ಮುಂಬೈ:ಬಾಲಿವುಡ್ ನಟ ರಣದೀಪ್ ಹೂಡಾ ಕುದುರೆ ಸವಾರಿ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕುದುರೆ ಸವಾರಿ ವೇಳೆ ರಣದೀಪ್ ಹೂಡಾ ದಿಢೀರ್ ಮೂರ್ಛೆ ಹೋಗಿ ಕೆಳಗೆ ಬಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆ ನಡೆದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸದ್ಯಕ್ಕೆ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರ ತಂಡ ಸೂಚಿಸಿದೆ.
ಇದನ್ನೂ ಓದಿ:ಒಂದು ಚಿತ್ರಕ್ಕೆ ₹130 ಕೋಟಿ ಸಂಭಾವನೆ! ಸಲ್ಮಾನ್ ಖಾನ್ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತೇ?
ಕಳೆದ ವರ್ಷ, ಸಲ್ಮಾನ್ ಖಾನ್ ಜೊತೆಗಿನ 'ರಾಧೆ' ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್‌ನ ಚಿತ್ರೀಕರಣದ ವೇಳೆಯಲ್ಲಿಯೂ ಅವರು ಗಾಯಗೊಂಡಿದ್ದರು. ಬಲಗಾಲಿಗೆ ಬಲವಾಗಿ ಪೆಟ್ಟು ಬಿದ್ದರಿಂದ ಅವರ ಮೊಣಕಾಲನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಅಲ್ಲದೇ ಅಭಿಮಾನಿಗಳಿಗೆ ತಾವು ಆರೋಗ್ಯವಾಗಿರುವುದಾಗಿ ಅಭಯ ನೀಡಿದ್ದರು. 'ನನ್ನ ಕಾಲು ಚೇತರಿಸಿಕೊಳ್ಳುತ್ತಿದೆ. ಶಸ್ತ್ರಚಿಕಿತ್ಸೆಯ ನಂತರ ಯಾವುದೇ ತೊಡಕು ಇಲ್ಲ ಎಂದು ತಿಳಿಸಿದ್ದರು. ಅಲ್ಲದೇ ಒಂದು ವಾರದಲ್ಲಿ ನಾನು ಸರಿಯಾಗಿ ನಡೆಯಬಹುದೆಂದು ವೈದ್ಯರು ಸಹ ಹೇಳಿದ್ದಾರೆ ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ:ಮಹಿಳಾ ಪೊಲೀಸ್ ಅಧಿಕಾರಿಗಳ ಜೊತೆ ಚಿತ್ರರಂಗದ ಅನುಭವ ಹಂಚಿಕೊಂಡ ನಟಿ ಭವ್ಯ
ಇದೀಗ ಮತ್ತೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ರಣದೀಪ್ ಹೂಡಾ ತಮ್ಮ ಮುಂಬರುವ 'ಸ್ವಾತಂತ್ರ್ಯವೀರ್ ಸಾವರ್ಕರ್' ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿದ್ದಾರೆ. ಚಿತ್ರಕ್ಕಾಗಿ ಸುಮಾರು 22 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
'ವಿನಾಯಕ ದಾಮೋದರ್ ಸಾವರ್ಕರ್' ಪಾತ್ರಕ್ಕೆ ನ್ಯಾಯ ಸಲ್ಲಿಸಲು ಅವರು ತಮ್ಮ ಆಹಾರ ಕ್ರಮವನ್ನು ಸಹ ಕಡಿಮೆ ಮಾಡಿದ್ದಾರೆ. ಈ ಕಾರಣದಿಂದಾಗಿ ಅವರು ತುಂಬಾ ತೆಳ್ಳಗಿದ್ದಾರಂತೆ. ಸದ್ಯ ಮತ್ತಷ್ಟು ತೂಕ ಇಳಿಸಿಕೊಳ್ಳುವ ಸಲುವಾಗಿ ಅವರು ದಿನವೂ ವರ್ಕೌಟ್ ಮಾಡುತ್ತಿದ್ದಾರೆ. ಇದಕ್ಕಾಗಿ ನಿತ್ಯ ಕುದುರೆ ಸವಾರಿಯನ್ನ ಸಹ ಮಾಡುತ್ತಾರೆ. ಎಂದಿನಂತೆ ಈ ಕುದುರೆ ಸವಾರಿ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಟ್ರೈಲರ್ ಹಾಗೂ ಟೀಸರ್ ಸಿನಿ ರಸಿಕರ ಗಮನ ಸೆಳೆದಿದೆ. ಮೇ 26, 2023ರಲ್ಲಿ ಸಿನಿಮಾ ರಿಲೀಸ್ ಅಗುತ್ತಿದೆ.
ಇದೀಗ ವೈದ್ಯರು ಬೆಡ್ ರೆಸ್ಟ್ ತಗೆದುಕೊಳ್ಳುವಂತೆ ತಿಳಿಸಿದ್ದಾರೆ ಅನ್ನೋದು ಸದ್ಯಕ್ಕೆ ಬಂದ ಮಾಹಿತಿ. ಇತ್ತ ಅಭಿಮಾನಿಗಳು ಬೇಗ ಗುಣಮುಖರಾಗುವಂತೆ ಮತ್ತು ಆಸ್ಪತ್ರೆಯಿಂದ ಆದಷ್ಟು ವೇಗ ಬಿಡುಗಡೆಯಾಗುವಂತೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಕುದುರೆ ಮೇಲಿಂದ ಬಿದ್ದ ಪರಿಣಾಮವಾಗಿ ಕಾಲಿಗೆ ತೀವ್ರ ಪೆಟ್ಟಾಗಿದ್ದು, ಸದ್ಯಕ್ಕೆ ಯಾವುದೇ ಚಿತ್ರದ ಚಿತ್ರೀಕರಣಕ್ಕೆ ತೆರಳುವುದು ಅನುಮಾನ. ಸಂಪೂರ್ಣ ಗುಣಮುಖರಾದ ಬಳಿಕವೇ ಅವರು ಕ್ಯಾಮರಾಗಳ ಮುಂದೆ ಕಾಣಿಸಿಕೊಳ್ಳಬಹು.
ಇದನ್ನೂ ಓದಿ:ಕಾರ್ತಿಕ್ ಆರ್ಯನ್ ಅಭಿನಯದ ಶೆಹಜಾದ ಚಿತ್ರ ಕುರಿತು ಕರಣ್ ಜೋಹರ್ ಹೇಳಿದ್ದೇನು?