ಕರ್ನಾಟಕ

karnataka

ETV Bharat / entertainment

'ಗೀತಾಂಜಲಿ'ಯಾದ ನಟಿ ರಶ್ಮಿಕಾ ಮಂದಣ್ಣ: 'ಅನಿಮಲ್'​ ಪೋಸ್ಟರ್ ಅನಾವರಣ - ಗೃಹಿಣಿ ನೋಟದಲ್ಲಿ ನ್ಯಾಶನಲ್​ ಕ್ರಶ್ - ಅನಿಮಲ್

Meet Geetanjali from Animal: ಬಹುನಿರೀಕ್ಷಿತ 'ಅನಿಮಲ್'​ ಸಿನಿಮಾದಿಂದ ನಟಿ ರಶ್ಮಿಕಾ ಮಂದಣ್ಣ ಪಾತ್ರದ ಪರಿಚಯವಾಗಿದೆ.

rashmika mandanna first look
ಗೀತಾಂಜಲಿಯಾಗಿ ರಶ್ಮಿಕಾ ಮಂದಣ್ಣ

By ETV Bharat Karnataka Team

Published : Sep 23, 2023, 5:15 PM IST

ನ್ಯಾಶನಲ್​ ಕ್ರಶ್​​ ರಶ್ಮಿಕಾ ಮಂದಣ್ಣ ಸದ್ಯ ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸರಣಿ ಸಿನಿಮಾಗಳ ಶೂಟಿಂಗ್​ನಲ್ಲಿ ಬ್ಯುಸಿ ಇರುವ ನಟಿಮಣಿ ಇವರು. ಈಗಾಗಲೇ ಬಾಲಿವುಡ್​ ಪ್ರವೇಶಿಸಿರುವ ರಶ್ಮಿಕಾ ಮಂದಣ್ಣ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಅನಿಮಲ್'​. ಇದೇ ಮೊದಲ ಬಾರಿ ಬಾಲಿವುಡ್​ ಸೂಪರ್​ ಸ್ಟಾರ್​ ರಣ್​ಬೀರ್​ ಕಪೂರ್​ ಜೊತೆ ಸ್ಕ್ರೀನ್​ ಶೇರ್ ಮಾಡಿದ್ದು, ಚಿತ್ರದ ಕುರಿತು ಪ್ರೇಕ್ಷಕರಲ್ಲಿ ಬೆಟ್ಟದಷ್ಟು ನಿರೀಕ್ಷೆಗಳಿವೆ.

ರಶ್ಮಿಕಾ ಮಂದಣ್ಣ ಫಸ್ಟ್ ಲುಕ್: ತೆರೆಕಾಣಲು ಸಜ್ಜಾಗುತ್ತಿರುವ ಆ್ಯಕ್ಷನ್ ಸಿನಿಮಾ 'ಅನಿಮಲ್‌'ನ ನಿರ್ಮಾಪಕರು ಇಂದು ನಟಿ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ. ಗ್ಯಾಂಗ್‌ಸ್ಟರ್ ಕಥೆಯನ್ನಾಧರಿಸಿದ ಚಿತ್ರದಿಂದ ಬಾಲಿವುಡ್​ ನಟರಾದ ರಣ್​​ಬೀರ್ ಕಪೂರ್ ಮತ್ತು ಅನಿಲ್ ಕಪೂರ್ ಅವರ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಅನಾವರಣಗೊಳಿಸಿದ ನಂತರ ಚಿತ್ರ ತಯಾರಕರಿಂದು ರಶ್ಮಿಕಾ ಅವರ ಪಾತ್ರದ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದ್ದಾರೆ.

'ಅನಿಮಲ್'​ ಪೋಸ್ಟರ್​

ಗೀತಾಂಜಲಿಯಾಗಿ ರಶ್ಮಿಕಾ ಮಂದಣ್ಣ:ಸಿನಿಮಾದಲ್ಲಿ ರಶ್ಮಿಕಾ ಇದ್ದಾರೆ ಎಂಬುದು ಬಿಟ್ಟರೆ, ಅವರ ಪಾತ್ರದ ಕುರಿತಾಗಲಿ ಅಥವಾ ನೋಟದ ಕುರಿತಾಗಲಿ ಚಿತ್ರತಂಡ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ಆದ್ರಿಂದು ಬಿಡುಗಡೆ ಆಗಿರುವ ಪೋಸ್ಟರ್ ಸಿನಿಮಾ ಕುರಿತ ಕುತೂಹಲವನ್ನು ಹೆಚ್ಚಿಸಿದೆ ಜೊತೆಗೆ ರಶ್ಮಿಕಾ ನಟನೆ ಕಣ್ತುಂಬಿಕೊಳ್ಳುವ ಆಸೆಯನ್ನೂ ಹೆಚ್ಚಳ ಮಾಡಿದೆ. ನ್ಯಾಶನಲ್​ ಕ್ರಶ್​​ ರಶ್ಮಿಕಾ ಮಂದಣ್ಣ ಅನಿಮಲ್​ ಸಿನಿಮಾದಲ್ಲಿ ಗೀತಾಂಜಲಿ ಪಾತ್ರ ವಹಿಸಿದ್ದಾರೆ. ಹೆಸರೇ ಬಹಳ ವಿಶೇಷವಾಗಿದ್ದು, ಪಾತ್ರವೂ ಅದ್ಭುತವಾಗಿರಲಿದೆ ಎಂಬುದು ಅಭಿಮಾನಿಗಳ ವಿಶ್ವಾಸ. ಬಣ್ಣದ ಲೋಕದ ಬೆಡಗಿ ರಶ್ಮಿಕಾ ಮಂದಣ್ಣ ಸಾದಾ ಸೀರೆಯುಟ್ಟು, ಸಹಜ ಸುಂದರಿಯಾಗಿ ಕಾಣಿಸಿಕೊಂಡಿದ್ದಾರೆ. ಕೊರಳಲ್ಲಿ ಮಾಂಗಲ್ಯ ಸರವಿದ್ದು, ಗೃಹಿಣಿಯ ನೋಟ ಬೀರಿದ್ದಾರೆ. ಪೋಸ್ಟರ್ ಕಂಡ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿದೆ.

ಅನಿಮಲ್‌ ಸಿನಿಮಾ ನಿರ್ಮಾಣ ಮಾಡಿರುವ ಟಿ-ಸೀರಿಸ್ ಫಿಲ್ಮ್ಸ್ ಇಂದು ನಟಿ ರಶ್ಮಿಕಾ ಮಂದಣ್ಣ ಅವರ ಪೋಸ್ಟರ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದೆ. "ಗೀತಾಂಜಲಿಯಾಗಿ ರಶ್ಮಿಕಾ ಮಂದಣ್ಣ" ಎಂದು ಪೋಸ್ಟ್​​ಗೆ ಶೀರ್ಷಿಕೆ ಕೊಟ್ಟಿದೆ. ಪೋಸ್ಟರ್‌ನಲ್ಲಿ, ಕಿರಿಕ್​ ಪಾರ್ಟಿ ಬೆಡಗಿ ಮರೂನ್ ಆ್ಯಂಡ್​ ಕ್ರೀಮ್​ ಕಲರ್​ ಸೀರೆಯುಟ್ಟಿದ್ದಾರೆ. ಕೊರಳಲ್ಲಿ ತಾಳಿ, ಹಣೆಯಲ್ಲಿ ಸಿಂಧೂರ. ಒಟ್ಟಾರೆ ಪೋಸ್ಟರ್ ಬಹಳ ಆಕರ್ಷಕ, ಕುತೂಹಲಕಾರಿಯಾಗಿದೆ.

ಗುರುವಾರದಂದು ಅನಿಲ್ ಕಪೂರ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಅನಾವರಣಗೊಳಿಸಿತ್ತು. ಪೋಸ್ಟರ್‌ನಲ್ಲಿ, ಅನಿಲ್ ಅವರ ಎದೆಯ ಮೇಲೆ ಬ್ಯಾಂಡೇಜ್ ಹಾಕಲಾಗಿದ್ದು, ಕುರ್ಚಿ ಮೇಲೆ ಕುಳಿತಿರುವ ಪೋಸ್ಟರ್ ಅದಾಗಿತ್ತು. ನಟನ ಮೊಗದ ಗಂಭೀರ ಭಾವವೇ ಪೋಸ್ಟರ್​ನ ಹೈಲೆಟ್​ ಆಗಿತ್ತು. ಚಿತ್ರದಲ್ಲಿ ಅನಿಲ್ ಕಪೂರ್​, ಬಲ್ಬೀರ್ ಸಿಂಗ್ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ:ಹೊಳೆಯುವ ಉಡುಗೆ, ಕಂಗೊಳಿಸುವ ಕಣ್ಣು; ಸೌಂದರ್ಯದ ನಿಧಿ ಶ್ರೀನಿಧಿ ಶೆಟ್ಟಿ ಚೆಲುವಿಗೆ ಮನಸೋಲದವರಾರು?

ಅನಿಮಲ್ ಟೀಸರ್ ಸೆಪ್ಟೆಂಬರ್ 28ರಂದು ಬಿಡುಗಡೆ ಆಗಲಿದೆ. ನಾಯಕ ನಟ ರಣ್​​ಬೀರ್ ಕಪೂರ್​​ ಸೆಪ್ಟೆಂಬರ್ 28ರಂದು ಜನ್ಮದಿನ ಆಚರಿಸಿಕೊಳ್ಳಲಿರುವ ಹಿನ್ನೆಲೆ ಅಂದು ಕುತೂಹಲಕಾರಿ ಟೀಸರ್​ ಅನ್ನು ಬಿಡುಗಡೆ ಮಾಡಲು ಚಿತ್ರತಯಾರಕರು ನಿರ್ಧರಿಸಿದ್ದಾರೆ. ಈ ಹಿಂದೆ ಆಗಸ್ಟ್ 11 ರಂದು ಚಿತ್ರ ಬಿಡುಗಡೆಗೊಳ್ಳಲು ನಿರ್ಧರಿಸಲಾಗಿತ್ತು. ಆದ್ರೆ ಬಹುನಿರೀಕ್ಷಿತ ಗದರ್ 2 ಮತ್ತು ಓಎಂಜಿ 2 ಸಿನಿಮಾದ ಪೈಪೋಟಿಯಿಂದ ಅನಿಮಲ್​ ಸಿನಿಮಾ ದೂರವುಳಿಯಲು ನಿರ್ಧರಿಸಿತು. ಡಿಸೆಂಬರ್ 1ಕ್ಕೆ ಸಿನಿಮಾ ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಪರಿಣಿತಿ ರಾಘವ್​ ಮದುವೆ: ಉದಯಪುರಕ್ಕೆ ಆಗಮಿಸಿದ ಅತಿಥಿಗಳು - ಸಮಾರಂಭ ಆರಂಭ

ABOUT THE AUTHOR

...view details