ಹೈದರಾಬಾದ್: ವಿಚ್ಛೇದಿತ ರ‍್ಯಾಪರ್ ಯೋ ಯೋ ಹನಿ ಸಿಂಗ್ ಬಾಳಲ್ಲಿ ಮತ್ತೊಬ್ಬ ಗೆಳತಿ ಪ್ರವೇಶಿಸಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬಿತ್ತು. ಈ ಹುಡುಗಿ ಮತ್ಯಾರು ಅಲ್ಲ, ಮಾಡೆಲ್ ಟೀನಾ ಥಂಡನಿ. ಕಾರ್ಯಕ್ರಮವೊಂದರಲ್ಲಿ ಹನಿ ಸಿಂಗ್ ಕೂಡ ಥಂಡನಿಯನ್ನು ಪರಿಚಯಿಸಿದ್ದ. ಇದಾದ ಬಳಿಕ ಮತ್ತೊಮ್ಮೆ ಹನಿ ಸಿಂಗ್ ಆಕೆಯ ಸಂಬಂಧ ಲೈಮ್ ಲೈಟ್ಗೆ ಬಂದಿದೆ. ತಮ್ಮ ಗರ್ಲ್ ಫ್ರೆಂಡ್ ಟೀನಾ ಹುಟ್ಟು ಹಬ್ಬದ ಹಿನ್ನೆಲೆ ಶುಭ ಕೋರಿ ಹನಿ ಸಿಂಗ್ ಫೋಟೋ ಹಂಚಿಕೊಂಡಿದ್ದಾರೆ.
ಹ್ಯಾಪಿ ಬರ್ತಡೇ ಜಾನ್:ಗೆಳತಿ ಜೊತೆಗಿನ ಸೆಲ್ಫಿ ಫೋಟೋ ಹಂಚಿಕೊಂಡಿರುವ ಹನಿ ಸಿಂಗ್ 'ಹ್ಯಾಪಿ ಬರ್ತಡೇ ಜಾನ್' ಎಂದಿದ್ದಾರೆ. ಇನ್ನು ಹನಿ ಸಿಂಗ್ ಶುಭಾಶಯಕ್ಕೆ ಪಿಂಕ್ ಹಾರ್ಟ್ ಎಮೋಜಿ ಮೂಲಕ ಟೀನಾ ಕೂಡ ಪ್ರತಿಕ್ರಿಯಿಸಿದ್ದಾರೆ.