ರ‍್ಯಾಪರ್ ಬಾದ್‌ಶಾ (Badshah) ಹಾಗೂ ನಟಿ ಮೃಣಾಲ್ ಠಾಕೂರ್ (Mrunal Thakur) ಇತ್ತೀಚೆಗೆ ದೀಪಾವಳಿ ಸಂಭ್ರಮಾಚರಣೆಯೊಂದರಲ್ಲಿ ಕೈ ಕೈ ಹಿಡಿದು ನಡೆದ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಡೇಟಿಂಗ್ ವದಂತಿಗಳನ್ನು ಹುಟ್ಟುಹಾಕಿತ್ತು. ಆದರೆ ಇಂದು ಮುಂಜಾನೆ ರ‍್ಯಾಪರ್ ಬಾದ್‌ಶಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯೊಂದರಲ್ಲಿ ಸೀಕ್ರೆಟ್ ಸ್ಟೋರಿ ಶೇರ್ ಮಾಡೋ ಮುಖೇನ ಡೇಟಿಂಗ್ ಊಹಾಪೋಹಗಳಿಗೆ ಫುಲ್ಸ್ಟಾಪ್ ಇಟ್ಟಿದ್ದಾರೆ.
ರ‍್ಯಾಪರ್ ಬಾದ್‌ಶಾ ಇನ್‌ಸ್ಟಾಗ್ರಾಮ್ ಸ್ಟೋರಿ ರ‍್ಯಾಪರ್ ಬಾದ್‌ಶಾ ಇನ್‌ಸ್ಟಾಗ್ರಾಮ್ ಸ್ಟೋರಿ: ರ‍್ಯಾಪರ್ ಬಾದ್‌ಶಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿನಲ್ಲಿ, "ಡಿಯರ್ ಇಂಟರ್ನೆಟ್, ನಿಮ್ಮನ್ನು ಮತ್ತೊಮ್ಮೆ ನಿರಾಶೆಗೊಳಿಸಿದ್ದಕ್ಕೆ ಕ್ಷಮಿಸಿ. ನೀವೇನು ಯೋಚಿಸುತ್ತಿದ್ದೀರೋ, ಹಾಗೇನೂ ಇಲ್ಲ" ಎಂದು ಬರೆದಕೊಂಡಿದ್ದಾರೆ. ಬರಹದ ಕೊನೆಗೆ ಜೋರಾಗಿ ನಗುವ ಎಮೋಜಿ ಹಾಕಿಲ್ಲ. ಆದಾಗ್ಯೂ, ಬಾದ್‌ಶಾ ಅವರು ಮೃಣಾಲ್ ಜೊತೆಗಿನ ಡೇಟಿಂಗ್ ವದಂತಿಗಳನ್ನು ಇಲ್ಲಿ ಉಲ್ಲೇಖಿಸಿಲ್ಲ. ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ 'ಮೃಣಾಲ್ ಠಾಕೂರ್ ಜೊತೆ ಬಾದ್‌ಶಾ ಡೇಟಿಂಗ್' ವದಂತಿಗಳು ಜೋರಾಗೇ ಹರಡಿ ಸಖತ್ ಸದ್ದು ಮಾಡಿತ್ತು. ಹಾಗಾಗಿ ಈ ಸೀಕ್ರೆಟ್ ಸೋರಿ ಊಹಾಪೋಹಗಳನ್ನು ಹರಡುವವರಿಗಾಗಿಯೇ ಎಂದು ನೆಟ್ಟಿಗರು ಬಹುತೇಕ ನಂಬಿದ್ದಾರೆ.
ಇದನ್ನೂ ಓದಿ:2 ದಿನದಲ್ಲಿ 100 ಕೋಟಿ ರೂ. ದಾಟಿದ 'ಟೈಗರ್ 3': ಸಲ್ಲು ಕ್ಯಾಟ್ ಫಾನ್ಸ್ ಖುಷ್
ಅಂತೆ ಕಂತೆಗಳಿಗೆ ಅಂತ್ಯ: ಬಾಲಿವುಡ್ ಗಣ್ಯರು ತಮ್ಮ ಸಹುದ್ಯೋಗಿಗಳಿಗಾಗಿ ದೀಪಾವಳಿ ಪಾರ್ಟಿ ಏರ್ಪಡಿಸುತ್ತಾರೆ. ಸಮಾರಂಭಕ್ಕೆ ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾಗುತ್ತಾರೆ. ಕಳೆದೊಂದು ವಾರದಿಂದ ಬಾಲಿವುಡ್ನಲ್ಲಿ ದೀಪಾವಳಿ ಸಂಭ್ರಮ ಜೋರಾಗೇ ನಡೆಯುತ್ತಿದೆ. ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಖತ್ ಸದ್ದು ಮಾಡುತ್ತಿದೆ. ಅದರಂತೆ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರ ದೀಪಾವಳಿ ಸಂಭ್ರಮಾಚರಣೆಯ ವಿಡಿಯೋಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ಹರಡಿದೆ. ಬಾದ್‌ಶಾ ಮತ್ತು ಮೃಣಾಲ್ ಠಾಕೂರ್ ಇಬ್ಬರೂ ಈ ಈವೆಂಟ್ನಲ್ಲಿ ಭಾಗವಹಿಸಿದ್ದರು. ವೈರಲ್ ವಿಡಿಯೋದಲ್ಲಿ, ನಟಿ ಮೃಣಾಲ್ ಠಾಕೂರ್ ಗ್ರೀನ್ ಡ್ರೆಸ್ನಲ್ಲಿ ಕಾಣಿಸಿಕೊಂಡರೆ, ರ‍್ಯಾಪರ್ ಬಾದ್‌ಶಾ ಬ್ಲ್ಯಾಕ್ ಎತ್ನಿಕ್ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ವೈರಲ್ ಆದ ಈ ವಿಡಿಯೋ ನೋಡಿದವರ ಪೈಕಿ ಹಲವರು, ಮೃಣಾಲ್ ಠಾಕೂರ್ ಬಾದ್‌ಶಾ ಡೇಟಿಂಗ್ನಲ್ಲಿರಬಹುದೆಂದು ಊಹಿಸಿದ್ದರು. ಆದ್ರಿಂದು ಸ್ವತಃ ರ‍್ಯಾಪರ್ ಬಾದ್‌ಶಾ ಅವರೇ ಪರೋಕ್ಷವಾಗಿ ಅಂತೆ ಕಂತೆಗಳಿಗೆ ಅಂತ್ಯ ಹಾಡಿದ್ದಾರೆ.
ಇದನ್ನೂ ಓದಿ:'ಪ್ರೀತಿಸುವವರಿಗಾಗಿ ಸಮಯ ಮಾಡಿಕೊಳ್ಳಬೇಕು': ಇದು ದೀಪ್ವೀರ್ ಲವ್ ಪಾಲಿಸಿ
ಕೆಲಸದ ವಿಚಾರ ಗಮನಿಸಿದ್ರೆ, ಇಶಾನ್ ಖಟ್ಟರ್ ಜೊತೆ ಮೃಣಾಲ್ ಠಾಕೂರ್ 'ಪಿಪ್ಪಾ' ಸಿನಿಮಾದಲ್ಲಿ ಕಾಣಿಸಿಕೊಂಡರು. ಇದೊಂದು ಬಯೋಗ್ರಾಫಿಕಲ್ ವಾರ್ ಡ್ರಾಮಾ. ಈ ಚಿತ್ರವನ್ನು ರಾಜಾ ಕೃಷ್ಣ ಮೆನನ್ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಪ್ರಿಯಾಂಶು ಪೈನ್ಯುಲಿ ಮತ್ತು ಸೋನಿ ರಜ್ದಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂ.ಡಿದ್ದರು.