ಬರುವ ತಿಂಗಳು ಫೆಬ್ರವರಿಯಲ್ಲಿ ನ್ಯಾಶನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಮತ್ತು ಸೌತ್ ಸ್ಟಾರ್ ವಿಜಯ್ ದೇವರಕೊಂಡ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ಈ ಬಗ್ಗೆ ತಾರಾ ಜೋಡಿ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಅದಾಗ್ಯೂ ನಿಶ್ಚಿತಾರ್ಥದ ಬಗ್ಗೆ ವದಂತಿಗಳು ಹಬ್ಬಿವೆ. ಅಪಾರ ಸಂಖ್ಯೆಯ ಅಭಿಮಾನಿಗಳು ನಿಖರ ಮಾಹಿತಿ ನಿರೀಕ್ಷಿಸಿದ್ದಾರೆ. ಆದ್ರೆ ಸೋಮವಾರದಂದು ಕಲಾವಿದರ ಆಪ್ತ ಮೂಲಗಳು ನಿಶ್ಚಿತಾರ್ಥದ ವರದಿಗಳನ್ನು ತಳ್ಳಿಹಾಕಿದ್ದಾರೆ. ಇದು "ಸುಳ್ಳು" ಎಂದು ತಿಳಿಸಿದ್ದಾರೆ.
ಮಾಧ್ಯಮ ವರದಿಯೊಂದು ಈ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಿಕೊಂಡಿತ್ತು. ಅದಾಗ್ಯೂ ನಟ ನಟಿಯರ ಪ್ರತಿನಿಧಿಗಳಿಗೆ ವಿಚಾರ ತಲುಪಿದ್ದು, ಇದು ಸುಳ್ಳು ಎಂದು ಹೇಳಿದ್ದಾರೆ. ಆ ವರದಿ ಸುಳ್ಳು ಎಂದು ಮೂಲಗಳು ಸ್ಪಷ್ಟಪಡಿಸಿವೆ. ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ನಲ್ಲಿದ್ದಾರೆ ಎಂಬ ವದಂತಿಗಳು ಬಹಳ ಸಮಯದಿಂದಲೇ ಇವೆ. ಆದ್ರೆ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್‌ನಂತಹ ಸಿನಿಮಾಗಳಲ್ಲಿ ಸ್ಕ್ರೀನ್ ಶೇರ್ ಮಾಡಿದ ಬಳಿಕ ಈ ವದಂತಿ ಹಬ್ಬಿದೆ.
ಎಂಗೇಜ್ಮೆಂಟ್ ರೂಮರ್ಸ್ ನಡುವೆಯೇ ರಶ್ಮಿಕಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸರಣಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಪ್ರತಿಕ್ರಿಯಿಸಿ, ನಿಶ್ಚಿತಾರ್ಥದ ವದಂತಿಗಳ ಹಿಂದಿನ ಸತ್ಯದ ಬಗ್ಗೆ ಸ್ಪಷ್ಟತೆ ಕೋರಿದ್ದಾರೆ. ನಟಿ ಶೇರ್ ಮಾಡಿರುವ ಸುಂದರ ಫೋಟೋಗಳು ಅನಿಮಲ್ ಸಿನಿಮಾದ ಸಕ್ಸಸ್ ಮೀಟ್ ಸಂದರ್ಭದ್ದಾಗಿದೆ.