ಕರ್ನಾಟಕ

karnataka

ETV Bharat / entertainment

Rashmika Mandanna: ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆಗೆ ಸಿಕ್ತು ಉತ್ತರ.. ಧನುಷ್​ ಜೊತೆಗೆ ಕಿರಿಕ್​ ಬೆಡಗಿ ಸಿನಿಮಾ - ಕೊಡಗಿನ ಬೆಡಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ

'ಪುಷ್ಪ-2' ಸಿನಿಮಾ ಬಳಿಕ ರಶ್ಮಿಕಾ ಮುಂದಿನ ಸಿನಿಮಾ ಯಾವುದು ಎಂಬ ಚರ್ಚೆ ಟಾಲಿವುಡ್​ನಲ್ಲಿ ಜೋರಾಗಿತ್ತು. ಅದಕ್ಕೆ ಅವರೇ ಇಂದು ಉತ್ತರಿಸಿದ್ದಾರೆ.

Rashmika Mandanna next film with Dhanush in D 51
Rashmika Mandanna next film with Dhanush in D 51

By

Published : Aug 14, 2023, 1:38 PM IST

ಬೆಂಗಳೂರು: 'ಪುಷ್ಟ' 2 ಸಿನಿಮಾದ ಬಳಿಕ ದಕ್ಷಿಣ ಭಾರತದ ಯಾವುದೇ ಸಿನಿಮಾದಲ್ಲಿ ಬ್ಯುಸಿಯಾಗಿರದ ನಟಿ ರಶ್ಮಿಕಾ ಮಂದಣ್ಣ ಮುಂದಿನ ಸಿನಿಮಾ ಯಾವುದು? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ತಮ್ಮ ಮುಂದಿನ ಚಿತ್ರದ ಕುರಿತು ಅಭಿಮಾನಿಗಳಿಗೆ ಇಂದು ಕೊಡಗಿನ ಬೆಡಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. 'ಡಿ 51' ಎಂಬ ಆಫರ್​ ಒಪ್ಪಿಕೊಂಡಿರುವ ನಟಿ ಇದೀಗ ತಮಿಳು ನಟ ಧನುಷ್​ ಜೊತೆ ನಟನೆಗೆ ಸಜ್ಜಾಗಿದ್ದಾರೆ. ಹ್ಯಾಪಿಡೇಸ್​ ಮತ್ತು ಲವ್​ ಸ್ಟೋರಿಯಂತಹ ಹಿಟ್​ ಸಿನಿಮಾ ನೀಡಿದ್ದ ನಿರ್ದೇಶಕ ಶೇಖರ್​ ಕಮ್ಮುಲಾ ಜೊತೆಗೆ ಧನುಷ್​ ನಟಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಸದ್ಯ 'ಡಿ 51' ಎಂದು ತಾತ್ಕಾಲಿಕವಾಗಿ ನಾಮಕರಣ ಮಾಡಲಾಗಿದೆ. ಇದೀಗ ಈ ಚಿತ್ರ ತಂಡವನ್ನು ನಟಿ ಸೇರಿಕೊಂಡಿದ್ದು, ಧನುಷ್​ಗೆ ನಾಯಕಿಯಾಗಲಿದ್ದಾರೆ.

ಇದೇ ಮೊದಲ ಬಾರಿಗೆ ನಟಿ ರಶ್ಮಿಕಾ ಮಂದಣ್ಣ, ನಿರ್ದೇಶಕ ಶೇಖರ್​ ಕಮ್ಮುಲ, ನಟ ಧನುಷ್​ ಹಾಗೂ ಶ್ರೀ ವೆಂಕಟೇಶ್ವರ ಸಿನಿಮಾಸ್​ ಎಲ್​ಎಲ್​ಪಿ ಯಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷತೆ ಅಂದ್ರೆ, ಇದು ನಟ ಧನುಷ್​ ಅವರ ಮೊದಲ ತೆಲುಗು ಸಿನಿಮಾ ಆಗಿದೆ. ಈ ಚಿತ್ರದ ಪೂರ್ವ ನಿರ್ಮಾಣ ಆರಂಭವಾಗಿದ್ದು, ಡಿಸೆಂಬರ್​ನಿಂದ ಶೂಟಿಂಗ್​ ಆರಂಭಿಸಲಿದೆ. ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್‌ಎಲ್‌ಪಿಯ ಸುನೀಲ್ ನಾರಂಗ್ ಮತ್ತು ಪುಸ್ಕರ್ ರಾಮ್ ಮೋಹನ್ ರಾವ್ ಸಹಯೋಗದೊಂದಿಗೆ ಅಮಿಗೊಸ್​​ ಕ್ರಿಯೇಷನ್​ ಪ್ರೈವೇಟ್​ ಲಿಮಿಟೆಡ್​​ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ.

ಧನುಷ್​ ಮತ್ತು ಶೇಖರ್​ ಕಮ್ಮುಲ ಅವರ ಈ ಬಿಗ್​​ ಬಜೆಟ್​ ಚಿತ್ರ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ವಿವಿಧ ಭಾಷೆಯ ಕೆಲವು ನಟರು ಕೂಡ ನಟಿಸುವ ಸಾಧ್ಯತೆ ಇದ್ದು, ಈ ಕುರಿತು ಇನ್ನೂ ಅಂತಿಮ ಘೋಷಣೆ ಹೊರಬಿದ್ದಿಲ್ಲ.

ಧನುಷ್​ ಸದ್ಯ 'ಕ್ಯಾಪ್ಟನ್​ ಮಿಲ್ಲರ್'​ನಲ್ಲಿ ನಟಿಸುತ್ತಿದ್ದು, ಇದನ್ನು ಅರುಣ್​ ಮಂಥೇಶ್ವರನ್​ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಟೀಸರ್​ ಅನ್ನು ನಟ ಧನುಷ್​ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದಲ್ಲಿ ಸ್ಯಾಂಡಲ್​ ವುಡ್​ ನಟ ಶಿವರಾಜ್​ ಕುಮಾರ್​, ಸುದೀಪ್​ ಕಿಶನ್​ ಮತ್ತು ಪ್ರಿಯಾಂಕಾ ಅರುಲ್​ ಮೋಹನ್​ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಬಳಿಕ ಡಿ 51 ಚಿತ್ರ ಸೆಟ್ಟೇರಲಿದೆ.

ಇನ್ನು, ನಟಿ ರಶ್ಮಿಕಾ 'ಪುಷ್ಪ: ದಿ ರೂಲ್'​ ಚಿತ್ರದ ಎರಡನೇ ಶೂಟಿಂಗ್​ ಶೆಡ್ಯೂಲ್​ ಅನ್ನು ಈ ತಿಂಗಳ ಬಳಿಕ ಸೇರಲಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಬಾಲಿವುಡ್​ನಲ್ಲಿ ಅವರ 'ರೈನ್​ಬೋ' ಮತ್ತು 'ಅನಿಮಲ್'​ ಸಿನಿಮಾಗಳು ಕೂಡ ಥಿಯೇಟರ್​ ಬಿಡುಗಡೆಗೆ ಸಜ್ಜಾಗಿವೆ.

ಇದನ್ನೂ ಓದಿ: ಚಿಯಾನ್​​ ವಿಕ್ರಮ್​ ನಟನೆಯ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ವಿಜಯ್​ ಸೇತುಪತಿ?

ABOUT THE AUTHOR

...view details