ಹೈದರಾಬಾದ್ (ತೆಲಂಗಾಣ):ಆಲಿಯಾ ಭಟ್ ಜೊತೆಗೆ ಮದುವೆಯಾದ ನಂತರ ತಮ್ಮ ಮಗ ರಣಬೀರ್ ಕಪೂರ್ ಅವರಲ್ಲಿ ಆಗಿರುವ ಬದಲಾವಣೆ ಬಗ್ಗೆ ನಟಿ ನೀತು ಕಪೂರ್ ತೆರೆದಿಟ್ಟಿದ್ದಾರೆ. ತಮ್ಮ ಪತಿ, ಹಿರಿಯ ನಟ ರಿಷಿ ಕಪೂರ್ ಅವರ ನಿಧನದ ನಂತರ ಮತ್ತೆ ಚಿತ್ರರಂಗಕ್ಕೆ ಮರಳುತ್ತಿರುವ ನೀತು, ರಣಬೀರ್ ಮತ್ತು ಆಲಿಯಾ ಅವರ ವಿವಾಹದ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ನೀತು ಕಪೂರ್, ರಣಬೀರ್ ಮತ್ತು ಆಲಿಯಾ ಮದುವೆಯ ಬಗ್ಗೆ ನಾನು ಮತ್ತು ರಿಷಿ ತುಂಬಾ ಉತ್ಸುಕರಾಗಿದ್ದೆವು. ಆದರೆ, ದುರದೃಷ್ಟವಶಾತ್, ತನ್ನ ಮಗನ ಮದುವೆಯನ್ನು ನೋಡಲು ರಿಷಿ ಇರಲಿಲ್ಲ. ಆಲಿಯಾಳನ್ನು ಮದುವೆಯಾದ ನಂತರ ರಣಬೀರ್ ಬದಲಾಗಿದ್ದಾನೆ. ಬದಲಾವಣೆ ಒಳ್ಳೆಯದು. ನನ್ನ ಸೊಸೆ ರಣಬೀರ್‌ಗೆ ಸಾಕಷ್ಟು ಪ್ರೀತಿಯನ್ನು ನೀಡಿದ್ದರಿಂದ ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ಹೇಳಿದರು.