ಕರ್ನಾಟಕ

karnataka

ETV Bharat / entertainment

Animal: ರಗಡ್​ ಲುಕ್​ನಲ್ಲಿ ರಣ್​ಬೀರ್​ ಕಪೂರ್​ - ಅನಿಮಲ್​​ ಸೆಟ್​ನಿಂದ ನಟನ ಫೋಟೋ ವೈರಲ್​​ - Ranbir Kapoor

ಅನಿಮಲ್ ಶೂಟಿಂಗ್​​​​ ಸೆಟ್​ನಿಂದ ನಟ ರಣ್​ಬೀರ್​ ಕಪೂರ್​ ಅವರ ಫೋಟೋ ವೈರಲ್​​ ಆಗಿದೆ.

Ranbir Kapoor photo from Animal set
ಅನಿಮಲ್​​ ಸೆಟ್​ನಿಂದ ರಣ್​ಬೀರ್​ ಕಪೂರ್​ ಫೋಟೋ ವೈರಲ್​​

By

Published : Jun 29, 2023, 1:33 PM IST

ಅನಿಮಲ್​​ 2023ರ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಕಬೀರ್ ಸಿಂಗ್ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾದಲ್ಲಿ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್​ ಬಹುಬೇಡಿಕೆ ನಟ ರಣ್​ಬೀರ್​ ಕಪೂರ್ ಸ್ಕ್ರೀನ್​ ಶೇರ್ ಮಾಡಿದ್ದಾರೆ. ಈ ನಟರು ಮೊದಲ ಬಾರಿ ಒಟ್ಟಿಗೆ ನಟಿಸಿದ್ದು, ಅನಿಮಲ್ ಶೂಟಿಂಗ್​​​​ ಸೆಟ್​ನಿಂದ ನಟ ರಣ್​ಬೀರ್​ ಕಪೂರ್ ಅವರ ಫೋಟೋ ವೈರಲ್​ ಆಗಿದೆ.

ಬಾಲಿವುಡ್‌ನ ಬಹುಬೇಡಿಕೆ, ಸುಂದರ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ರಣ್​​​ಬೀರ್ ಕಪೂರ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ಪತ್ನಿ ಆಲಿಯಾ ಭಟ್ ಅವರೊಂದಿಗೆ ವಿದೇಶಕ್ಕೆ ತೆರಳಿದ್ದರು. ಅಲ್ಲಿಂದ ಈ ತಾರಾ ಜೋಡಿಯ ಹಲವು ಫೋಟೋಗಳು ವೈರಲ್ ಆಗಿ ಸದ್ದು ಮಾಡಿತು. ದುಬೈನ ಮಾಲ್‌ನಲ್ಲಿ ಮಗಳು ರಾಹಾಗಾಗಿ ಶಾಪಿಂಗ್ ಮಾಡಿದ್ದು, ರಣ್​​ಬೀರ್ ಮತ್ತು ಆಲಿಯಾ ಅವರ ಫೋಟೋ ವೈರಲ್ ಆಗಿತ್ತು.

ಇದೀಗ ನಟನ ಮತ್ತೊಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅದು ನಟನ ಫ್ಯಾಮಿಲಿ ಫೋಟೋ ಅಲ್ಲ, ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಅನಿಮಲ್ ಸೆಟ್​ನಿಂದ ವೈರಲ್​ ಆದ ಫೋಟೋ. ಈ ವೈರಲ್ ಚಿತ್ರದಲ್ಲಿ, ರಣ್​​ಬೀರ್ ಕಪೂರ್ ನೀಲಿ ಸೂಟ್​​ನಲ್ಲಿ ಕಾಣಿಸಿಕೊಂಡಿದ್ದು, ರಗಡ್​ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ.

'ಅನಿಮಲ್' ಸಿನಿಮಾ ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿ ಐದು ಭಾಷೆಗಳಲ್ಲಿ ದೇಶಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ. ರಣ್​ಬೀರ್​, ರಶ್ಮಿಕಾ ಅಲ್ಲದೇ ಅನಿಲ್ ಕಪೂರ್, ಬಾಬಿ ಡಿಯೋಲ್ ಸಹ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ಡಿಯೋಲ್ 'ಗದರ್ 2' ಮತ್ತು ಅಕ್ಷಯ್ ಕುಮಾರ್ ಅವರ 'OMG 2' ಸಹ ಆಗಸ್ಟ್​ ಆಸುಪಾಸಿನಲ್ಲಿ ಬಿಡುಗಡೆ ಆಗಲಿದೆ. ಈ ಮೂರು ಸಿನಿಮಾ ಒಟ್ಟೊಟ್ಟಿಗೆ ತೆರೆ ಕಾಣೋದ್ರಿಂದ ಸ್ಪರ್ಧೆ ನಡೆಸಲಿದ್ದು, ಬಾಕ್ಸ್​ ಆಫೀಸ್​ ಕಲೆಕ್ಷನ್​ ಸಂಖ್ಯೆ ಮೇಲೆ ಪ್ರಭಾವ ಬೀರಲಿದೆ. ಈ ಅನಿಮಲ್ ಚಿತ್ರಕ್ಕೆ ಭೂಷಣ್ ಕುಮಾರ್, ಕ್ರಿಶನ್ ಕುಮಾರ್ ಅವರ ಟಿ ಸೀರೀಸ್, ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್, ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ಬಂಡವಾಳ ಹೂಡಿದೆ.

ಇದನ್ನೂ ಓದಿ:Oscar Members: ರಾಮ್ ಚರಣ್, ಜೂ. ಎನ್​ಟಿಆರ್​ ಸೇರಿ ಹಲವು ಭಾರತೀಯರಿಗೆ ಸಿಕ್ತು ಆಸ್ಕರ್​ ಸದಸ್ಯತ್ವ

ರಣ್​​​ಬೀರ್ ಕೊನೆಯದಾಗಿ 'ತು ಜೂಟಿ ಮೆ ಮಕ್ಕರ್' ಸಿನಿಮಾದಲ್ಲಿ ನಟಿಸಿದ್ದಾರೆ. ಮಾರ್ಚ್ 8ರಂದು ತೆರೆಕಂಡ ಈ ಸಿನಿಮಾವನ್ನು ಲವ್ ರಂಜನ್ ನಿರ್ದೇಶಿಸಿದ್ದು, ಪ್ರೇಕ್ಷಕರಿಮದ ಮೆಚ್ಚುಗೆ ಸಂಪಾದಿಸಿತು. ಅದಕ್ಕೂ ಹಿಂದಿನ ಬ್ರಹ್ಮಾಸ್ತ್ರ ಸಿನಿಮಾ ಕೂಡ ಹಿಟ್​ ಆಗಿದೆ. ಮುಂದಿನ ಅನಿಮಲ್​ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ.

ಇದನ್ನೂ ಓದಿ:Satyaprem Ki Katha: ತೆರೆ ಮೇಲಿನ ಕಾರ್ತಿಕ್ ಕಿಯಾರಾ ಪ್ರೇಮಕಥೆಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿದೆ!

ABOUT THE AUTHOR

...view details