗನಾ ಗುಣಗಾನ

ABOUT THE AUTHOR

...view details