ಕರ್ನಾಟಕ

karnataka

ETV Bharat / entertainment

ಬ್ಯುಸಿ ಶೆಡ್ಯೂಲ್​ನಿಂದ ಶೀಟ್​ ಮಾಸ್ಕ್​ ಮೂಲಕ ತ್ವಚೆ ಆರೈಕೆಗೆ ಮುಂದಾದ ರಶ್ಮಿಕಾ ಮಂದಣ್ಣ - ರಶ್ಮಿಕಾ ಆರೋಗ್ಯ ಕಾಳಜಿ

ಕಳೆದ ಏಳು ವರ್ಷದಿಂದ ಒಂದರ ಮೇಲೆ ಒಂದು ಹಿಟ್​​​ ಸಿನಿಮಾ ನೀಡಿರುವ ನಟಿ ರಶ್ಮಿಕಾ ಇದೀಗ ಬಹು ಬೇಡಿಕೆಯ ನಟಿಯಾಗಿದ್ದಾರೆ.

rashmika-mandanna-pampers-herself-with-sheet-mask-amid-busy-schedule
rashmika-mandanna-pampers-herself-with-sheet-mask-amid-busy-schedule

By ETV Bharat Karnataka Team

Published : Jan 10, 2024, 4:08 PM IST

ರಶ್ಮಿಕಾ ಮಂದಣ್ಣ ಇತ್ತೀಚಿಗೆಷ್ಟೆ ತಮ್ಮ ಬಾಲಿವುಡ್​ ಸಿನಿಮಾ 'ಅನಿಮಲ್'​ ಯಶಸ್ಸಿನ ಪಾರ್ಟಿ ಮುಗಿಸಿದ್ದಾರೆ. ದಕ್ಷಿಣ ಮತ್ತು ಹಿಂದಿ ಚಿತ್ರದಲ್ಲಿ ಸದ್ಯ ಬೇಡಿಕೆ ನಟಿಯಾಗಿ ಮಿಂಚುತ್ತಿರುವ ನಟಿ ರಶ್ಮಿಕಾಗೆ 'ಅನಿಮಲ್'​ ಸಿನಿಮಾ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ನೀಡಿದೆ. ಈಗಾಗಲೇ ತೆಲುಗಿನ ಗೀತಾ ಗೋವಿಂದಂ, ಸೀತಾ ರಾಮಂ ಸೇರಿದಂತೆ ಹಲವು ಸೂಪರ್​ ಡೂಪರ್​ ಸಿನಿಮಾಗಳ ಮೂಲಕ ನ್ಯಾಷನಲ್​ ಕ್ರಶ್​​ ಪಟ್ಟಕ್ಕೂ ಏರಿದ್ದರು. ತಮ್ಮ ಬಿಡುವಿಲ್ಲದ ಸಿನಿಮಾ ಶೂಟಿಂಗ್​ಗಳ ನಡುವೆಯೂ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಸಕ್ರಿಯವಾಗಿರುವ ಈ ನಟಿ ಅಭಿಮಾನಿಗಳೊಂದಿಗೆ ತಮ್ಮ ಫೋಟೋ ಮತ್ತು ಅನಿಸಿಕೆಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ಅಭಿಮಾನಿಗಳೊಂದಿಗೆ ಫೇಸ್​ ಮಾಸ್ಕ್​​ ಹಾಕಿರುವ ಚಿತ್ರವನ್ನು ಹಂಚಿಕೊಂಡಿದ್ದು, ತಮ್ಮ ಆರೈಕೆ ಕುರಿತು ತಿಳಿಸಿದ್ದಾರೆ. ಈ ಚಿತ್ರದ ಜೊತೆಗೆ ಅವರು ಈ ರೀತಿಯ ಸಾಲುಗಳನ್ನು ಬರೆದಿದ್ದಾರೆ. ಏನು ಮಾಡುವುದು - ಅತಿಯಾದ ಕೆಲಸ - ನಿದ್ರೆ ಇಲ್ಲ- ಬಿಡುವಿರದ ಪ್ರಯಾಣದಿಂದ ತ್ವಚೆಗೆ ವಿಶ್ರಾಂತಿ ಇಲ್ಲವಾಗಿದೆ. ತ್ವಚೆ ತಜ್ಞರ ಬಳಿ ಕೂಡ ಹೋಗಲು ಸಮಯ ಸಿಗುತ್ತಿಲ್ಲ. ಹೀಗಾಗಿ ಏನು ಮಾಡುತ್ತೀರಾ.. ಒಂದು ಪರಿಹಾರ ಇದೆ - ಶೀಟ್​ ಮಾಸ್ಕ್​ ಎಂದು ಬರೆದು ತ್ವಚೆ ಮಾಸ್ಕ್​ ಹಾಕಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಬಿಡುವಿಲ್ಲದ ದಿನಚರಿ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಜೊತೆಗೆ ತಮ್ಮ ಕೆಲಸದ ಬದ್ಧತೆಯ ನಡುವೆಯೂ ತಮ್ಮ ಕಾಳಜಿಗೆ ಸಮಯ ಮೀಸಲಿಟ್ಟಿರುವುದಾಗಿ ತಿಳಿಸಿದ್ದಾರೆ.

ನಟಿ ರಶ್ಮಿಕಾ ಕಳೆದ ಡಿಸೆಂಬರ್​ನಲ್ಲಿ ತಮ್ಮ ಸಿನಿ ಪಯಣದಲ್ಲಿ ಏಳು ವರ್ಷಗಳು ಪೂರೈಸಿದ ಕುರಿತು ತಿಳಿಸಿದ್ದರು. ರಿಷಬ್​ ಶೆಟ್ಟಿ ನಿರ್ದೇಶನದಲ್ಲಿ ಕನ್ನಡದ 'ಕಿರಿಕ್​ ಪಾರ್ಟಿ' ಚಿತ್ರದ ಮೂಲಕ 2016ರಲ್ಲಿ ಸಿನಿಮಾ ಪ್ರವೇಶಿಸಿದ ರಶ್ಮಿಕಾ ಬಳಿಕ ತೆಲುಗು ಚಿತ್ರದಲ್ಲಿ ಹಲವು ಹಿಟ್​ ಸಿನಿಮಾ ನೀಡುವ ಮೂಲಕ ಸೂಪರ್ ಹಿಟ್​ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ತಮಿಳಿನಲ್ಲೂ ನಟ ವಿಜಯ್​ ಜೊತೆ ನಟಿಸಿರುವ ರಶ್ಮಿಕಾ ಕಳೆದ ವರ್ಷ ಅಮಿತಾಬ್​ ಬಚ್ಚನ್​ ಅವರೊಂದಿಗೂ ಅಭಿನಯಿಸುವ ಮೂಲಕ 'ಗುಡ್​ಬೈ' ಚಿತ್ರದೊಂದಿಗೆ ಹಿಂದಿ ಸಿನಿಮಾದ ಪಯಣ ಆರಂಭಿಸಿದ್ದರು. ಇದಾದ ಬಳಿಕ ನಟ ಸಿದ್ಧಾರ್ಥ್​ ಮಲ್ಹೋತ್ರಾ ಜೊತೆಗೆ 'ಮಿಷನ್​ ಮಜ್ನು' ಚಿತ್ರದಲ್ಲಿ ನಟಿಸಿದ ಅವರಿಗೆ ಸಂದೀಪ್​ ರೆಡ್ಡಿ ವಾಂಗಾ ಅವರ ನಿರ್ದೆಶನದ 'ಅನಿಮಲ್​' ಸಿಕ್ಕಾಪಟ್ಟೆ ಯಶಸ್ಸು ತಂದುಕೊಟ್ಟಿದೆ. ಚಿತ್ರದಲ್ಲಿ ನಟ ರಣಬೀರ್​ ಕಪೂರ್​ ಹೆಂಡತಿಯಾಗಿ ರಶ್ಮಿಕಾ ಮಿಂಚಿದ್ದಾರೆ.

ಸದ್ಯ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಸಿನಿಮಾದಲ್ಲಿ ಅತ್ಯಂತ ಬ್ಯುಸಿಯಾಗಿದ್ದಾರೆ ನಟಿ ರಶ್ಮಿಕಾ ಮಂದಣ್ಣ. 'ಪುಷ್ಪ 2: ದಿ ರೂಲ್'​ನಲ್ಲಿ ಮತ್ತೆ ಶ್ರೀವಲ್ಲಿ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್​ ಭರದಿಂದ ಸಾಗಿದ್ದು, ನಟ ಅಲ್ಲು ಅರ್ಜುನ್​, ಫಹಾದ್​ ಫಾಸಿಲ್​, ಜಗಪತಿಬಾಬು, ಪ್ರಕಾಶ್​ ರಾಜ್​, ಸುನೀಲ್​ ಸೇರಿದಂತೆ ಪ್ರಮುಖರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ 'ದಿ ಗರ್ಲ್​​ಫ್ರೆಂಡ್'​ ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ ನಟಿ ರಶ್ಮಿಕಾ.

ಇದನ್ನೂ ಓದಿ:ಮೂರು ಚಿತ್ರದೊಂದಿಗೆ 700 ಕೋಟಿ ಕ್ಲಬ್​ ಸೇರಿದ ದಕ್ಷಿಣ ಭಾರತದ ಏಕೈಕ ನಟ ಪ್ರಭಾಸ್​​

ABOUT THE AUTHOR

...view details