ಕರ್ನಾಟಕ

karnataka

ETV Bharat / entertainment

'ಬ್ರಹ್ಮಾಸ್ತ್ರ ಚಿತ್ರಕ್ಕಾಗಿ ಯಾವುದೇ ಸಂಭಾವನೆ ಪಡೆದಿಲ್ಲ': ಸ್ಪಷ್ಟನೆ ನೀಡಿದ ರಣಬೀರ್​ ಕಪೂರ್​ - ಈಟಿವಿ ಭಾರತ ಕರ್ನಾಟಕ

ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟನೆ ಮಾಡಿ ಯಶಸ್ಸು ಕಂಡಿರುವ ರಣಬೀರ್ ಕಪೂರ್​​​ ಯಾವುದೇ ರೀತಿಯ ಸಂಭಾವನೆ ಪಡೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Ranbir Kapoor
Ranbir Kapoor

By

Published : Sep 23, 2022, 1:54 PM IST

ಮುಂಬೈ: ಅನೇಕ ಟೀಕೆ - ಟಿಪ್ಪಣಿ, ವಿರೋಧಗಳ ಮಧ್ಯೆ ಬಾಲಿವುಡ್​ನ ಬಹುನಿರೀಕ್ಷಿತ ಚಿತ್ರ ಬ್ರಹ್ಮಾಸ್ತ್ರ ಈಗಾಗಲೇ 360 ಕೋಟಿ ರೂ. ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಬೂಸ್ಟರ್​ ಡೋಸ್​ ನೀಡಿದೆ. ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟನೆ ಮಾಡಿರುವ ರಣವೀರ್​ ಕಪೂರ್​​ ಯಾವುದೇ ಸಂಭಾವನೆ ಪಡೆದುಕೊಂಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ಬ್ರಹ್ಮಾಸ್ತ್ರ ಚಿತ್ರದಲ್ಲಿ ರಣಬೀರ್​-ಆಲಿಯಾ ಜೋಡಿ

ಬರೋಬ್ಬರಿ 400 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣಗೊಂಡಿದ್ದು, ಚಿತ್ರ ಹೇಳಿಕೊಳ್ಳುವಷ್ಟು ಸರಿಯಾಗಿ ಮೂಡಿ ಬಂದಿಲ್ಲ. ಗ್ರಾಫಿಕ್ಸ್​ ಸರಿಯಾಗಿಲ್ಲ ಎಂಬ ಮಾತು ಕೇಳಿ ಬಂದಿದ್ದವು. ಇದೆಲ್ಲರ ನಡುವೆ ಉತ್ತಮ ಪ್ರದರ್ಶನ ಕಾಣುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ:300 ಕೋಟಿ ಗಳಿಸಿದ ಬ್ರಹ್ಮಾಸ್ತ್ರ ಸಿನಿಮಾ.. ಸುಳ್ಳಿನ ಹರಡುವಿಕೆಗೂ ಮಿತಿ ಇದೆ ಎಂದ ನೆಟಿಜನ್​ಗಳು

ಕಳೆದ ನಾಲ್ಕೈದು ವರ್ಷಗಳಿಂದ ಈ ಚಿತ್ರದ ಕೆಲಸ ನಡೆಯುತ್ತಿತ್ತು. ಬೇರೆ ಯಾವುದೇ ಸಿನಿಮಾದಲ್ಲಿ ಭಾಗಿಯಾಗದ ರಣವೀರ್​ ಕೇವಲ ಬ್ರಹ್ಮಾಸ್ತ್ರ ಚಿತ್ರಕ್ಕಾಗಿ ತಮ್ಮ ಸಮಯ ಮೀಸಲಿಟ್ಟಿದ್ದರು. ಹೀಗಾಗಿ, ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆಂದು ಎಲ್ಲರೂ ಅಂದುಕೊಳ್ಳಲು ಶುರು ಮಾಡಿದ್ದರು. ಜೊತೆಗೆ ಆಲಿಯಾ ಭಟ್​ ಕೂಡ ಕೋಟಿ ಕೋಟಿ ಹಣ ಪಡೆದುಕೊಂಡಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.

ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮಾತನಾಡಿರುವ ನಟ ರಣವೀರ್​, ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟನೆ ಮಾಡಿರುವ ನಾನು ಯಾವುದೇ ರೀತಿಯ ಸಂಭಾವನೆ ಪಡೆದುಕೊಂಡಿಲ್ಲ. ಈ ಚಿತ್ರದ ಒಂದು ಭಾಗ ನಾನಾಗಿರುವೆ. ಜೊತೆಗೆ ನಿರ್ಮಾಣ ಮಾಡಿರುವೆ ಎಂದು ತಿಳಿಸಿದ್ದಾರೆ. ಬ್ರಹ್ಮಾಸ್ತ್ರ ಚಿತ್ರ ಸೆಪ್ಟೆಂಬರ್​ 9ರಂದು ದೇಶಾದ್ಯಂತ ರಿಲೀಸ್​​ ಆಗಿದ್ದು, ಯಶಸ್ವಿ ಪ್ರದರ್ಶನ ಕಂಡಿದೆ.

ABOUT THE AUTHOR

...view details