ಕರ್ನಾಟಕ

karnataka

By

Published : May 30, 2023, 3:21 PM IST

ETV Bharat / entertainment

'ಪರದೆಯ ಮೇಲೆ ಮಹಿಳೆಯರನ್ನು ಸರಿಯಾಗಿ ಪ್ರತಿನಿಧಿಸುವುದು ತನ್ನ ಜವಾಬ್ದಾರಿ': ರಾಣಿ ಮುಖರ್ಜಿ

ಸಿನಿಮಾಗಳಲ್ಲಿ ಮಹಿಳೆಯರು, ಅವರ ಪಾತ್ರಗಳ ಕುರಿತು ಬಾಲಿವುಡ್​ ನಟಿ ರಾಣಿ ಮುಖರ್ಜಿ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

Rani Mukerji
​ ನಟಿ ರಾಣಿ ಮುಖರ್ಜಿ

ರಾಣಿ ಮುಖರ್ಜಿ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ. ಸೂಪರ್​ ಹಿಟ್​​ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸ್ಟಾರ್​ ನಟರ ಜೊತೆ ತೆರೆ ಹಂಚಿಕೊಂಡು ಸ್ಟಾರ್​ ಡಮ್​ ಹೆಚ್ಚಿಸಿಕೊಂಡಿದ್ದಾರೆ. ಒಂದು ಸಮಯದಲ್ಲಿ ಬಾಲಿವುಡ್​ನ ಬಹುಬೇಡಿಕೆ ನಟಿಯಾಗಿ ಮಿಂಚಿದ್ದ ರಾಣಿ ಮುಖರ್ಜಿ ಈಗಲೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ಮಹಿಳೆಯರನ್ನು ಸರಿಯಾಗಿ ಪ್ರತಿನಿಧಿಸುವ ವಿಚಾರದ ಬಗ್ಗೆ ಸದ್ಯ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಹಿಳೆಯರು ಕುಟುಂಬ ಮತ್ತು ಸಮಾಜದ ಬೆನ್ನೆಲುಬು, ಇದನ್ನು ಪ್ರಪಂಚದಾದ್ಯಂತದ ಜನರಿಗೆ ತೋರಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಹೇಳಿದರು.

"ನಟಿಯಾಗಿ, ಸಿನಿಮಾ ಮತ್ತು ಪಾತ್ರಗಳ ಬಗ್ಗೆ ನಿಮ್ಮ ದೃಷ್ಟಿ ನಿರಂತರವಾಗಿ ವಿಕಸನಗೊಳ್ಳುತ್ತದೆ. ಆದರೆ, ನನಲ್ಲಿ ಸದಾ ಉಳಿಯುವ ಒಂದು ವಿಷಯವೆಂದರೆ ಪರದೆಯ ಮೇಲೆ ಮಹಿಳೆಯರನ್ನು ಚಿತ್ರಿಸಲು ಮತ್ತು ಪ್ರತಿನಿಧಿಸಲು ನಾನು ಬಯಸಿದ ರೀತಿ. ಮಹಿಳೆಯರು ಕುಟುಂಬ ಮತ್ತು ಸಮಾಜದ ಬೆನ್ನೆಲುಬು. ಒಬ್ಬ ನಟಿಯಾಗಿ, ಇದನ್ನು ನನ್ನ ದೇಶ ಮತ್ತು ಪ್ರಪಂಚದಾದ್ಯಂತ ಸಾಧ್ಯವಾದಷ್ಟು ಜನರಿಗೆ ತೋರಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ನಾನು ಭಾವಿಸುತ್ತೇನೆ'' ಎಂದು ತಿಳಿಸಿದರು.

"ಸಿನಿಮಾ ಜನರ ಮನಸ್ಸಿನ ಮೇಲೆ ಶಾಶ್ವತವಾದ ಪ್ರಭಾವ ಬೀರಬಹುದು. ಇದು ರಾಷ್ಟ್ರೀಯ ಸಂಭಾಷಣೆಯನ್ನು ಪ್ರಚೋದಿಸುವ ಅತ್ಯಂತ ಶಕ್ತಿಯುತ ಸಾಧನವಾಗಿದೆ. ನನ್ನ ವೃತ್ತಿಜೀವನದ ಆರಂಭದಲ್ಲಿ, ಮಹಿಳೆಯರನ್ನು ತೆರೆ ಮೇಲೆ ಪ್ರದರ್ಶಿಸುವ ವಿಚಾರವಾಗಿ ನಿಜವಾದ ಬದಲಾವಣೆಯನ್ನು ಮಾಡಬಹುದು ಎಂದು ನನಗೆ ಅರಿವಾಯಿತು. ಸ್ವತಂತ್ರ ಮತ್ತು ಸ್ವಾವಲಂಬಿಗಳಾಗಿ ಮಹಿಳೆಯರನ್ನು ತೋರಿಸಲು (ತಮ್ಮ ಪಾತ್ರಗಳ ಮೂಲಕ) ಬಯಸಿದ್ದೆ'' ಎಂದು ತಿಳಿಸಿದರು.

ಚಲನಚಿತ್ರ, ಪಾತ್ರಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ನಾನು ಇದನ್ನು ಗಮನದಲ್ಲಿಟ್ಟುಕೊಂಡೆ. ಹುಡುಗಿಯನ್ನು ಘನತೆ ಮತ್ತು ಶಕ್ತಿಯುತವಾಗಿ ತೋರಿಸುವ ಪಾತ್ರಗಳಿಗೆ ಪ್ರಾಮುಖ್ಯತೆ ಕೊಟ್ಟೆ. ನನ್ನ ಪ್ರಕಾರ, ಮಹಿಳೆಯರು ಯಾವಾಗಲೂ 'ಬದಲಾವಣೆ'ಯ ಏಜೆಂಟ್​ಗಳಾಗಿದ್ದಾರೆ. ಅವರು ಸ್ವತಂತ್ರರು, ಧೈರ್ಯಶಾಲಿಗಳು, ಕಾಳಜಿಯುಳ್ಳವರು, ಕನಸುಗಳನ್ನು ನನಸು ಮಾಡುವವರು, ಬಹು ಪ್ರತಿಭೆಯುಳ್ಳವರು. ಈ ನಂಬಿಕೆ ಸಾಬೀತು ಪಡಿಸುವ ಪಾತ್ರಗಳನ್ನು ಆರಿಸುವ ಮೂಲಕ ನಾನು ಮಹಿಳೆಯ ಈ ಅಂಶಗಳನ್ನು ಎತ್ತಿ ತೋರಿಸಲು ಬಯಸುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ:ಕನ್ನಡದ ಆನಂದ್ ಆಡಿಯೋ ಸಂಸ್ಥೆಗೆ ಸಿಕ್ತು ಯೂಟ್ಯೂಬ್‌ 'ಡೈಮಂಡ್ ಬಟನ್‌'

ನೀವು ಬ್ಲ್ಯಾಕ್, ವೀರ್ ಝಾರಾ, ಮರ್ದಾನಿ ಸರಣಿ, ಯುವ, ನೋ ಒನ್ ಕಿಲ್ಡ್ ಜೆಸ್ಸಿಕಾ, ಹಿಚ್ಕಿ ಅಥವಾ ನನ್ನ ಇತ್ತೀಚಿನ ಚಲನಚಿತ್ರ ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆಯಂತಹ ಚಲನಚಿತ್ರಗಳನ್ನು ನೋಡಿದರೆ ಈ ಅಂಶ ನಿಜವೆಂದು ತಿಳಿಯುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕನ್ನಡ ಚಿತ್ರರಂಗದ ಕನಸುಗಾರ'...ರವಿಚಂದ್ರನ್ ಅಪರೂಪದ ಚಿತ್ರಗಳಿವು!​​

ರಾಣಿ ಮುಖರ್ಜಿ ಅವರ ಕೊನೆಯ ಸಿನಿಮಾ ಮಿಸೆಸ್​​ ಚಟರ್ಜಿ ವರ್ಸಸ್ ನಾರ್ವೆ ಯಶಸ್ವಿ ಆಗಿದೆ. ತನ್ನ ಮಕ್ಕಳ ರಕ್ಷಣೆಗಾಗಿ ಹೋರಾಡುವ ಧೈರ್ಯವಂತೆ ಮಹಿಳೆ ಪಾತ್ರದಲ್ಲಿ ನಟಿಸಿದ್ದಾರೆ. ಒಂದೊಳ್ಳೆ ಕಂಟೆಂಟ್ ಸಿನಿಮಾ ಜನರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ಯಶಸ್ವಿ ಆಗುತ್ತದೆ ಎಂಬ ನಂಬಿಕೆಯನ್ನು ಸಾಬೀತು ಪಡಿಸಿತು.

ABOUT THE AUTHOR

...view details