ಕರ್ನಾಟಕ

karnataka

ETV Bharat / entertainment

ಆಡಿಶನ್​ ನೆಪದಲ್ಲಿ ಅತ್ಯಾಚಾರ ಆರೋಪ: ಉದ್ಯಮಿ ರಾಜೇಂದ್ರ ದಗ್ದು ಗಾಯಕ್ವಾಡ್ ಪರಾರಿ! - ಬಿಕಿನಿ ಧರಿಸಿ ಆಡಿಶನ್​

ಆಡಿಶನ್​ ಹೆಸರಿನಲ್ಲಿ ಅತ್ಯಾಚಾರ ಆರೋಪ ಪ್ರಕರಣ - ಪುಣೆ ಚಕನ್‌ನ ಅಲೆಫಾಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು - ಉದ್ಯಮಿ ರಾಜೇಂದ್ರ ದಗ್ದು ಗಾಯಕ್ವಾಡ್ ಪರಾರಿ - ಮುಂದುವರಿದ ತನಿಖೆ.

businessman Rajendra Dagdu Gaikwad
ಅತ್ಯಾಚಾರ ಆರೋಪಿ ರಾಜೇಂದ್ರ ದಗ್ದು ಗಾಯಕ್ವಾಡ್

By

Published : Dec 27, 2022, 12:56 PM IST

ಮಹಾರಾಷ್ಟ್ರ: ಆಡಿಶನ್​ ಹೆಸರಿನಲ್ಲಿ ನಡೆದ ಅಸಹ್ಯಕರ ಕೃತ್ಯವೊಂದು ಬೆಳಕಿಗೆ ಬಂದಿದ್ದು ಭಯದ ವಾತಾವರಣ ನಿರ್ಮಾಣವಾಗಿದೆ. ಈ ಘಟನೆ ಬಳಿಕ ಪೋಷಕರು ಮಕ್ಕಳನ್ನು ಆಡಿಶನ್​ಗೆ ಕಳುಹಿಸಲು ಭಯ ಪಡುವಂತಾಗಿದೆ. ಅಪ್ರಾಪ್ತೆಯೊಂದಿಗೆ ಅಸಭ್ಯ ವರ್ತನೆ ಆರೋಪ ಹಿನ್ನೆಲೆ ಉದ್ಯಮಿ ರಾಜೇಂದ್ರ ದಗ್ದು ಗಾಯಕ್ವಾಡ್ ವಿರುದ್ಧ ಪುಣೆ ಚಕನ್‌ನ ಅಲೆಫಾಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ತಕ್ಷಣ ಆರೋಪಿ ಗಾಯಕ್ವಾಡ್ ಪರಾರಿಯಾಗಿದ್ದಾರೆ.

ಏನಿದು ಪ್ರಕರಣ? ಈ ವರ್ಷದ ಜೂನ್ 13ರ ಸಂಜೆ 6: 30ರ ಸುಮಾರಿಗೆ, ರಾಜೇಂದ್ರ ದಗ್ದು ಗಾಯಕ್ವಾಡ್ ಅವರು ಅಪ್ರಾಪ್ತೆ ಮತ್ತು ಆಕೆಯ ಪೋಷಕರನ್ನು ಪುಣೆಯ ಹೋಟೆಲ್ ಒಂದಕ್ಕೆ ಕರೆದರು. ಅವರು ಸಿನಿಮಾವೊಂದಕ್ಕೆ ಬಾಲಕಿಯ ಆಡಿಷನ್ ತೆಗೆದುಕೊಳ್ಳಬೇಕು ಎಂದು ಹೇಳಿದರು. 13 ವರ್ಷದ ಬಾಲಕಿ ಡೈಲಾಗ್ ಹೇಳಲು ನಾಚಿಕೆ ಪಡುತ್ತಾಳೆ. ಹಾಗಾಗಿ ನೀವು ಹೊರಗೆ ಕಾಯಿರಿ ಎಂದು ಹೋಟೆಲ್​ ಕೋಣೆಯಿಂದ ಆಕೆಯ ಪೋಷಕರನ್ನು ಹೊರಗೆ ಕಳುಹಿಸಿದರು. ಬಳಿಕ ಅವರು ಹುಡುಗಿಯೊಂದಿಗೆ ಡ್ಯಾನ್ಸ್ ಮಾಡಲು ಮುಂದಾದರು. ಡ್ಯಾನ್ಸ್ ಮಾಡುವಾಗ ಬಾಲಕಿ ದೇಹ ಸ್ಪರ್ಶಿಸಿ ಇದು ಆಡಿಷನ್‌ನ ಒಂದು ಭಾಗವಾಗಿದೆ ಎಂದು ಗಾಯಕ್ವಾಡ್ ಹೇಳಿದರು.

ಬಿಕಿನಿ ಧರಿಸಿ ಆಡಿಶನ್​:ಬಳಿಕ ನವೆಂಬರ್ 8 ರಂದು ರಾಜೇಂದ್ರ ದಗ್ದು ಗಾಯಕ್ವಾಡ್ ಹುಡುಗಿಯ ತಂದೆಗೆ ಕರೆ ಮಾಡಿ ನಾನು ಕೆಲಸಕ್ಕಾಗಿ ಅಲೆಫಾಟಾಗೆ ಬರುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದರು. ಮನೆಗೆ ಬಂದ ಅವರು ನಿಮ್ಮ ಮಗಳನ್ನು ಮತ್ತೊಮ್ಮೆ ಆಡಿಷನ್ ಮಾಡಿ ಆಕೆ ಸುಧಾರಿಸಿದ್ದಾಳೆಯೇ ಎಂದು ನೋಡಬೇಕು ಎಂದು ತಿಳಿಸಿದರು. ತಂದೆ ತಾಯಿಯನ್ನು ಮನೆಯಿಂದ ಹೊರಗೆ ಕಳುಹಿಸಿ ಆಡಿಶನ್​ ತೆಗೆದುಕೊಳ್ಳಲು ಪ್ರಾರಂಭಿಸಿದರು.

ಅಪ್ರಾಪ್ತೆ ಮೇಲೆ ಅತ್ಯಾಚಾರ: ಬಿಕಿನಿಯಲ್ಲಿ ಆಡಿಷನ್ ನಡೆಸುತ್ತಿದ್ದಾಗ ಗಾಯಕ್ವಾಡ್ ಹಿಂದಿನಿಂದ ಬಂದು ಬಾಲಕಿಯನ್ನು ತಬ್ಬಿಕೊಂಡಿದ್ದಾರೆ. ಬಾಲಕಿ ಕಿರುಚಲು ಯತ್ನಿಸಿದಾಗ ಬೆದರಿಸಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾರೆ. ಆಕೆಯ ಪೋಷಕರಿಗೂ ಬೆದರಿಸಿ ಅಲ್ಲಿಂದ ತೆರಳಿದ್ದಾರೆ ಎನ್ನುವ ಆರೋಪವಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ:ಪ್ರಭಾಸ್​ ಅಭಿನಯದ 'ರಾಜಾ ಡಿಲಕ್ಸ್' ಶೂಟಿಂಗ್‌ ಸೀನ್‌ಗಳು ವೈರಲ್​

ಈ ಬಗ್ಗೆ ಡಿಸೆಂಬರ್ 24ರ ಶನಿವಾರದಂದು ಅಲೆಫಾಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಪ್ರಮೋದ್ ಕ್ಷೀರಸಾಗರ್ ತಿಳಿಸಿದ್ದಾರೆ.

ಇದನ್ನೂ ಓದಿ:57ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್​ ಬ್ಯಾಚುಲರ್​ ಸಲ್ಮಾನ್​ ಖಾನ್​

ABOUT THE AUTHOR

...view details