'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾಗಿ ಇದೀಗ ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್ನಲ್ಲಿ ಹೆಸರು ಮಾಡಿರುವ ರಶ್ಮಿಕಾ ಮಂದಣ್ಣ ಇಂದು ತಮ್ಮ 26ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರು ಸದ್ಯ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಹಿಂದಿ ಸಿನಿಮಾವೊಂದರ ಶೂಟಿಂಗ್ನಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ:ಮತ್ತೆ ಒಂದಾಗುತ್ತಾ ಸ್ಟಾರ್ ಜೋಡಿ ನಾಗಚೈತನ್ಯ-ಸಮಂತಾ!?
ಪರಿಚಯ: 1996 ಏಪ್ರಿಲ್ 5ರಂದು ವಿರಾಜಪೇಟೆಯ ಮದನ್ ಮಂದಣ್ಣ ಹಾಗೂ ಸುಮನ್ ದಂಪತಿಗೆ ರಶ್ಮಿಕಾ ಜನಿಸಿದರು. ಕೂರ್ಗ್ ಪಬ್ಲಿಕ್ ಸ್ಕೂಲ್ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ಮೈಸೂರಿನಲ್ಲಿ ಪಿಯು, ಸೈಕಾಲಜಿಯಲ್ಲಿ ಬಿಎ ಶಿಕ್ಷಣ ಪಡೆದಿದ್ದಾರೆ. ತದನಂತರ ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಜರ್ನಲಿಸಂ ಮಾಡಿದ್ದಾರೆ.