ಕಾನ್ಯೆ ವೆಸ್ಟ್ (Kanye West) ಎಂದು ಕರೆಯಲ್ಪಡುವ ಅಮೆರಿಕನ್ ರ‍್ಯಾಪರ್ ಯೆ (Rapper Ye) ಅವರ ಟ್ವಿಟರ್ ಖಾತೆಯನ್ನು ರದ್ದು ಮಾಡಲಾಗಿದೆ. ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್‌ನ ನಿಯಮಗಳನ್ನು ಉಲ್ಲಂಘಿಸಿ, ಹಿಂಸಾಚಾರಕ್ಕೆ ಪ್ರಚೋದಿಸುವ ಬರಹ ಪೋಸ್ಟ್ ಮಾಡಿರುವ ಆರೋಪದಡಿ ಈ ಕ್ರಮ ಕೈಗೊಳ್ಳಲಾಗಿದೆ.
ರ‍್ಯಾಪರ್ ಕಾನ್ಯೆ ವೆಸ್ಟ್ ಯೆ ಟ್ವಿಟರ್ ಖಾತೆ ಅಮಾನತು ರ‍್ಯಾಪರ್ ಯೆ ಅವರ ಟ್ವಿಟರ್ ಖಾತೆ ತೆರೆದರೆ "ಖಾತೆಯನ್ನು ಅಮಾನತುಗೊಳಿಸಲಾಗಿದೆ" ಎಂಬ ಸೂಚನೆ ನಿಮಗೆ ಸಿಗುತ್ತದೆ. ಟ್ವಿಟರ್ ಸಿಇಒ ಎಲೋನ್ ಮಸ್ಕ್ ಅವರು 22 ಬಾರಿ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತರಾದ ರ‍್ಯಾಪರ್ ಯೆ ಅವರನ್ನು ಟ್ವಿಟರ್ ವೇದಿಕೆಯಿಂದ ಅಮಾನತುಗೊಳಿಸಿರುವುದನ್ನು ಖಚಿತಪಡಿಸಿದ್ದಾರೆ.
"ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಅದರ ಹೊರತಾಗಿಯೂ ಅವರು ಮತ್ತೆ ಹಿಂಸಾಚಾರವನ್ನು ಪ್ರಚೋದಿಸುವ ಟ್ವೀಟ್ ಮೂಲಕ ನಮ್ಮ ನಿಯಮವನ್ನು ಉಲ್ಲಂಘಿಸಿದ್ದಾರೆ. ಖಾತೆಯನ್ನು ಅಮಾನತುಗೊಳಿಸಲಾಗುವುದು" ಎಂದು ಟ್ವಿಟರ್ ಬಳಕೆದಾರರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಮಸ್ಕ್ ರಿಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಫಿಫಾ ಫ್ಯಾನ್ ಫೆಸ್ಟ್‌ನಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ರಂಗು
ರ‍್ಯಾಪರ್ ಯೆ ಟ್ವೀಟ್ ಏನಾಗಿತ್ತು?'ರನ್ ಅವೇ' ಹಾಡುಗಾರ ಸ್ವಸ್ತಿಕ ಚಿಹ್ನೆ ಇರುವ ಚಿತ್ರವನ್ನು ಸ್ಟಾರ್ ಆಫ್ ಡೇವಿಡ್ ಜೊತೆ ಸೇರಿಸಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವುದು ವಿವಾದದ ಕೇಂದ್ರ ಬಿಂದು. ಸ್ವಸ್ತಿಕ ಚಿಹ್ನೆ ಜರ್ಮನಿಯ ಸರ್ವಾಧಿಕಾರಿ, ನಾಜಿ ನಾಯಕ ಅಡಾಲ್ಫ್ ಹಿಟ್ಲರ್‌ಗೆ ಸಂಬಂಧಿಸಿದ್ದಾಗಿದೆ. ಹಾಗೆಯೇ ಸ್ಟಾರ್ ಆಫ್ ಡೇವಿಡ್ ಏಸುಕ್ರಿಸ್ತನ ಹುಟ್ಟಿಗೆ ಸಂಬಂಧಿಸಿದ್ದು ಅನ್ನೋದು ಇಲ್ಲಿ ಗಮನಾರ್ಹ.