ಮುಂಬೈನಲ್ಲಿ ನಿನ್ನೆ ರಾತ್ರಿ ನಡೆದ ಸಮಾರಂಭವೊಂದರಲ್ಲಿ ಸಲ್ಮಾನ್ ಖಾನ್ ಮತ್ತು ನ್ಯಾಷನಲ್ ಕ್ರಷ್ 'ಪುಷ್ಪಾ-ದಿ ರೈಸ್' ಚಿತ್ರದ ಸೂಪರ್ ಹಿಟ್ ಸಾಮಿ ಸಾಮಿ ಸಾಂಗ್ಗೆ ಡ್ಯಾನ್ಸ್ ಮಾಡಿದ್ದಾರೆ. ಸಲ್ಮಾನ್ ಮತ್ತು ರಶ್ಮಿಕಾ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಮಾರಂಭದ ವೇದಿಕೆಯಲ್ಲಿ ರಶ್ಮಿಕಾ ಮಂದಣ್ಣ ಜೊತೆ ಸಲ್ಮಾನ್ ಖಾನ್ ಡ್ಯಾನ್ಸ್ ಮಾಡಿದ್ದಾರೆ. ಇವರಿಗೆ ವೇದಿಕೆಯಲ್ಲಿದ್ದ ನಿರೂಪಕರೂ ಸೇರಿದಂತೆ ಇತರರೂ ಸಾಥ್ ನೀಡಿದ್ದಾರೆ. ಅಭಿಮಾನಿಗಳು ಕೂಡ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಶೇರ್ ಮಾಡುತ್ತಿದ್ದಾರೆ. ವಿಡಿಯೋದಲ್ಲಿ, ಸಲ್ಮಾನ್ ಖಾನ್ ಜೀನ್ಸ್, ಟೀ-ಶರ್ಟ್ ಜಾಕೆಟ್, ಧರಿಸಿದ್ದು ರಶ್ಮಿಕಾ ಸೀರೆಯಲ್ಲಿ ಶೈನ್ ಆಗಿರೋದನ್ನು ಕಾಣಬಹುದು.