ಮುಂಬೈ: ಬಾಲಿವುಡ್ ನಟ ರಣ್ಬೀರ್ ಕಪೂರ್ ಗುರುವಾರ ರಾತ್ರಿ ಮುಂಬೈನಲ್ಲಿ ನಡೆದ ಸ್ಟಾರ್ - ಸ್ಟಡ್ ಸಮಾರಂಭದಲ್ಲಿ ತಮ್ಮ ಆಪ್ತ ಸ್ನೇಹಿತ ಆದಿತ್ಯ ರಾಯ್ ಕಪೂರ್ ಭೇಟಿ ಮಾಡಿ ಅವರೊಂದಿಗೆ ಆಹ್ಲಾದಕರ ಸಮಯ ಕಳೆದರು.
ಕಾರ್ಯಕ್ರಮದಲ್ಲಿ ಆದಿತ್ಯನನ್ನು ನೋಡಿದ ನಂತರ ರಣ್ಬೀರ್ ಸಂತೋಷದಿಂದ ಅವರತ್ತ ಹೋಗಿ ತಬ್ಬಿಕೊಂಡರು. ಬಳಿಕ ಇಬ್ಬರು ಫೋಟೋಗಳಿಗೆ ಪೋಸ್ ನೀಡಿದರು. ಇದೇ ವೇಳೆ, ನಟ ರಣ್ಬೀರ್ ಕಪೂರ್ ಆದಿತ್ಯ ಕೆನ್ನೆಗೆ ಮುತ್ತು ನೀಡಿದ್ದು ಇವರಿಬ್ಬರ ಭೇಟಿಯ ಹೈಲೈಟ್ ಆಗಿತ್ತು.
ಆದಿತ್ಯ ರಾಯ್ ಕೆನ್ನೆಗೆ ಮುತ್ತಿಟ್ಟ ರಣ್ಬೀರ್ ಕಪೂರ್ 2013ರಲ್ಲಿ ಬಿಡುಗಡೆಯಾದ 'ಯೇ ಜವಾನಿ ಹೈ ದೀವಾನಿ' ಚಿತ್ರದಲ್ಲಿ ರಣಬೀರ್ ಮತ್ತು ಆದಿತ್ಯ ಒಟ್ಟಿಗೆ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಇಬ್ಬರು ನಟರೂ ಬ್ಯೂಸಿಯಿದ್ದು, ರಣ್ಬೀರ್ ನಟಿ ವಾಣಿ ಕಪೂರ್ ಜೊತೆಗಿನ 'ಶಂಶೇರಾ' ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ, ಆದಿತ್ಯ ಕಪಿಲ್ ವರ್ಮಾ ನಿರ್ದೇಶನದ 'ಓಂ: ದಿ ಬ್ಯಾಟಲ್ ವಿಥಿನ್' ನಲ್ಲಿ ಆ್ಯಕ್ಷನ್ ಪ್ಯಾಕ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 'ಶಂಶೇರಾ' ಚಿತ್ರ ಇದೇ ಜುಲೈ 22 ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ:National Nude Day 2022; ಕ್ಯಾಮರಾ ಮುಂದೆ ನಗ್ನರಾದ ಬಾಲಿವುಡ್ನ 'ಬೋಲ್ಡ್' ಸುಂದರಿಯರಿವರು