ಅಭಿಮಾನಿಗಳ ಹೃದಯದಲ್ಲಿ ಆರಾಧ್ಯ ದೈವನಾಗಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನೆಲೆಸಿದ್ದಾರೆ. ಅಪ್ಪು ಎಂದಾಕ್ಷಣ ಎಲ್ಲರ ಕಣ್ಮುಂದೆ ಬರೋದು ಆ ನಗು ಮುಖ ಹಾಗೂ ಸರಳತೆ. ಪ್ರತಿಯೊಬ್ಬರಿಗೂ ಗೌರವ ಕೊಡುವ ಮೂಲಕ ಗೌರವ ಸಂಪಾದಿಸಿದ್ದರು ಅಪ್ಪು.
ಸದಾ ಎಲ್ಲರ ಒಳ್ಳೆಯದನ್ನೇ ಬಯಸುತ್ತಾ, ಇತರರಿಗೆ ಮಾದರಿಯಾಗುವುದರ ಜೊತೆಗೆ ಜೀವನವನ್ನು ತನ್ನ ಇಷ್ಟದಂತೆ ಎಂಜಾಯ್ ಮಾಡುತ್ತಿದ್ದ ಪುನೀತ್ ರಾಜ್ಕುಮಾರ್ ಮರಣ ಅದೆಷ್ಟೋ ಮಂದಿಯ ಕಣ್ಣೀರಿಗೆ ಕಾರಣವಾಯ್ತು. ಅವರ ಸಾಕಷ್ಟು ಅಭಿಮಾನಿಗಳು ಕೂಡ ಆಘಾತಕ್ಕೊಳಗಾಗಿ ಸಾವನ್ನಪ್ಪಿದರು. ಇದೀ ಅವರ ಹೆಸರಿನಲ್ಲಿ ಸಮಾಜಮುಖಿ ಕಾರ್ಯಗಳು ನಡೆಯುತ್ತಿದೆ.
ಗಣೇಶ್ ಬಗ್ಗೆ ರಂಗಾಯಣ ರಘು ಗುಣಗಾನ ಪುನೀತ್ ರಾಜ್ಕುಮಾರ್ ನಟನೆ ಮಾತ್ರವಲ್ಲದೇ ಅವರ ಸಹಾಯಗಳು, ಸಮಾಜಮುಖಿ ಕೆಲಸಗಳಿಂದ ನಿಜಜೀವನದಲ್ಲೂ ಹೀರೋ ಆಗಿ ಗುರುತಿಸಿಕೊಂಡರು. ಕಷ್ಟದಲ್ಲಿರುವವರಿಗೆ ಮರುಗಿ ಸಹಾಯ ಹಸ್ತ ಚಾಚುತ್ತಿದ್ದರು. ಇಹಲೋಕ ತ್ಯಜಿಸಿದ ಅವರನ್ನು ಇಂದು ದೇವರ ರೂಪದಲ್ಲಿ ಕಾಣುತ್ತಿದ್ದಾರೆ ಅಭಿಮಾನಿಗಳು.
ಇದೀಗ ಪುನೀತ್ ರಾಜ್ಕುಮಾರ್ ಅವರ ಆದರ್ಶದ ಹಾದಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸಾಗುತ್ತಿದ್ದಾರೆ ಎನಿಸುತ್ತಿದೆ. ಹೌದು, ಅಭಿಮಾನಿಗಳು ಹಾಗು ಚಿತ್ರರಂಗದವರು ಗಣೇಶ್ ಅವರಲ್ಲಿ ಅಪ್ಪು ಅವರ ಗುಣಗಳನ್ನು ಕಾಣಲು ಶುರುಮಾಡಿದ್ದಾರೆ. ಗಣಿ ಕೂಡ ಪುನೀತ್ ರಾಜ್ಕುಮಾರ್ ಗುಣಗಳನ್ನೇ ಹೊಂದಿದ್ದಾರೆ ಎಂಬ ಮಾತು ಚಿತ್ರರಂಗದಿಂದ ಕೇಳಿ ಬಂದಿದೆ.
ಪವರ್ ಸ್ಟಾರ್ - ಗೋಲ್ಡನ್ ಸ್ಟಾರ್ ಗೋಲ್ಡನ್ ಸ್ಟಾರ್ ಗಣೇಶ್ ಸದಾ ಹಸನ್ಮುಖಿಯಾಗಿರುತ್ತಾರೆ. ಕ್ರಿಯೆಟಿವ್ ಪರ್ಸನಾಲಿಟಿ ಅವರದ್ದು. ನಟನಾಗಿ ಮಾತ್ರವಲ್ಲದೇ ಚಿತ್ರರಂಗದ ಸರ್ವತೋಮುಖ ಬೆಳವಣಿಗೆ ಚಿಂತಿಸೋ ಮನಸ್ಸು. ಕೇವಲ ತೆರೆ ಮೇಲೆ ಮಾತ್ರ ಹೀರೋ ಆಗಿರದೇ, ನಿಜ ಜೀವನದಲ್ಲೂ ನಾವು ಮಾಡುವ ಕೆಲಸಗಳು ಬೇರೆಯವರಿಗೆ ಪ್ರೇರಣೆಯಾಗಬೇಕು ಎನ್ನುವುದೇ ಗಣಿ ಲೈಫ್ ಪ್ರಿನ್ಸಿಪಲ್. ಇದೀಗ ಅವರ ಈ ಗುಣಗಳೇ ಅಪ್ಪು ಅವರನ್ನು ನೆನೆಯುವಂತೆ ಮಾಡಿವೆ. ಗಶೇಶ್ ಅವರಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ಕಾಣಬಹುದು ಎಂದು ಹಿರಿಯ ನಟ ರಂಗಾಯಣ ರಘು ತಿಳಿಸಿದ್ದಾರೆ.
ಪುನೀತ್ ಬದುಕಿದ್ದಾಗ ಮಗುವಂತೆ ಎಲ್ಲರ ಜೊತೆ ಬೆರೆಯುತ್ತಿದ್ದರು. ಸಮಾಜಮುಖಿ ಕೆಲಸಗಳನ್ನು ಯಾರಿಗೂ ಗೊತ್ತಾಗದಂತೆ ಮಾಡುತ್ತಿದ್ದರು. ಹಾಗೆಯೇ ಗಣೇಶ್ ಕೂಡ ಎಲ್ಲರನ್ನು ನಗಿಸುತ್ತಾ, ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಲ್ಲದೇ ಇವರಿಬ್ಬರೂ ಆತ್ಮೀಯ ಗೆಳೆಯರು ಅನ್ನೋದು ಇಡೀ ಚಿತ್ರರಂಗಕ್ಕೆ ಗೊತ್ತಿರೋ ವಿಚಾರ.
ತಾನೊಬ್ಬ ದೊಡ್ಡ ನಟನಾದ್ರೂ ಎಲ್ಲರ ಮುಂದೆ ಬಂದಾಗ ಸಾಮಾನ್ಯನಂತೆ ವರ್ತಿಸೋ ಗಣಿ ಪುನೀತ್ ಅವರನ್ನೇ ನೆನಪಿಸ್ತಾರೆ ಎಂದು ನಟ ರಂಗಾಯಣರಘು ತಿಳಿಸಿದ್ದಾರೆ. ತ್ರಿಬಲ್ ರೈಡಿಂಗ್ ಟ್ರೈಲರ್ ಲಾಂಚ್ ಸಮಾರಂಭ ಈ ಘಟನೆಗೆ ಸಾಕ್ಷಿಯಾಯ್ತು. ಗಣೇಶ್ ಹಾಗೂ ಅಪ್ಪು ಸ್ವಭಾವಗಳ ಬಗ್ಗೆ ಹತ್ತಿರದಿಂದ ಬಲ್ಲ ರಂಗಾಯಣ ರಘು ಹೇಳಿದ ಮಾತುಗಳು ಒಮ್ಮೆ ನಿಜವೆನಿಸಿತು.
ಇದನ್ನೂ ಓದಿ:ನ. 25ಕ್ಕೆ ರಾಜ್ಯಾದ್ಯಂತ 'ತ್ರಿಬಲ್ ರೈಡಿಂಗ್' ಹೊರಡಲಿದ್ದಾರೆ ಗೋಲ್ಡನ್ ಸ್ಟಾರ್
ಹೌದು, ಅಪ್ಪು ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಗಣೇಶ್ ಸಿನಿ ಸಾಧನೆ ಹಾಗೂ ಸರಳ ವ್ಯಕ್ತಿತ್ವ ಈಗಿನ ಹೊಸ ಪ್ರತಿಭೆಗಳಿಗೆ ಮಾದರಿ. ಇನ್ನೂ, ಗಣೇಶ್ ಸದ್ಯ ತ್ರಿಬಲ್ ರೈಡಿಂಗ್ ಹೋಗಲು ರೆಡಿಯಾಗಿದ್ದಾರೆ. ಇದೇ ನವೆಂಬರ್ 25ಕ್ಕೆ ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಆಗಲಿದೆ.