ಹೈದರಾಬಾದ್: ಪ್ರೇಮಿಗಳ ದಿನ ಮುಗಿದರೂ ಅದರ ಅಮಲು ಮಾತ್ರ ಇನ್ನು ಕಡಿಮೆಯಾಗಿಲ್ಲ. ಈಗಾಗಲೇ ಬಾಲಿವುಡ್ನ ಅನೇಕ ಜೋಡಿಗಳು ಈ ದಿನವನ್ನು ಒಟ್ಟಿಗೆ ಸಂಭ್ರಮಿಸಿದ್ದು, ಈ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ಈ ನಡುವೆ ಪ್ರೇಮಿಗಳಿಗೆ ಪ್ರತಿನಿತ್ಯವೂ ವ್ಯಾಲಂಟೈನ್ ಡೇ ಎಂಬ ಮಾತಿನಂತೆ ರಣಬೀರ್ ಕಪೂರ್ ತಮ್ಮ ಜೀವನ ಭಾಗವಾಗಿರುವ ಇಬ್ಬರು ಹುಡುಗಿಯರಿಗೆ ಪ್ರೀತಿಯ ಶುಭಾಶಯ ಕೋರಿದ್ದಾರೆ.
ಬಾಲಿವುಡ್ನ ಪ್ರಣಯ ಪಕ್ಷಿಗಳಾಗಿದ್ದ ಈ ಜೋಡಿ ಕಳೆದ ವರ್ಷ ಸಪ್ತಪದಿ ತುಳಿದಿದ್ದರು. ಮದುವೆಯಾದ ಬಳಿಕ ರಣಬೀರ್ ಮತ್ತು ಆಲಿಯಾಗೆ ಇದು ಮೊದಲ ಪ್ರೇಮಿಗಳ ದಿನ. ಪ್ರೇಮಿಗಳ ದಿನವನ್ನು ಒಟ್ಟಿಗೆ ಆಚರಿಸಬೇಕಾಗಿದ್ದ ಈ ಜೋಡಿ ಈ ಬಾರಿ ದೂರ ಇದ್ದವು. ಇದಕ್ಕೆ ಕಾರಣ ರಣಬೀರ್ ಬ್ಯುಸಿ ಶೆಡ್ಯೂಲ್.
ದೆಹಲಿಯಲ್ಲಿ ಬ್ಯುಸಿಯಾದ ರಣಬೀರ್: ಸದ್ಯ ಮಗಳು ರಾಹಾ ಲಾಲನೆ ಪಾಲನೆಯಲ್ಲಿ ಆಲಿಯಾ ಬ್ಯುಸಿಯಾಗಿದ್ದರೆ, ಇತ್ತ, ರಣಬೀರ್ ಕಪೂರ್ ತಮ್ಮ ಮುಂದಿನ ಚಿತ್ರ ತೂ ಜೂಟಿ ಮೇ ಮಕ್ಕರ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಚಿತ್ರದ ಪ್ರಮೋಷನ್ಗೆ ಪ್ರೇಮಿಗಳ ದಿನದಂದು ದೆಹಲಿಗೆ ಕೂಡ ಆಗಮಿಸಿದ್ದರು. ದೂರ ಇದ್ದರೂ ಪ್ರೇಮಿಗಳ ದಿನದಂದು ಹೆಂಡತಿ ಆಲಿಯಾ ಮತ್ತು ಮುದ್ದು ಮಗಳು ರಾಹಾಳ ನೆನಪಿನಲ್ಲೇ ಇದ್ದ ರಣಬೀರ್ ರಾಷ್ಟ್ರ ರಾಜಧಾನಿಯಿಂದಲೇ ಪ್ರೀತಿ ತುಂಬಿದ ಸಂದೇಶವನ್ನು ಕಳುಹಿಸಿದ್ದಾರೆ.
ದೆಹಲಿಯ ಗಲ್ಗೊಟಿಸ್ ಯುನಿವರ್ಸಿಟಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಣಬೀರ್, ಮನರಂಜನೆ ನೀಡುವ ಮೂಲಕ ನೆರೆದಿದ್ದ ಅಭಿಮಾನಿಗಳ ಮನ ಗೆದ್ದರು. ಈ ವೇಳೆ ಅಭಿಮಾನಿಗಳಿಗಾಗಿ ಡ್ಯಾನ್ಸ್ ಸ್ಟೆಪ್ ಹಾಕಿದ ರಣಬೀರ್ ಇದೇ ವೇಳೆ ತಮ್ಮ ಬ್ರಹ್ಮಾಸ್ತ್ರ ಚಿತ್ರದ ಕೆಸರಿಯಾ ಹಾಡನ್ನು ಹಾಡಿ ಮೋಡಿ ಮಾಡಿದರು.
ಇಬ್ಬರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಅಭಿಮಾನಿಗಳಿಗೆ ಪ್ರೇಮಿಗಳ ದಿನದ ಶುಭ ಕೋರಿದ ರಣಬೀರ್ ದೆಹಲಿಯಿಂದಲೇ ಪ್ರೀತಿಯ ಮಡದಿ ಆಲಿಯಾ ಮತ್ತು ಮುದ್ದು ಮಗಳು ರಾಹಾಗೆ ಸಂದೇಶವನ್ನು ನೀಡಿದರು. ಈ ವೇಳೆ, ಮಾತನಾಡಿದ ರಣಬೀರ್ ನಾನು ಎರಡು ಪ್ರೀತಿಗೆ ಶುಭಾಶಯ ಕೋರಬೇಕು ಎಂದಿದ್ದೇನೆ ಎಂದು ರಣಬೀರ್ ಹೇಳುತ್ತಿದ್ದಂತೆ ನೆರೆದವರಿಂದ ಉದ್ಘಾರ ವ್ಯಕ್ತವಾಯಿತು. ಮಾತು ಮುಂದುವರೆಸಿದ ರಣಬೀರ್ ಆಲಿಯಾ ಮತ್ತು ರಾಹಾ ಹ್ಯಾಪಿ ವ್ಯಾಲಂಟೈನ್ ಡೇ ಎಂದರು. ಜೊತೆಗೆ ನಾನು ನನ್ನಿಬ್ಬರು ಹುಡುಗಿರಯರನ್ನು ತುಂಬಾ ಪ್ರೀತಿಸುತ್ತೇನೆ. ಪ್ರೀತಿಯ ಹಬ್ಬದ ಈ ದಿನ ನನ್ನ ಪ್ರೀತಿಪಾತ್ರರಿಂದ ದೂರ ಇದ್ದು, ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು.
ರಣಬೀರ್ ತೂ ಜೂಟಿ ಮೇ ಮಕ್ಕರ್ ಚಿತ್ರದಲ್ಲಿ ಕ್ಲಿನ್ ಶೇವ್ನೊಂದಿಗೆ ಚಾಕೋಲೆಟ್ ಬಾಯ್ನಲ್ಲಿ ಕಂಡು ಬಂದಿದ್ದರೆ, ಪ್ರಮೋಷನ್ ವೇಳೆ ನಟ ರಣಬೀರ್ ಗಡ್ಡದಲ್ಲಿ ಕಂಡರು. ತನ್ನ ಮುಂದಿನ ಚಿತ್ರವಾದ ಅನಿಮಲ್ಗಾಗಿ ಅವರು ಗಡ್ಡ ಬಿಟ್ಟಿದ್ದು, ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಇನ್ನು ತೂ ಜೂಟಿ ಮೇ ಮಕ್ಕರ್ ಚಿತ್ರ ಇದೇ ಮಾರ್ಚ್ 8 ರಂದು ಚಿತ್ರ ಮಂದಿರದಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ.
ಇದನ್ನೂ ಓದಿ: 'ವ್ಯಾಲೆಂಟೈನ್ಸ್ ಡೇ ದಿನ ಮದುವೆ ಪೂರ್ವ ಚಿತ್ರಗಳನ್ನು ಹಂಚಿಕೊಂಡ ಸಿದ್ಧಾರ್ಥ್,ಕಿಯಾರಾ ಅಡ್ವಾಣಿ