ಬಹು ನಿರೀಕ್ಷಿತ 67ನೇ ಆವೃತ್ತಿಯ ಫಿಲ್ಮ್‌ಫೇರ್ ಅವಾರ್ಡ್ಸ್-2022, Wolf 777 news ಸಹಯೋಗದಲ್ಲಿ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಗಸ್ಟ್ 30 ನಡೆಯಲಿದೆ. ಈ ಕಾರ್ಯಕ್ರಮವನ್ನು ರಣವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್ ನಿರೂಪಿಸಲಿದ್ದಾರೆ.
ನಟ ಕಾರ್ತಿಕ್ ಆರ್ಯನ್, ವಿಕ್ಕಿ ಕೌಶಲ್, ಕಿಯಾರಾ ಅಡ್ವಾಣಿ ಮತ್ತು ದಿಶಾ ಪಟಾನಿ ಅವರು ಈ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ಮನಮೋಹಕ ಕಾರ್ಯಕ್ರಮ ಕಲರ್ಸ್ ಮತ್ತು ಕಲರ್ಸ್ ಸಿನೆಪ್ಲೆಕ್ಸ್‌ನಲ್ಲಿ ಪ್ರಸಾರವಾಗಲಿದೆ ಮತ್ತು ಜಾಗತಿಕವಾಗಿ ಫಿಲ್ಮ್‌ಫೇರ್‌ನ ಫೇಸ್‌ಬುಕ್ ಪುಟದಲ್ಲಿ ಏಕಕಾಲದಲ್ಲಿ ಪ್ರಸಾರವಾಗಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಣವೀರ್ ಸಿಂಗ್, "ನಾನು ಮೊದಲ ಬಾರಿಗೆ ನಿರೂಪಣೆ ಮಾಡುತ್ತಿದ್ದೇನೆ. ಕಾರ್ಯಕ್ರಮದಲ್ಲಿ ನಾನು ಕೆಲವು ಬಾರಿ ನೃತ್ಯ ಮಾಡಿದ್ದೇನೆ. ವೇದಿಕೆಯಲ್ಲಿ ಪ್ರದರ್ಶನ ನೀಡುವುದು ನಿರೂಪಣೆಗಿಂತ ವಿಭಿನ್ನವಾಗಿದೆ. ನನ್ನ ಪ್ರಕಾರ ನಿರೂಪಣೆಗೆ ಹತ್ತು ಪಟ್ಟು ಹೆಚ್ಚು ಕೆಲಸ ತೆಗೆದುಕೊಳ್ಳುತ್ತದೆ. ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಘೋಷಿಸುವುದು ಮತ್ತು ನಿರೂಪಣೆ ಮಾಡುವುದು ಒಂದು ಗೌರವ. ಪ್ರೇಕ್ಷಕರ ಮುಂದೆ ಕಾರ್ಯಕ್ರಮವನ್ನು ಆಯೋಜಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದಿದ್ದಾರೆ.