ಕರ್ನಾಟಕ

karnataka

ETV Bharat / entertainment

'ರಂಗು ರಗಳೆ' ಮಾಡಲು ಸಿದ್ಧರಾದ ಸ್ಯಾಂಡಲ್​ವುಡ್​ ಯುವ ನಟರು - etv bharat kannada

'ರಂಗು ರಗಳೆ' ಸಿನಿಮಾದ ಮುಹೂರ್ತ ಕಾರ್ಯಕ್ರಮವು ಇತ್ತೀಚೆಗೆ ನೆರವೇರಿದ್ದು, ಮೇ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ.

rangu-ragale
'ರಂಗು ರಗಳೆ'

By

Published : Apr 17, 2023, 12:06 PM IST

ಕನ್ನಡ ಚಿತ್ರರಂಗದಲ್ಲಿ ಸದ್ಯ ಹೊಸ ಪ್ರಯೋಗಗಳ ಪರ್ವ ಕಾಲ ಶುರುವಾಗಿದೆ. ಹೊಸಬರು ವಿಭಿನ್ನ ಪ್ರಯತ್ನದೊಂದಿಗೆ ಚಿತ್ರರಂಗಕ್ಕೆ ಅಡಿ ಇಡುತ್ತಿದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ ರೂಪುಗೊಂಡಿರುವ ಸಿನಿಮಾವೇ 'ರಂಗು ರಗಳೆ'. ಜಾಕ್​ ನಿರ್ದೇಶಿಸುತ್ತಿರುವ ಈ ಚಿತ್ರದ ಮುಹೂರ್ತ ಕಾರ್ಯಕ್ರಮವು ಬೆಂಗಳೂರಿನ ಪಂಚಮುಖಿ ಗಣಪತಿ ದೇಗುಲದಲ್ಲಿ ನೆರವೇರಿದೆ.

'ರಂಗು ರಗಳೆ' ಚಿತ್ರತಂಡ

ತಮಿಳು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಜಾಕ್ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಕಥಾಹಂದರದ ಈ ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿಯ ಅಭಿಲಾಷ್ ದಳಪತಿ, ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಅಭಿದಾಸ್ ಹಾಗೂ ಮೆಟ್ರೋ ಸಾಗಾ ಮೂಲಕ ಮನೆ ಮಾತಾಗಿರುವ ಸುಘೋಷ್ ನಾಯಕರಾಗಿ ನಟಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಜಾಕ್​, "ನಮ್ಮದು ಬಿಗ್ ಟೀಂ ಇದೆ. ಈ ಪಯಣ ಶುರುವಾಗಿ ಆರೇಳು ತಿಂಗಳು ಆಯ್ತು. ಎಲ್ಲರೂ ಡೇ ಅಂಡ್​ ನೈಟ್ ವರ್ಕ್ ಮಾಡುತ್ತಿದ್ದೇವೆ" ಎಂದರು. ಬಳಿಕ ಸಂಗೀತ ನಿರ್ದೇಶಕ ಪೂರ್ಣಚಂದ್ರ, "ಜಾಕ್ ಅವರು ಎಲ್ ವಿ ಪ್ರಸಾದ್ ಅಕಾಡೆಮಿಯಲ್ಲಿ ಟ್ರೈನಿಂಗ್ ತೆಗೆದುಕೊಂಡು ತಮಿಳು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿದ್ದುಕೊಂಡು ಒಳ್ಳೆ ಅನುಭವದ ಜೊತೆಗೆ ನಿರ್ದೇಶಕರಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಾರೆ. ಒಂದು ವರ್ಷದಿಂದ ತಂಡ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಇಡೀ ಸಿನಿಮಾ ಪಾತ್ರಗಳು ಎಂಟರ್​ಟೈನ್​ಮೆಂಟ್​ ಮಾಡುತ್ತವೆ" ಎಂದು ತಿಳಿಸಿದರು.

ಬಳಿಕ ಅಭಿಲಾಷ್ ಮಾತಾನಾಡಿ, "ಕಂಪ್ಲೀಟ್ ಎಂಟರ್​ಟೈನ್​ಮೆಂಟ್​ ಪ್ಯಾಕೇಜ್ ಮೂಲಕ ನಾನು ಬರ್ತಿದ್ದೇವೆ. ಜಾಕ್ ಮತ್ತು ನನಗೆ 12 ವರ್ಷದ ಪರಿಚಯ. ಪೂರ್ಣ ಅಣ್ಣನ ಬಗ್ಗೆ ಮಾತಾಡುವಷ್ಟು ದೊಡ್ಡವರಲ್ಲ. ಜಾಕ್ ನಂಬಿ ನಿರ್ಮಾಪಕರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಲವ್ ಮಾಕ್ಟೇಲ್ ನನಗೆ ದೊಡ್ಡ ಸಕ್ಸಸ್ ತಂದುಕೊಟ್ಟಿದೆ. ರಂಗು ರಗಳೆ ಮೂಲಕ ಲೀಡ್ ಆಗಿ ನಟಿಸುತ್ತಿದ್ದೇವೆ" ಎಂದರು.

ನಟ ಅಭಿದಾಸ್ ಮಾತಾನಾಡಿ, "ಸ್ಕ್ರಿಪ್ಟ್​ ಕೇಳಿ ತುಂಬಾ ಇಷ್ಟವಾಯ್ತು. ಮೇ ಮೊದಲ ವಾರವೇ ಚಿತ್ರೀಕರಣ ಶುರು ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಈ ಟೀಂ ಜೊತೆ ಕೆಲಸ ಮಾಡಲು ಎಕ್ಸೈಟ್ ಆಗಿದ್ದೇನೆ. ಗಟ್ಟಿಮೇಳ ಸೀರಿಯಲ್​ನಲ್ಲಿ‌ ನೀವೆಲ್ಲ ನನ್ನ ನೋಡಿ ಇರ್ತಿರಾ. ಈಗ ರಂಗು ರಗಳೆ ಸಿನಿಮಾ ಮೂಲಕ ಹೀರೋ ಆಗಿ ನಟಿಸುತ್ತಿದ್ದೇನೆ" ಎಂದು ನುಡಿದರು.

"ಜಾಕ್ ಅಣ್ಣ ನನಗೆ ಫಿಲ್ಮ್​ ಇನ್​ಸ್ಟಿಟ್ಯೂಟ್​ನಲ್ಲಿ ಸೀನಿಯರ್. ಒಂದು ವರ್ಷದ ಹಿಂದೆಯೇ‌ ನಾನು ಸಿನಿಮಾ ಮಾಡುತ್ತಿದ್ದೇನೆ, ನಿನಗೊಂದು ರೋಲ್ ಇದೆ ಎಂದಿದ್ದರು. ಅದು ಇವತ್ತು‌ ಮುಹೂರ್ತದವರೆಗೂ ಬಂದಿದೆ‌. ನಿಮ್ಮ ಬೆಂಬಲ ನನ್ನ ಮೇಲೆ ನನ್ನ ತಂಡದ ಮೇಲೆ ಇರಲಿ" ಎಂದು ನಟ ಸುಘೋಷ್ ಹೇಳಿದರು.

ಶ್ರೀ ವಿಶ್ವಂ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಶಶಿಕಲಾ ಉಮೇಶ್ 'ರಂಗು ರಗಳೆ' ಸಿನಿಮಾಗೆ ಬಂಡವಾಳ ಹೂಡಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ, ಸಾಗರ್ ಎಂಬಿ ಸಂಕಲನ, ಶೇಖರ್ ಛಾಯಾಗ್ರಹಣವಿದೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲಿಯೇ ಉಳಿದ ತಾರಾಬಳಗದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

ಇದನ್ನೂ ಓದಿ:ಗೋವುಗಳೊಂದಿಗೆ ಜನ್ಮದಿನ ಆಚರಿಸಿಕೊಂಡ ರಿಷಬ್​ ಶೆಟ್ಟಿ ಪುತ್ರ: ಮುದ್ದಾದ ವಿಡಿಯೋ ನೋಡಿ

ABOUT THE AUTHOR

...view details