ಆಲಿಯಾ ಭಟ್, ರಣ್ಬೀರ್ ಕಪೂರ್ ಅಭಿನಯದ 'ಬ್ರಹ್ಮಾಸ್ತ್ರ ಭಾಗ 1: ಶಿವ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಬಾಲಿವುಡ್ನಲ್ಲಿ ಭರವಸೆ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಬ್ರಹ್ಮಾಸ್ತ್ರ ಸಖತ್ ಸದ್ದು ಮಾಡುತ್ತಿರುವ ಈ ವೇಳೆಯಲ್ಲಿ ರಣ್ಬೀರ್ ಕಪೂರ್ ಅವರ ಮುಂದಿನ ಚಿತ್ರ 'ಶಂಶೇರಾ'ದ ಪೋಸ್ಟರ್ ಲೀಕ್ ಆಗಿದೆ.
ರಣ್ಬೀರ್ ಕಪೂರ್ ಅವರ ಮುಂದಿನ ಚಿತ್ರ ಶಂಶೇರಾ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಅಭಿಮಾನಿಗಳು ಈ ಚಿತ್ರದಲ್ಲಿ ರಣ್ಬೀರ್ ಪಾತ್ರ ಹೇಗಿರಲಿದೆ ಎಂಬುದನ್ನು ನೋಡಲು ಕಾಯುತ್ತಿರುವ ಈ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಇದರಿಂದ ಕಾಯುವಿಕೆ ಕೊನೆಗೊಂಡಂತೆ ತೋರುತ್ತಿದೆ.
'ಶಂಶೇರಾ' ಚಿತ್ರದಲ್ಲಿ ರಣ್ಬೀರ್, ಸಂಜಯ್ ದತ್ ಲುಕ್ ಹೌದು, ಶಂಶೇರಾ ಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಿರ್ಮಾಪಕರು ಚಿತ್ರಕ್ಕೆ ಸಂಬಂಧಿಸಿದ ವಿವರಗಳನ್ನು ಮುಚ್ಚಿಟ್ಟು ಪ್ರಚಾರಕ್ಕಾಗಿ ಯೋಜಿಸುತ್ತಿರುವಾಗ ಶಂಶೇರಾ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ತನ್ನ ದಾರಿ ಕಂಡುಕೊಂಡಿದೆ. ಸೋರಿಕೆಯಾದ ಪೋಸ್ಟರ್‌ನಲ್ಲಿ ರಣಬೀರ್ ಕಪೂರ್ ಉಗ್ರ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ವಿವಾಹದ ನಂತರ ರಣಬೀರ್ ಬದಲಾಗಿದ್ದಾನೆ.. ಬದಲಾವಣೆ ಒಳ್ಳೆಯದು: ನೀತು ಕಪೂರ್
ಕರಣ್ ಮಲ್ಹೋತ್ರಾ ನಿರ್ಮಾಣದ ಈ ಆ್ಯಕ್ಷನ್ ಚಿತ್ರದಲ್ಲಿ ಸಂಜಯ್ ದತ್ ರಣ್ಬೀರ್ ಕಪೂರ್ನ ಶತ್ರುವಾಗಿ ಕಾಣಿಸಿಕೊಂಡಿದ್ದಾರೆ. ವಾಣಿ ಕಪೂರ್ ರಣ್ಬೀರ್ಗೆ ಜೋಡಿಯಾಗಿದ್ದಾರೆ. ಯಶ್ ರಾಜ್ ಫಿಲಂಸ್‌ನ ಶಂಶೇರಾ ಜುಲೈ 22 ರಂದು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.