ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಚಿತ್ರ 'ಅನಿಮಲ್' ಬಾಕ್ಸ್ ಆಫೀಸ್ನಲ್ಲಿ ತನ್ನ ನಾಗಾಲೋಟ ಮುಂದುವರೆಸಿದ್ದು, 'ಅನಿಮಲ್' ಸಿನಿಮಾ ದೇಶಿಯ ಗಲ್ಲಾ ಪೆಟ್ಟಿಯಲ್ಲಿ 432.37 ಕೋಟಿಯನ್ನು ಇಲ್ಲಿಯವರೆಗೆ ಗಳಿಸುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿಯೂ ತನ್ನ ಅಬ್ಬರವನ್ನು ಮುಂದುವರೆಸಿದೆ. ಹಿಂಸಾತ್ಮಕ ವಿಷಯ, ಸ್ತ್ರೀ ದ್ವೇಷದ ಧ್ಯೇಯ ಎಂಬ ಟೀಕೆಗಳ ಹೊರತಾಗಿ ಸಿನಿಮಾವೂ ಜಾಗತಿಕವಾಗಿ 700 ಕೋಟಿ ಹಣ ಸಂಪಾದಿಸಿದೆ.
'ಟಿ ಸೀರಿಸ್ ಫಿಲ್ಮ್ಸ್'ನಲ್ಲಿ ನಿರ್ಮಾಣ ಬ್ಯಾನರ್ನಲ್ಲಿ 'ಅನಿಮಲ್' ಚಿತ್ರ ಮೂಡಿ ಬಂದಿದ್ದು, ಸೋಮವಾರ ಅಂದರೆ ಚಿತ್ರ ಬಿಡುಗಡೆಗೊಂಡ 10 ನೇ ದಿನದ ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಹಿತಿಯನ್ನು ಹಂಚಿಕೊಂಡಿದೆ. ಅದರ ಅನುಸಾರ ಜಾಗತಿಕವಾಗಿ ಚಿತ್ರವೂ 717.46 ಕೋಟಿಯನ್ನು ಸಂಪಾದಿಸಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ತಿಳಿಸಿದೆ. ಸಿನಿಮಾವೂ ರೆಕಾರ್ಡ್ಗಳನ್ನು ಮಾಡುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುತ್ತಿದೆ ಎಂದಿದ್ದಾರೆ.
ಚಿತ್ರದ ಎರಡನೇ ವಾರದ ಗಳಿಕೆಯನ್ನು ಈ ಮುಂಚೆ ಹಂಚಿಕೊಳ್ಳಲಾಗಿತ್ತು. ಎರಡನೇ ವಾರದಲ್ಲಿ ಹಿಂದಿ ವರ್ಷನ್ನಲ್ಲಿ ಚಿತ್ರವೂ ಭಾರತದಲ್ಲಿ 87.56 ಕೋಟಿ ಸಂಪಾದಿಸುವ ಮೂಲಕ ದೊಡ್ಡ ಹಿಟ್ ನೀಡುತ್ತಾ ಮುಂದುವರೆದಿದೆ. ಎರಡನೇ ಶುಕ್ರವಾರದಂದು ಚಿತ್ರವೂ 22.59 ಕೋಟಿ ಗಳಿಕೆ ಮಾಡಿದರೆ, ಶನಿವಾರ 34.74 ಕೋಟಿ ಮತ್ತು ಶನಿವಾರ ಎಲ್ಲಾ ಭಾಷೆಗಳಲ್ಲಿ ನಿವ್ಹಳ ಲಾಭ 36 ಕೋಟಿ ಎಂದು ತೋರಿಸಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಹೊಸ ಅವತಾರದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದ್ದಾರೆ.
'ಅನಿಮಲ್' ಚಿತ್ರವೂ ಸದ್ಯ ಬಾಲಿವುಡ್ನ ಭರ್ಜರಿ ಪ್ರದರ್ಶನ ಕಾಣುತ್ತಿರುವ ಚಿತ್ರವಾಗಿದ್ದು, ನಟ ರಣಬೀರ್ ಕಪೂರ್ ಅವರಿಗೆ ಅತ್ಯಂತ ಬಿಗ್ ಹಿಟ್ ನೀಡಿದ ಸಿನಿಮಾ ಆಗಿದೆ. ಅಲ್ಲದೇ ರಣಬೀರ್ ಅವರ 'ಸಂಜು' ಚಿತ್ರದ ದಾಖಲೆಯನ್ನು ಇದು ಧೂಳಿಪಟ ಮಾಡಿದೆ. ಕ್ರಿಸ್ಮಸ್ನಲ್ಲಿ ದೊಡ್ಡ ದೊಡ್ಡ ಹೊಸ ಚಿತ್ರ ಬಿಡುಗಡೆ ಆಗುವವರೆಗೂ 'ಅನಿಮಲ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಶಸ್ವಿ ಪ್ರದರ್ಶನ ಕಾಣಲಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ನಡೆಸಿದ್ದಾರೆ. ಕ್ರಿಸ್ಮಸ್ಗೆ ನಟ ಶಾರುಖ್ಖಾನ್ ಅಭಿನಯದ 'ಡಂಕಿ' ಸಿನಿಮಾ ಮತ್ತು ಮೋಹನ್ಲಾಲ್ ಅಭಿನಯದ 'ನೆರು' ಚಿತ್ರ ಡಿಸೆಂಬರ್ 21ಕ್ಕೆ ಬಿಡುಗಡೆಯಾಗಲಿದೆ. ಅಲ್ಲದೇ ಡಿಸೆಂಬರ್ 22ಕ್ಕೆ ಪ್ರಭಾಸ್ ನಟನೆಯ 'ಸಲಾರ್' ಚಿತ್ರ ಕೂಡ ತೆರೆಗೆ ಬರಲು ಸಜ್ಜಾಗಿದೆ.
ಇದನ್ನೂ ಓದಿ: ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ₹400 ಕೋಟಿ ಸಮೀಪಿಸಿದ 'ಅನಿಮಲ್'