ಕರ್ನಾಟಕ

karnataka

ETV Bharat / entertainment

ಧೋನಿಯನ್ನು ಬಿಗಿದಪ್ಪಿ ಮುತ್ತಿಕ್ಕಿದ ರಣ್​ವೀರ್​​; ಕ್ಯಾಪ್ಟನ್‌ ಕೂಲ್‌ ಜೊತೆ ರಾಮ್ ​​ಚರಣ್ - Ranveer Singh

ಎಂ.ಎಸ್‌.ಧೋನಿ ಅವರೊಂದಿಗೆ ನಟರಾದ ರಣ್​ವೀರ್​ ಸಿಂಗ್​ ಮತ್ತು ರಾಮ್​​ ಚರಣ್ ಇರುವ ಫೋಟೋಗಳು ವೈರಲ್ ಆಗಿವೆ.

Ranveer, Ram Charan with Mahendra Singh Dhoni
ಧೋನಿ ಜೊತೆ ರಣ್​ವೀರ್​ ಸಿಂಗ್​, ರಾಮ್ ​​ಚರಣ್

By ETV Bharat Karnataka Team

Published : Oct 5, 2023, 4:28 PM IST

ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜೊತೆ ಭಾರತೀಯ ಚಿತ್ರರಂಗದ ಸೂಪರ್​ ಸ್ಟಾರ್​ಗಳು ಕಾಣಿಸಿಕೊಂಡರು. ನಿನ್ನೆ, ಸೌತ್ ಸೂಪರ್‌ ಸ್ಟಾರ್ ರಾಮ್ ಚರಣ್ ತಮ್ಮ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಮಾಹಿ ಅವರನ್ನು ಭೇಟಿಯಾದ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಬಾಲಿವುಡ್ ನಟ ರಣ್​​ವೀರ್ ಸಿಂಗ್ ಕೂಡಾ ಅಪರೂಪದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಮಾಹಿ ಜೊತೆ ರಾಮ್​ ಚರಣ್​​: ಆರ್​ಆರ್​ಆರ್​ ಸಿನಿಮಾ ಮೂಲಕ ಜಗತ್ತಿನಾದ್ಯಂತ ಜನಪ್ರಿಯರಾಗಿರುವ ಟಾಲಿವುಡ್ ನಟ ರಾಮ್​ ಚರಣ್​​ ನಿನ್ನೆ ಸಂಜೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಟ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ಜೊತೆಗಿರುವ ಫೋಟೋ ಪೋಸ್ಟ್ ಮಾಡಿಕೊಂಡಿದ್ದರು. 'ಭಾರತದ ಹೆಮ್ಮೆ ಮಹೇಂದ್ರ ಸಿಂಗ್​ ಧೋನಿಯನ್ನು ಭೇಟಿಯಾಗಿದ್ದು ಬಹಳ ಸಂತಸವಾಗಿದೆ' ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳಿಂದ ಪ್ರೀತಿಯ ಮಳೆ: ರಾಮ್​ ಚರಣ್​​ ಶೇರ್ ಮಾಡಿದ ಫೋಟೋ ಕೆಲವೇ ಕ್ಷಣಗಳಲ್ಲಿ ವೈರಲ್​ ಆಗಿದೆ. ಇಬ್ಬರು ಸಾಧಕರ ಅಭಿಮಾನಿಗಳು ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿ, ಅಭಿಪ್ರಾಯ ಹಂಚಿಕೊಂಡರು. ಸೋಷಿಯಲ್ ಮೀಡಿಯಾ ಬಳಕೆದಾರರೋರ್ವರು, ''ಒಂದೇ ಫ್ರೇಮ್‌ನಲ್ಲಿ ಇಬ್ಬರು ದೇವರು'' ಎಂದು ಕಾಮೆಂಟ್​ ಮಾಡಿದ್ದಾರೆ. ಮತ್ತೋರ್ವ ಅಭಿಮಾನಿ, ''ಎರಡು ಸಿಂಹಗಳು ಭೇಟಿಯಾದ ಕ್ಷಣ'' ಎಂದಿದ್ದಾರೆ. ''ಒಂದೇ ಫ್ರೇಮ್​ನಲ್ಲಿ ಇಬ್ಬರು ಲೆಜೆಂಡ್ಸ್​'' ಎಂದು ಮತ್ತೋರ್ವರು ಮೆಚ್ಚಿಕೊಂಡಿದ್ದಾರೆ. ಮಾಹಿ, ರಾಮ್​ ಇಬ್ಬರೂ ಕೂಡ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇವರ ಫೋಟೋಗಳಿಗೆ ಅಭಿಮಾನಿಗಳು ಫೈಯರ್​, ಹಾರ್ಟ್ ಎಮೋಜಿ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ:ಜಿಗ್ರಾ ಶೂಟಿಂಗ್​ ಶುರು: ನಟನೆ ಜೊತೆ ನಿರ್ಮಾಣ, ಆಲಿಯಾ ಭಟ್​ಗೆ ಶುಭ ಹಾರೈಸಿದ ಅಭಿಮಾನಿಗಳು

ಮಾಹಿ ಜೊತೆ ರಣ್​ವೀರ್​ ಸಿಂಗ್​​:ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಯಶಸ್ಸಿನಲ್ಲಿರುವ ರಣ್​ವೀರ್​ ಸಿಂಗ್​​ ಕೂಡ ಧೋನಿ ಜೊತೆಗಿರುವ ಫೋಟೋ ಶೇರ್ ಮಾಡಿದ್ದಾರೆ. ಇಂದು ತಮ್ಮ ಅಧಿಕೃತ ಇನ್​ಸ್ಟಾ ಅಕೌಂಟ್​ನಲ್ಲಿ ಎರಡು ಫೋಟೋಗಳನ್ನು ಶೇರ್ ಮಾಡಿದ್ದು, ''ಮೇರಾ ಮಾಹಿ, ಹೀರೋ, ಐಕಾನ್​, ಲೆಜೆಂಡ್​, ಹಿರಿಯ ಸಹೋದರ'' ಎಂದೆಲ್ಲಾ ಕ್ಯಾಪ್ಷನ್​ ಕೊಟ್ಟಿದ್ದಾರೆ. ಒಂದು ಫೋಟೋದಲ್ಲಿ ರಣ್​ವೀರ್​ ಸಿಂಗ್​,​ ಮಾಹಿ ಹೆಗಲ ಮೇಲೆ ಕೈ ಹಾಕಿ ಮುತ್ತಿಕ್ಕಿರುವುದನ್ನು ನೋಡಬಹುದು. ಎರಡೂ ಫೋಟೋಗಳಲ್ಲಿ ಇಬ್ಬರ ಮೊಗದಲ್ಲೂ ಮಿಲಿಯನ್​ ಡಾಲರ್ ಸ್ಮೈಲ್​ ಕಾಣಸಿಗುತ್ತದೆ. ಕೆಲ ಕ್ಷಣಗಳ ಹಿಂದೆ ಶೇರ್ ಆಗಿರುವ ಈ ಫೋಟೋ ಸಹ ಸಾಕಷ್ಟು ಮೆಚ್ಚುಗೆ, ಪ್ರತಿಕ್ರಿಯೆ ಸ್ವೀಕರಿಸುತ್ತಿವೆ.

ಇದನ್ನೂ ಓದಿ:ಮುಂಬೈ ಸಿದ್ಧಿ ವಿನಾಯಕ ದೇಗುಲಕ್ಕೆ ಆರ್​ಆರ್​ಆರ್​ ಸ್ಟಾರ್ ರಾಮ್​ಚರಣ್ ಭೇಟಿಯ ಕ್ಷಣಗಳು​ Photos

ಮಹೇಂದ್ರ ಸಿಂಗ್ ಧೋನಿ ಹೊಸ ಹೇರ್​ಸ್ಟೈಲ್​ ಸಲುವಾಗಿ ಸುದ್ದಿಯಲ್ಲಿದ್ದಾರೆ. ಕ್ರಿಕೆಟಿಗ ಸ್ಟಾರ್ ಹೀರೋಗಳನ್ನೂ ಹಿಂದಿಕ್ಕಿದ್ದಾರೆ ಅಂತಿದ್ದಾರೆ ಅಭಿಮಾನಿಗಳು.

ABOUT THE AUTHOR

...view details