'ನ್ಯಾಶನಲ್ ಕ್ರಶ್' ಜನಪ್ರಿಯತೆಯ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಬಗೆಬಗೆಯ ಫೋಟೋ, ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ. ದಿನನಿತ್ಯದ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕವೂ ಅಭಿಮಾನಿಗಳಿಗೆ ಹತ್ತಿರವಾಗುತ್ತಾರೆ. ಸ್ಫೂರ್ತಿದಾಯಕ ಬರಹಗಳ ಮೂಲಕವೂ ಗಮನ ಸೆಳೆಯುತ್ತಾರೆ. ಸದಾ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ 'ಕಿರಿಕ್ ಪಾರ್ಟಿ' ಬೆಡಗಿ, ತಮ್ಮ ಸಾಮಾಜಿಕ ಮಾಧ್ಯಮದಲ್ಲಿಂದು ಪೌಟ್-ಫೇಸ್ ಸೆಲ್ಫಿಯನ್ನು ಪ್ರಕಟಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೌಟ್-ಫೇಸ್ ಸೆಲ್ಫಿ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, "ನನಗೆ ಹೇಗೆ ಪೌಟ್ ಮಾಡಬೇಕೆಂದು ತಿಳಿದಿಲ್ಲ, ಹಾಗಾಗಿ ಇದು ನೇರವಾಗಿ ಕಿಸ್ಸಿ" ಎಂದು ಬರೆದುಕೊಂಡಿದ್ದಾರೆ. ಅತೀ ಕಡಿಮೆ ಮೇಕಪ್ನಲ್ಲಿ ನಟಿ ಕಾಣಿಸಿಕೊಂಡಿದ್ದು, ಸಿಂಪಲ್ ಗೋಲ್ಡ್ ಚೈನ್ ಮತ್ತು ಕಿವಿಯೋಲೆ ಧರಿಸಿದ್ದಾರೆ. ಬಹುಭಾಷಾ ತಾರೆ ಪೋಸ್ಟ್ ಹಂಚಿಕೊಂಡ ಕೂಡಲೇ ಅಭಿಮಾನಿಗಳು ಕಾಮೆಂಟ್ ವಿಭಾಗಕ್ಕೆ ಸೇರಿ ಪ್ರೀತಿ ಮತ್ತು ಅಭಿನಂದನೆಗಳ ಮಳೆಗೈದರು.
ಅಭಿಮಾನಿಯೊಬ್ಬರು, "ಇದು ಪ್ರತಿಯೊಬ್ಬರ ದಿನವನ್ನು ಉತ್ತಮಪಡಿಸುತ್ತದೆ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ನ್ಯಾಶನಲ್ ಕ್ರಶ್" ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೋರ್ವ ಅಭಿಮಾನಿ, "ಜನರು ಒಂದೇ ಒಂದು ಚಂದ್ರ ಇರುವುದು ಎಂದು ಹೇಳುತ್ತಾರೆ, ಆದರೆ ಜನರ ಭಾವಿಸುವಿಕೆ ತಪ್ಪು, ಭೂಮಿಯಲ್ಲಿ ಒಂದು ಚಂದ್ರವಿದೆ, ಅದು ಯಾರೆಂದು ನಿಮಗೆ ತಿಳಿದಿದೆ, ಅದು ಒಬ್ಬರೇ, ಆ ಚಂದ್ರ ನೀವೇ ರಶ್ಮಿಕಾ ಮಂದಣ್ಣ'' ಎಂದು ಹೊಗಳಿದ್ದಾರೆ.
ಮೇಕಪ್ ಇಲ್ಲದೇ ಫೋಟೋ ಹಂಚಿಕೊಂಡ ಹಿನ್ನೆಲೆಯಲ್ಲಿ ಕೆಲವರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಮುಖದ ಮೇಲಿನ ಕೂದಲನ್ನು ಗಮನಿಸಿದ ನೆಟ್ಟಿಗರು, ''ನಿಮಗೆ ಗಡ್ಡ ಬಂದಿದೆ, ಮೇಡಂ ಮುಖದಲ್ಲಿ ದಾಡಿ ಇದೆ'' ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು "ಸ್ವಲ್ಪ ಸ್ವಲ್ಪ ಗಡ್ಡ ಬರುತ್ತಿದೆ'' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, "ರಶ್ಮಿಕಾ ಜಿ ಶೇವ್ ಮಾಡಿ, ಗಡ್ಡ ಕಾಣುತ್ತಿದೆ'' ಎಂದು ಬರೆದಿದ್ದಾರೆ.