ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಭಗವಾನ್ ರಾಮನ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ರಣ್‌ಬೀರ್ ಕಪೂರ್, ಸೀತಾದೇವಿ ಪಾತ್ರದಲ್ಲಿ ಸೌತ್ ಸಿನಿಮಾ ಸುಂದರಿ ಸಾಯಿ ಪಲ್ಲವಿ, ರಾವಣನ ಪಾತ್ರದಲ್ಲಿ ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ.
ಇತ್ತೀಚಿನ ವರದಿಗಳ ಪ್ರಕಾರ, ಭಗವಾನ್ ಶ್ರೀರಾಮನ ಪಾತ್ರಕ್ಕಾಗಿ ಶುದ್ಧತೆಯನ್ನು ಅನುಸರಿಸಲು ರಣ್‌ಬೀರ್ ಮದ್ಯ, ಮಾಂಸ ತ್ಯಜಿಸಲು ಸಿದ್ಧರಾಗಿದ್ದಾರಂತೆ. ಮತ್ತೊಂದೆಡೆ ಇಡೀ ಚಿತ್ರತಂಡ ಸಿನಿಮಾಗಾಗಿ ಸಾಕಷ್ಟು ತಯಾರಿ ನಡೆಸುತ್ತಿದೆ. ಮಾರ್ಗದರ್ಶನಗಳನ್ನೂ ಪಡೆಯುತ್ತಿದೆ ಎಂದು ಕೂಡ ಹೇಳಲಾಗಿದೆ.
2024ರ ಫೆಬ್ರವರಿಯಲ್ಲಿ ಸೆಟ್ಟೇರಲಿದೆ ಸಿನಿಮಾ: ಮದ್ಯ ಮತ್ತು ಮಾಂಸವನ್ನು ತ್ಯಜಿಸುವ ರಣ್‌ಬೀರ್ ಕಪೂರ್ ನಿರ್ಧಾರವು ಆರೋಗ್ಯ ಕಾಳಜಿ ಅಥವಾ ಪಬ್ಲಿಕ್ ಇಮೇಜ್ ಹಿನ್ನೆಲೆಯಿಂದ ಪ್ರೇರೇಪಿಸಲ್ಪಟ್ಟಿಲ್ಲ. ಭಗವಾನ್ ಶ್ರೀರಾಮನ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬುವ ಜವಾಬ್ದಾರಿಗಾಗಿ ನಟ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂದಿನ ಫೆಬ್ರವರಿಯಲ್ಲಿ ರಾಮಾಯಣ ಸೆಟ್ಟೇರಲಿದೆ. ಸಿನಿಮಾ ಎರಡು ಭಾಗಗಳಲ್ಲಿ ನಿರ್ಮಾಣಗೊಳ್ಳಲಿದೆ. ಮೊದಲ ಭಾಗ ರಾಮ ಮತ್ತು ಸೀತೆಯ ಕಥೆಯನ್ನು ಒಳಗೊಂಡಿರುತ್ತದೆ. ಚಿತ್ರದ ವಿಎಫ್ಎಕ್ಸ್ ಕೆಲಸಕ್ಕಾಗಿ ಆಸ್ಕರ್ ವಿಜೇತ ಸಂಸ್ಥೆ DNEG ಜೊತೆ ಕೈಜೋಡಿಸಲಾಗಿದೆ.
ಬಿಡುಗಡೆಗೆ ಸಜ್ಜಾದ 'ಅನಿಮಲ್': ರಣ್‌ಬೀರ್ ಕಪೂರ್ ಸದ್ಯ ತಮ್ಮ ಮುಂದಿನ ಸಿನಿಮಾ ಅನಿಮಲ್ ಬಿಡುಗಡೆಗೆ ಸಜ್ಜಾಗಿದ್ದಾರೆ. ಪ್ರಚಾರ ಕಾರ್ಯ ಆರಂಭಗೊಂಡಿದ್ದು, ನಾಳೆ ರಶ್ಮಿಕಾ ಮಂದಣ್ಣ ಅವರನ್ನೊಳಗೊಂಡ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಲಿದೆ. ಭೂಷಣ್ ಕುಮಾರ್ ಬಂಡವಾಳ ಹೂಡಿದ್ದಾರೆ. ಕಬೀರ್ ಸಿಂಗ್ ಮತ್ತು ಅರ್ಜುನ್ ರೆಡ್ಡಿಯಂತಹ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶನಕ್ಕೆ ಹೆಸರುವಾಸಿಯಾಗಿರುವ ಸಂದೀಪ್ ರೆಡ್ಡಿ ವಂಗಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅನಿಲ್ ಕಪೂರ್, ಬಾಬಿ ಡಿಯೋಲ್ ಪ್ರಮುಖ ಪಾತ್ರ ವಹಿಸಿದ್ದು, ಡಿಸೆಂಬರ್ 1ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.
ಇದನ್ನೂ ಓದಿ:ಅ. 20ಕ್ಕೆ 'ಗಣಪತ್' ಬಿಡುಗಡೆ: ಆ್ಯಕ್ಷನ್ ಸಿನಿಮಾದ ಕನ್ನಡ ಟ್ರೇಲರ್ ನೋಡಿದ್ರಾ?
ಬಾಕ್ಸ್ ಆಫೀಸ್ ಫೈಟ್:ಸನ್ನಿ ಡಿಯೋಲ್ ಮುಖ್ಯಭೂಮಿಕೆಯ ಗದರ್ 2 ಮತ್ತು ಅಕ್ಷಯ್ ಕುಮಾರ್ ಅಭಿನಯದ ಓ ಮೈ ಗಾಡ್ ಸಿನಿಮಾದೊಂದಿಗಿನ ಫೈಟ್ ತಪ್ಪಿಸಲು ಅನಿಮಲ್ ಬಿಡುಗಡೆ ದಿನಾಂಕವನ್ನು ಆಗಸ್ಟ್‌ನಿಂದ ಡಿಸೆಂಬರ್‌ಗೆ ಮುಂದೂಡಲಾಯಿತು. ಆದಾಗ್ಯೂ, ಅನಿಮಲ್ ಸಿನಿಮಾ ವಿಕ್ಕಿ ಕೌಶಲ್ ಅವರ ಮುಂಬರುವ ಚಿತ್ರ ಸ್ಯಾಮ್ ಬಹದ್ದೂರ್‌ನೊಂದಿಗೆ ಪೈಪೋಟಿ ನಡೆಸಲಿದೆ. ಡಿಸೆಂಬರ್ನಲ್ಲಿ ದೊಡ್ಡ ಮಟ್ಟದ ಬಾಕ್ಸ್ ಆಫೀಸ್ ಫೈಟ್ ನಡೆಯಲಿದೆ. ಏಕೆಂದರೆ ತಿಂಗಳ ಆರಂಭದಿಂದ ಹಿಡಿದು ಕೊನೆವರೆಗೂ ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆ ಆಗಲಿವೆ. ಬೆರಳೆಣಿಕೆ ದಿನಗಳ ಅಂತರದಲ್ಲಿ ಹಲವು ಸಿನಿಮಾಗಳು ತೆರೆಗಪ್ಪಳಿಸಲಿದ್ದು, ಪ್ರೇಕ್ಷಕ ಪ್ರಭುಗಳು ಯಾವ ಚಿತ್ರಕ್ಕೆ ಮಣೆ ಹಾಕುತ್ತಾರೆಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಎಸ್‌ಎಸ್ ರಾಜಮೌಳಿ ಜನ್ಮದಿನ: ದೂರದೃಷ್ಟಿಯ ನಿರ್ದೇಶಕರಿಂದ ಹೆಣೆಯಲ್ಪಟ್ಟ ಅತ್ಯುತ್ತಮ ಖಳನಾಯಕ ಪಾತ್ರಗಳಿವು!