ಜನಪ್ರಿಯ ಸೆಲೆಬ್ರಿಟಿ ಜೋಡಿ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇತ್ತೀಚೆಗೆ ತಮ್ಮ ಐದನೇ ವಿವಾಹ ವಾರ್ಷಿಕೋತ್ಸವ ಆಚರಿಸಲು ಯುರೋಪಿನ ಬ್ರಸೆಲ್ಸ್‌ಗೆ ಪ್ರವಾಸ ಕೈಗೊಂಡಿದ್ದರು. ಸಾಗರೋತ್ತರ ಪ್ರದೇಶದಲ್ಲಿ ಗುಣಮಟ್ಟದ ಸಮಯ ಕಳೆದ ದೀಪ್ವೀರ್ ಜೋಡಿ ಇಂದು ತಾಯ್ನಾಡಿಗೆ ಮರಳಿದ್ದಾರೆ. ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ದಂಪತಿ ಕಾಣಿಸಿಕೊಂಡಿದ್ದು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೀಪ್ವೀರ್ ಅಲ್ಲದೇ ಸ್ಟಾರ್ ನಟ ರಣ್ಬೀರ್ ಕಪೂರ್ ಕೂಡ ಇಂದು ಮುಂಜಾನೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಪಾಪರಾಜಿಗಳು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಬಾಲಿವುಡ್ನ ಪವರ್ಫುಲ್ ಕಪಲ್ ದೀಪ್ವಿರ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆನ್ಲೈನ್ನಲ್ಲಿ ಸದ್ದು ಮಾಡುತ್ತಿರುವ ವಿಡಿಯೋದಲ್ಲಿ ದೀಪಿಕಾ ಮತ್ತು ರಣ್ವೀರ್ ವಿಮಾನ ನಿಲ್ದಾಣದಲ್ಲಿ ಕೈ ಕೈ ಹಿಡಿದು ನಡೆಯುವುದನ್ನು ಕಾಣಬಹುದು. ನವೆಂಬರ್ 14 ರಂದು ಯುರೋಪ್ನಲ್ಲಿ ರಣ್ವೀರ್ ಮತ್ತು ದೀಪಿಕಾ ಐದನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.
ದೀಪ್ವೀರ್ ಸಿನಿಮಾಗಳನ್ನು ಗಮನಿಸುವುದಾದರೆ, ದೀಪಿಕಾ ಪಡುಕೋಣೆ ಕಲ್ಕಿ 2898 ಎಡಿ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ ಮೊದಲ ಸಲ ತೆರೆ ಹಂಚಿಕೊಳ್ಳುತ್ತಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟ ಅಮಿತಾಭ್ ಬಚ್ಚನ್, ದಕ್ಷಿಣ ಚಿತ್ರರಂಗದ ಸ್ಟಾರ್ ನಟ ಕಮಲ್ ಹಾಸ್, ಬಹುಭಾಷಾ ನಟಿ ದಿಶಾ ಪಟಾನಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. 2024ರ ಜನವರಿ 11 ರಂದು ಕಲ್ಕಿ 2898 ಎಡಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.