ಕರ್ನಾಟಕ

karnataka

ETV Bharat / entertainment

ಕೃತಿ ಸನೋನ್​ ಜೊತೆ ನಟಿಸುವ ಬಯಕೆ ವ್ಯಕ್ತಪಡಿಸಿದ ರಣಬೀರ್​ ಕಪೂರ್ - ಈಟಿವಿ ಭಾರತ ಕನ್ನಡ

ನಟ ರಣಬೀರ್​ ಕಪೂರ್​ ಬಹುಬೇಡಿಕೆ ನಟಿ ಕೃತಿ ಸನೋನ್​ ಜೊತೆ ನಟಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

Ranbir Kapoor
ರಣಬೀರ್​ ಕಪೂರ್

By

Published : Mar 9, 2023, 5:11 PM IST

Updated : Mar 9, 2023, 5:26 PM IST

ಬಾಲಿವುಡ್​ ನಟ ರಣಬೀರ್​ ಕಪೂರ್ ಅವರು ನಟಿ​ ಕೃತಿ ಸನೋನ್​ ಜೊತೆ ನಟಿಸುವ ಬಯಕೆ ವ್ಯಕ್ತಪಡಿಸಿದ್ದಾರೆ. ಅವರ ಇತ್ತೀಚಿನ 'ತು ಜೂಟಿ ಮೇ​ ಮಕ್ಕರ್' ಸಿನಿಮಾ​ ಪ್ರಚಾರದ ವೇಳೆ ರಣಬೀರ್​ ಕಪೂರ್​ ಜೊತೆ ಪ್ರಶ್ನೆಯೊಂದನ್ನು ಕೇಳಲಾಯಿತು. ನಿಮ್ಮ ಮುಂದಿನ ಸಿನಿಮಾಗೆ ನೀವು ಬಯಸುವ ನಟಿ ಯಾರು? ಎಂದು ಪ್ರಶ್ನಿಸಲಾಯಿತು. ಈ ವೇಳೆ ಅವರು ಬಿಟೌನ್​ ಬೆಡಗಿ ಕೃತಿ ಸನೋನ್​ ಹೆಸರನ್ನು ಪ್ರಸ್ತಾಪಿಸಿದ್ದಾರೆ.

ಇದು ಬಾಲಿವುಡ್​ ಅಂಗಳದಲ್ಲಿ ಟ್ರೆಂಡಿಂಗ್​ ಸುದ್ದಿಯಾಗಿದೆ. ರಣಬೀರ್​​ ಕಪೂರ್​ ಅವರು ಈ ಮೂಲಕ ತಮ್ಮ ಮನದ ಇಂಗಿತವನ್ನು ಹೊರಹಾಕಿದ್ದಾರೆ. ಕೃತಿ ಸನೋನ್​ ಜೊತೆ ನಟಿಸುವ ಕನಸನ್ನು ತೆರೆದಿಟ್ಟಿದ್ದಾರೆ. ಇವರಿಬ್ಬರು ಜೋಡಿಯಾಗಿ ತೆರೆ ಮೇಲೆ ಬಂದಲ್ಲಿ ಸಿನಿಮಾ ಮತ್ತಷ್ಟು ಹಿಟ್​ ಆಗುವುದರಲ್ಲಿ ಎರಡು ಮಾತಿಲ್ಲ.

ಜೋಡಿಯಾಗಿ ರಣಬೀರ್​ ಶ್ರದ್ಧಾ ನಟನೆ: ಲುವ್​ ರಂಜನ್​ ನಿರ್ದೇಶಿಸಿದ 'ತು ಜೂಟಿ ಮೇ ಮಕ್ಕರ್​' ಸಿನಿಮಾವನ್ನು ಮಾರಿಷಸ್​, ಸ್ಪೇನ್​, ದೆಹಲಿ ಮತ್ತು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ. ಮೊದಲ ಬಾರಿಗೆ ಬಾಲಿವುಡ್​ ಸೂಪರ್​ ಸ್ಟಾರ್​ ರಣಬೀರ್​ ಕಪೂರ್​ ಮತ್ತು ಶ್ರದ್ಧಾ ಕಪೂರ್​ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾದಲ್ಲಿ ಅನುಭಾವ್​ ಸಿಂಗ್​ ಬಾಸ್ಸಿ, ಡಿಂಪಲ್​ ಕಪಾಡಿಯಾ ಮತ್ತು ಬೋನಿ ಕಪೂರ್​ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವು ನಿನ್ನೆ ಬಿಡುಗಡೆಯಾಗಿದ್ದು, ಮೊದಲ ದಿನವೇ ಉತ್ತಮ ಗಳಿಕೆ ಕಂಡಿದೆ.

ಇದನ್ನೂ ಓದಿ:ಕೆಜಿಎಫ್ ಚಾಪ್ಟರ್ 2 ದಾಖಲೆ ಸರಿಗಟ್ಟಲಿದೆ ಕಬ್ಜ ಸಿನಿಮಾ ಬಿಡುಗಡೆ.. 4000 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಸಂಭವ

ಈ ಹಿಂದೆ ಶಂಶೇರಾ ಚಿತ್ರದಲ್ಲಿ ಆ್ಯಕ್ಷನ್​ ಪಾತ್ರ ಮತ್ತು ಬ್ರಹ್ಮಾಸ್ತ್ರದಲ್ಲಿ ಫ್ಯಾಂಟಸಿ ಡ್ರಾಮದ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದ್ದ ರಣಬೀರ್​ ಇದೀಗ ತು ಜೂಟಿ ಮೇ ಮಕ್ಕರ್​ ಚಿತ್ರದಲ್ಲಿ ಮತ್ತೆ ಲವರ್​ ಕಂ ಕಾಮಿಡಿ ಬಾಯ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೊಮ್ಯಾಂಟಿಕ್​ ಕಾಮಿಡಿ ಮತ್ತು ಕೌಟುಂಬಿಕ ಎಂಟರ್​ಟೈನ್​ಮೆಂಟ್​ ಚಿತ್ರ ಇದಾಗಿದೆ. ಶ್ರದ್ಧಾ ಮತ್ತು ರಣಬೀರ್​ ನಡುವಿನ ಕಿತ್ತಾಟದ ಪ್ರೇಮ ಕಾವ್ಯವನ್ನು ಈ ಕಥೆ ಹೊಂದಿದೆ. ಇಬ್ಬರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಈ ಸಿನಿಮಾ ಸುಮಾರು 3302 ಪರದೆಗಳಲ್ಲಿ ನಿನ್ನೆ ಬಿಡುಗಡೆಯಾಗಿದೆ. 2018 ರಲ್ಲಿ ತೆರೆಕಂಡ ಸೋನು ಕೆ ಟಿಟು ಕಿ ಸ್ವೀಟಿ ನಂತರ ಲುವ್​ ರಂಜನ್​ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇನ್ನು ಬಹುಬೇಡಿಕೆ ನಟಿ ಕೃತಿ ಸನೋನ್​ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಕೃತಿ ಎರಡು ಬ್ಲಾಕ್​ ಬಸ್ಟರ್​ ಚಿತ್ರಗಳಿಗಾಗಿ ಸಜ್ಜಾಗುತ್ತಿದ್ದಾರೆ. ಓಂ ರಾಟ್​ ನಿರ್ದೇಶಿಸಿದ ಆದಿಪುರುಷ್​ ಸಿನಿಮಾದಲ್ಲಿ ಪ್ರಭಾಸ್​ ಜೊತೆ ಕೃತಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವು ಜೂನ್​ನಲ್ಲಿ ಬಿಡುಗಡೆಯಾಗಲಿದೆ. ಮತ್ತು ವಿಕಾಸ್​ ಬಹ್ಲ್ಸ್​ ನಿರ್ದೇಶನದ ಗಣಪತ್​ ಚಿತ್ರದಲ್ಲಿ ಟೈಗರ್​ ಶ್ರಾಫ್​ ಜೊತೆ ನಟಿಸಲಿದ್ದಾರೆ. ಈ ಸಿನಿಮಾವು ಅಕ್ಟೋಬರ್​ನಲ್ಲಿ ತೆರೆ ಕಾಣಲಿದೆ. ಇದಲ್ಲದೇ ದಿ ಕ್ರ್ಯೂ ಮತ್ತು ಶಾಹಿದ್​ ಕಪೂರ್​ ಅವರ ಹೆಸರಿಡದ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ:ಶರಿಯತ್ ಕಾನೂನು ಬಿಕ್ಕಟ್ಟಿಗೆ ಪರಿಹಾರ: ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ 28 ವರ್ಷಗಳ ನಂತರ ಮರು ಮದುವೆಯಾದ ಸಿನಿಮಾ ನಟ

Last Updated : Mar 9, 2023, 5:26 PM IST

ABOUT THE AUTHOR

...view details